ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ೫೯ ನವು ಹುಟ್ಟಿ ಹಿಂದುಗಳ ನಾಗರಿಕತೆಯೆಂಬ ನಿರ್ಮಲವಾದ ಕನ್ನಡಿಯಲ್ಲಿ ಹತ್ತಿಕೊಂಡಿದ್ದ ವಿಕಾರಕಳಂಕವನ್ನು ಅಳಿಸಿಬಿಟ್ಟಿತು. ಈ ಕಾನೂನನ್ನು ಪ್ರಸಿದ್ದಿ ಪಡಿಸುವುದಕ್ಕೆ ಮುಂಚೆ ರಾಜಪ್ರತಿನಿಧಿಯು ರಾಮ ಮೋಹನನೊಂದಿಗೆ ಈ ವಿಷಯವಾಗಿ ಮಾತನಾಡಬೇಕೆಂದು ಯೋಚಿಸಿ ಆತನನ್ನು ಕರೆಯ ಕಳುಹಿದನು, ರಾಮಮೋಹನನು ಆ ಕರೆಯಬಂದವನ ಸಂಗಡ “ನಾನು ವೃತ್ತಿಯನ್ನು ಬಿಟ್ಟು, ನನ್ನ ಜೀವಿತಕಾಲವನ್ನು ಧರ್ಮಶಾಸ್ತ್ರಗಳಿಗೆ ಸಂಬಂಧಿಸಿದ ಕೆಲಸಗಳಲ್ಲಿಯೇ ಕಳೆಯುತ್ತಿರುವೆನು, ಈ ಸ್ಥಿತಿಯಲ್ಲಿರುವ ನಾನು ರಾಜಸಭೆಗೆ ಬರಲಾರೆನು. ಕ್ಷಮಿಸ ಬೇಕೆಂದು ಪ್ರಾರ್ಥಿಸಿದೆನೆಂಬದಾಗಿ ನನ್ನ ಮನವಿಯನ್ನು ಶ್ರುತಪಡಿಸತಕ್ಕುದು' ಎಂದು ಹೇಳಿದನು. ಅವನು ಹಾಗೆಯೇ ಬಿನ್ನವಿಸಲು ನೀನು ಹೇಗೆ ಕರೆದೆಯೋ ಹೇಳು' ಎಂದು ರಾಜಪ್ರತಿನಿಧಿಯು ಕೇಳಿದನು, ಅದಕ್ಕೆ ಆ ಪ್ರಮುಖನು ಗೌರರ್ ಜನರಲ್ ಆದ ಲಾರ್ಡ್ ವಿಲ್ಲಿಯಂ ಬೆಂಟಿಂಕ್‌ರವರು ನಿಮ್ಮನ್ನು ಒಂದು ಸಾರಿ ಬರಬೇಕೆಂದು ಅಪೇಕ್ಷಿಸಿರು ವರು,” ಎಂದು ಹೇಳಿದೆನೆಂದು ಹೇಳಿದನು. ಅದಕ್ಕೆ ಹಾಗಲ್ಲ : ವಿಲ್ಲಿಯಂ ಬೆಂಟಿಂಕನು ದಯಮಾಡಿ ಒಂದು ಸಾರಿ ಬರಬೇಕೆಂದು ನಿಮ್ಮನ್ನು ಪ್ರಾರ್ಥಿಸುತ್ತಾನೆ' ಎಂದು ಹೇಳ ಬೇಕೆಂದು ಮರಳಿ ಕಳುಹಿಸಿದನು. ರಾಮಮೋಹನನು ಆ ದಯಾಳುವು ಕರೆದುದಕ್ಕೆ ಬಹು ಸಂತೋಷಗೊಂಡು ಒಡನೆಯೇ ಹೊರಟು ಅಲ್ಲಿಗೆ ಹೋಗಿ ರಾಜಪ್ರತಿನಿಧಿಯನ್ನು ಕಂಡು ಬಹಳ ಹೊತ್ತು ಆತನ ಸಂಗಡ ಮಾತನಾಡುತ್ತಿದ್ದನು. ಈ ಪವಿತ್ರ ಸಂಭಾಷಣೆಯ ಪರ್ಯ ವಸಾನವು ಯಾವುದೆಂದರೆ ನಮ್ಮ ದೇಶೀಯರು ಎಂದೆಂದಿಗೂ ಮರೆಯದೆ ಕೃತಜ್ಞರಾಗಿರುವ ಸತ್ಸಲವು ದೊರಕಿದುದೇ. - ಸಹಗಮನವನ್ನು ನಿಷೇಧಿಸುವ ಶಾಸನವು ಪ್ರಕಟಿಸಲ್ಪಟ್ಟ ಕೂಡಲೆ ಕಲ್ಕತ್ತಾ ದೇ ಶೀಯ ಸಂಘದಲ್ಲಿ ಪ್ರಮುಖರಾದವರು, ನಾಮದಾರರು, ಶ್ರೀಮಂತರು ಒಟ್ಟಾಗಿ ಸೇರಿ ಒಂದೇಸಾರಿ ಅಲ್ಲಕಲ್ಲೋಲ ಮಾಡಿದರು. ಈ ಶಾಸನವು ಏನೇನೋ ಮಾಡಬೇಕೆಂದು ಯತ್ನಿ ಸುತ್ತಿದ್ದ ಧರ್ಮಸಮಾಜದ ಸಭಿಕರಮೇಲೆ ಸಿಡಿಲಿನಂತೆ ಬಿತ್ತು, ಇನ್ನೇನಿದೆ ? ಅನ್ಯಾಯಕ್ಕೆ ಆಡುಂಬೊಲವಾದ ಘೋರ ಕಲಿಯುಗವು ಬಂದು ತನ್ನ ಬಲವನ್ನು ತೋರುತ್ತಲಿದೆ ಎಂಬ ವಾ ಕ್ಯಗಳೇ ಕೇಳಬರುತ್ತಲಿದ್ದುವು. ಇದಕ್ಕೆಲ್ಲಾ ರಾಮಮೋಹನನೇ ಕಾರಣನೆಂದು ನಿರ್ಣಯಿಸಿ ದರು. ನಾಲ್ಕು ಕಡೆಗಳಲ್ಲಿಯ ಜನರು ಈತನನ್ನು ಬಂಡವಾತುಗಳಿಂದ ಬೈಯತೊಡಗಿ ದರು. ಅವನನ್ನು ತಮ್ಮ ಸಂಘದಿಂದಲೇ ಬಹಿಷ್ಕರಿಸಿದರು. ಇಷ್ಟೇ ಅಲ್ಲ ? ಆಗಲಾ ಮಹಾತ್ಮನು ಪ್ರಾಣಾಪಾಯಕರವಾದ ದುಸ್ಥಿತಿಯಲ್ಲಿ ಕೂಡ ಇದ್ದನು, ರಾಮಮೋಹನನ ಸ್ನೇಹಿತರು ತಮ್ಮ ಸ್ಥಿತಿಯೂ ಸ್ವಲ್ಪ ಹೆಚ್ಚು ಕಡಿಮೆ ಅವನಂತೆಯೇ ಇದ್ದರೂ ರಾಮ ಮೋಹನನಿಗೆ ತುಂಬ ಎಚ್ಚರದಿಂದ ಎಚ್ಚರದಿಂದ ಇರಬೇಕೆಂತಲೂನಾಲ್ವರು ಭಟರನ್ನು ಸಂಗಡ ಇಟ್ಟು ಕೊಂಡು ತಿರುಗುವುದು ಉತ್ತಮವೆಂತಲೂ, ಆಲೋಚನೆ ಹೇಳಿದರು. ರಾಮ ಮೋಹನನು ನಿರ್ಭಯವಾಗಿ ಪಟ್ಟಣದ ಬೀದಿಗಳಲ್ಲಿ ಸಂಚರಿಸುತ್ತಲೇ ಇದ್ದನು, ಆದರೂ
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೬೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.