ಈ ಪುಟವನ್ನು ಪರಿಶೀಲಿಸಲಾಗಿಲ್ಲ.

& ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ಹಿದ ಇವರ ವಿಜ್ಞಾಪನೆಗಳನ್ನೂ ಅದರ ಪರವಸಾನವನ್ನೂ ಮುಂದೆ ನಮ್ಮ ವಾಚಕರು ತಿಳಿ ಯಬಲ್ಲರು. ರಾಜಾರಾಮಮೋಹನರಾಯನು ಹಿಂದೂ ಸ್ತ್ರೀ ಗಳ ವಿಷಯವಾಗಿ ಸಹಗಮನ ವನ್ನು ನಿಲ್ಲಿಸುವುದಕ್ಕೆ ಮಾತ್ರವಲ್ಲದೆ ಅವರಿಗೆ ಸಾವಾನ್ಯವಾಗಿ ಇದುವರೆಗೆ ಜರುಗುತ್ತಿರುವ ಇನ್ನೂ ಕೆಲವು ಲೋಪಗಳನ್ನು ಕುರಿತು 1822ನೆಯ ವರ್ಷದಲ್ಲಿ ಒಂದು ಪುಸ್ತಕವನ್ನು ಬರೆದು ಪ್ರಕಟಿಸಿದನು. ಇದರಲ್ಲಿ ಹಣದಾಸೆಯಿಂದ ಮುಕ್ಕಾಲಿನ ಮುದುಕನಿಗಾದರೂ ಸಣ್ಣ ಕನ್ನೆ ಯರನ್ನು ಕಟ್ಟುವ ಕನ್ಯಾ ಎಕ್ರಯವನ್ನೂ, ಒಬ್ಬ ಪುರುಷನು ಅನೇಕ ಹೆಂಡತಿಯ ರನ್ನು ಮದುವೆಯಾಗುವ ವಿಷಯವನ್ನೂ, ಪ್ರಕೃತದಲ್ಲಿ ಪತಿಯು ಸತ್ಯ ಕೂಡಲೇ ತನ್ನ ಹೊಟ್ಟೆ ಹೊರೆದುಕೊಳ್ಳುವುದಕ್ಕಾಗಿ ಮಕ್ಕಳನ್ನೂ ಸೊಸೆಯರನ್ನೂ ಆಶ್ರಯಿಸಬೇಕಾಗಿ ಬರುವ ಸ್ತ್ರೀಯರ ಕಷ್ಟಗಳನ್ನೂ ಕುತು ಹಲವು ದೃಷ್ಟಾಂತಗಳನ್ನು ಕೊಡುತ್ತಾ ಚರ್ಚಿಸಿ ಪ್ರತಿ ಪಕ್ಷದ ಕೆಲವರಿಂದ ಈ ಸ್ವಿಜ-ತಿಯರಮೇಲೆ ಆರೋಪಿಸಲ್ಪಡುವ ದೋಷಗಳನ್ನು ಉದಾ ಹರಿಸಿ ಯುಕ್ತವಾದ ಖಂಡನೆಗಳೊಂದಿಗೆ ತನ್ನ ಅಭಿಪ್ರಾಯಗಳನ್ನು ಬರೆದನು. ಅದನ್ನು ಸ್ವಲ್ಪಮಟ್ಟಿಗೆ ತಿಳಿಸುವುದು ಯುಕ್ತವಾದುದರಿಂದ ಇದರಡಿ ಸಂಗ್ರಹವಾಗಿ ಹೇಳುವೆವು. (1) ಹೆಂಗಸರಿಗೆ ಗಂಡಸರಿಗಿಂತ ಜ್ಞಾನವು ಕಡಿಮೆಯೆಂದು ಹೇಳುತ್ತಿರುವರು. ಅವರ ಜ್ಞಾನವು ಸ್ವಭಾವವಾಗಿ ಎಷ್ಟು ಮಟ್ಟಿಗೆ ಇದೆಯೆಂದು ತಿಳಿದುಕೊಳ್ಳಲು ಅವರ ಜ್ಞಾ ನಾಭಿವೃದ್ಧಿಗೆ ನಾವು ಯಾವಾಗ ಅವಕಾಶ ಕೊಟ್ಟಿರುವೆವು ? ಅವಕಾಶವನ್ನೇ ಕೊಡದೆ ಇರು ವಾಗ ಅವರಮೇಲೆ ಈ ಲೋಸಗ 'ನ್ನು ಹೇಗೆ ಹೊಸಬಹುದು ? ಯರಿಗೆ ಪೂರ್ಣ ವಾದ ವಿದ್ಯೆಯನ್ನು ಕಲಿಸದೆ ಚಿರಕಾಲದಿಂದ ಉಪೇಕ್ಷಿಸುತ್ತ ಬಂದಿರುವುದರಿಂದಲೇ ನಿಮ್ಮ ಅಭಿಪ್ರಾಯಾನುಸಾರ ಅವರ ಜ್ಞಾನವು ನೆಲ ಹತ್ತಿ ಹೋಗಿರುವುದು, ಲೀಲಾವತಿ, ಭಾನು ಮತಿ, ಕರ್ಣಾಟಕರಾಜನ ಹೆಂಡತಿ, ಕಾಳಿದಾಸನ ಹೆಂಡತಿ ಮೊದಲಾದ ಸ್ತ್ರೀ ರತ್ನಗಳು ವಿದ್ಯಾವತಿಯರಾಗಿ ಜ್ಞಾನಾಭಿವೃದ್ಧಿಯನ್ನು ಹೊಂದಿರಲಿಲ್ಲವೇ ? ಯಜುರ್ವೇದದ ಬೃಹದಾ ರಣ್ಯಕೋಪನಿಷತ್ತಿನಲ್ಲಿ ಯಜ್ಞವನು ಬಹುಕಷ್ಟ ತರವಾದ ಬ್ರಹ್ಮವಿದ್ಯೆಯನ್ನು ತನ್ನ ಪತ್ನಿ ಯಾದ ಮೈತ್ರೇಯಿ ಎಂಬಾಕೆಗೆ ಕಲಿಸಿದಹಾಗೆ ಹೇಳಲ್ಪಟ್ಟಿದೆ. ಸ್ತ್ರೀಯರು ವಿದ್ಯೆ ಯಿಂದ ಜ್ಞಾನಾಭಿವೃದ್ದಿಯನ್ನು ಹೊಂದದೆ ಇದ್ದಲ್ಲಿ ಅವರು ಇಂತಹ ಸಾಮಾನ್ಯ ಜನರಿಗೆ ದುರ್ಗ್ಯಾಕ್ಯವಾದ ವಿಷಯಗಳನ್ನು ತಿಳಿಯಲು ಹೇಗೆ ಸಾಧ್ಯವಾದೀತು ? ಆದುದರಿಂದ ಅವರ ಜ್ಞಾನಾಭಿವೃದ್ಧಿಗಾಗಿ ತಕ್ಕ ಸಾಧನೆಗಳನ್ನು ಏರ್ಪಡಿಸಬೇಕು. (2) ಅವರು ಸ್ವಾತಂತ್ರ ಪ್ರಿಯರೆಂದು ಹೇಳುವರು, ಆದರೆ ದುರಾಶಾಪೀಡಿತ ರೂ, ದುರಾಚಾರಪಿಶಾಚವಿಷ್ಯ ರೂ ಆಗ ದುರುಳರ ಉಪದೇಶಗಳಿಗೆ ಒಳಪಟ್ಟು ಈ ಲೋಕ ದಲ್ಲಿ ಎಲ್ಲಾ ವಸ್ತುಗಳಿಗಿಂತಲೂ ಪ್ರಿಯವಾದ ತಮ್ಮ ಪ್ರಾಣಗಳನ್ನೇ ಒಪ್ಪಿಸಲಿಕ್ಕೆ ಅಂಗೀಕರಿ ಸಿದ ಸ್ತ್ರೀಯರು ಮೃತರಾದ ತಮ್ಮ ಪತಿಗಳೊಂದಿಗೆ ಸುಟ್ಟು ಹೋಗುತ್ತಿರುವರು, ಮತ್ತು ಒಬ್ಬೊಬ್ಬ ಗಂಡಸು ಇಬ್ಬರು ಮೂವರು ಹೆಂಡತಿಯರನ್ನು ಮದುವೆಯಾಗಿ ಮನೆಯಲ್ಲಿ