ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ರಾಜಾರಾಮಮೋಹನರಾಯರಜೀವಿತ ಚರಿತ್ರೆ. ವನ್ನೂ ಕೂಡ ಬರೆದು ಮೊದಮೊದಲು ಬಾಲವಿತಂತುಗಳ ವಿವಾಹವು ಜರಗಬೇಕಾದುದು ಯುಕ್ತವೆಂದು ತನ್ನ ಅಭಿಪ್ರಾಯವನ್ನು ತಿಳಿಸಿರುವನೆಂತಲೂ, ಇಂಗ್ಲೆಂಡಿನಿಂದ ಮರಳಿ ಇಂ ಡಿಯಾಕ್ಕೆ ಬಂದ ಕೂಡಲೆ ವಿತಂತುವಿವಾಹದ ಪ್ರಯತ್ನಗಳನ್ನೂ ಆರಂಭಿಸುವೆನೆಂದು ಅವನು ತನ್ನ ಮಿತ್ರರೊಡನೆ ಹೇಳಿದ್ದನೆಂತ ಕೆಲವರು ಹೇಳುವರು, ಆದರೆ ಇದುವರೆಗೆ ನಮಗೆ ದೊರೆತಿರುವ ಈತನ ಗ್ರಂಧಗಳಲ್ಲಿ ಈ ವಿಷಯವನ್ನು ಕುರಿತು ವಿಸ್ತಾರವಾಗಿಯಾಗಲ, ಸಂ ಕ್ಷೇಪವಾಗಿಯಾಗಲಿ ಬರೆದ ವ್ಯಾಸಗಳು ಮೃಗಗಳಾಗಿರುವುವು. ನಮ್ಮ ದೇಶದಲ್ಲಿ ಎಲ್ಲಾ ಬಗೆಯ ಅಭಿವೃದ್ಧಿಗಳಿಗೂ ಅಡ್ಡಿ ತರುವುವುಗಳಲ್ಲಿ ಮುಖ್ಯವಾ ದುದು ಮತಛೇದವು. ಆದುದರಿಂದ ಆ ವಿಷಯದ ಸಂಸ್ಕಾರಗಳನ್ನು ರಾಮಮೋಹನನು ಮರೆತಿರಲಿಲ್ಲ. ಇದನ್ನು ಕುರಿತು ಆತನು ಒಂದು ಕಡೆ ಹೀಗೆ ಬರೆದಿರುವನು. ಸುಮಾರು ೯ ಶತಮಾನಗಳಿಂದ ನನ್ನನ್ನು ಇದು ವೇಧಿಸುತ್ತಲೇ ಇದೆ, ನಮ್ಮಲ್ಲಿ ಮತಭೇದಗಳು ದಿನೇ ದಿನೇ ಅಭಿವೃದ್ಧಿಯಾಗುತ್ತಲಿವೆ, ಒಬ್ಬೊಬ್ಬ ಬುದ್ದಿವಂತನು ಹುಟ್ಟಿದಾಗ ಒಂದೊಂ ದು ಮತಕ್ಕೆ ಅನೇಕ ಶಾಖೆಗಳು ಏರ್ಪಡುತ್ತಲಿವೆ. ಇಲ್ಲಿ ಈಗ 1,000 ಕ್ಕಿಂತ ಹೆಚ್ಚಿನ ಮತಗಳಿವೆ, ಪ್ರಜೆಗಳೆಲ್ಲರೂ ಸ್ವಮತಾಭಿಮಾನದಿಂದ ಪರಸ್ಪರ ಹಗೆತನ ಮಾಡುವುದರಿಂದ ಒಬ್ಬರನ್ನೊಬ್ಬರು ಪ್ರೀತಿಸದೆ ಇದ್ದಾರೆ. ಆದುದರಿಂದ ನಮ್ಮಲ್ಲಿ ಐಕಮತ್ಯವು ಲುಪ್ತ ವಾಯಿತು, ಮತದಲ್ಲಿ ನಾಗರಿಕತೆ ಬೆಳೆಯುತ್ತಾ ಬಂದಾಗೆಲ್ಲಾ ವಿಷಜಂತುಗುಳಾದ ಹಾವು, ಚೇಳು, ಮುಂತಾದುವನ್ನು ಕೊಲ್ಲುವುದು ಸುವಾ ಪಾಸವಾಗಿ ಎಣಿಸಲ್ಪಡವದ ಇದೆ ಅವುಗಳನ್ನೂ ಭಗವಂತನ ಅವತಾರಗಳಾಗಿ ಪೂಜಿಸುವ ಯೋಗ್ಯತೆ ಕೂಡ ಬಂದಿದೆ. ಇಷ್ಟಲ್ಲದೆ ಈತನು ಸಂಸ್ಕೃತ ಭಾಷೆಯಲ್ಲಿ ಮೃತ್ಯುಂಜಯಾಚಾರ್ಯರೆಂಬ ಪಂಡಿ ತುಂದ ಮತಭೇದವನ್ನು ಕುರಿತು ಬರೆಯಲ್ಪಟ್ಟಿರುವ ವಜ್ರಸೂಚಿಯೆಂಬ ಪುಸ್ತಕವನ್ನು ಆಧಾರವಾಗಿಟ್ಟು ಕೊಂಡು ಬಹುಮತಗಳಿಂದ ಉಂಟಾಗುವ ಅನರ್ಥಗಳನ್ನು ವಿವರಿಸುವ ಪ್ರಧವಾಧ್ಯಾಯವನ್ನು ಭಾಷಾಂತರವಾಡಿ ಪ್ರಧಮ ನಿರ್ಣಯವೆಂಬ ಹಸುನಿಂದ ಪ್ರಕ ಟಿಸಿದನು. ಆದರೆ ಪ್ರತ್ಯಕ್ಷ ಸಾದೃಶ್ಯ ಹೊಂದಿರುವಾಗ ನಾವು ಇವನ ಅಭಿಪ್ರಾಯಗ ಳನ್ನು ತಿಳಿದುಕೊಳ್ಳುವುದಕ್ಕಾಗಿ ಗ್ರಂಥಗಳನ್ನು ಶೋಧಿಸಬೇಕಾದ ಅಗತ್ಯವೇ ಇಲ್ಲ, ರಾಮ ಮೋಹನನು ಮತಬೇದಗಳನ್ನು ಆದರಿಸದೆ ಇರುವುದಕ್ಕೆ ಅವನಿಂದ ಸ್ಥಾಪಿಸಲ್ಪಟ್ಟ ಬ್ರಹ ಮಂದಿರದಲ್ಲಿ ಉಪಾಸನಾ ಕಾಲದಲ್ಲಿ ಬ್ರಾಹ್ಮಣರು, ಶೂದ್ರರು, ಮೈಕ್ಷರು, ಮೊದಲಾದ ಎಲ್ಲಾ ಜಾತಿಗಳವರೂ ಸಮಾನಾಧಿಕಾರದಿಂದ ಕಲಿತು ಧ್ಯಾನಿಸ ಬಹುದು ಎಂದು ನಿರ್ಣಯಿಸಿ ರುವುದೇ ಪ್ರಬಲವಾದ ಸಾಕ್ಷ್ಯವು, ಮತ್ತು ಸಮುದ್ರಯಾನ ಮಾಡುವುದು ಅವನಿಗೆ ಸಮ್ಮತವೆಂಬುದಕ್ಕೆ ತಾನು ಸ್ವತಃ ಸಮುದ್ರಯಾನ ಮಾಡಿದುದೇ ನಿದರ್ಶನವು, ಬ್ರಿಟಿಷಿ ನವರ ಪಾಲನೆಯಿಂದುಂಟಾದ ಲಾಭಗಳೆಲ್ಲಕ್ಕಿಂತಲೂ ಹಿಂದೂಗಳೆಲ್ಲರೂ ಅವರಲ್ಲಿ ಕೃತಜ್ಞತೆ ಯುಳ್ಳವರಾಗಿರುವಂತೆ ಮಾಡಿದುದೂ, ಇನ್ನೂ ಕೃತಜ್ಞರಾಗಿರುವಂತೆ ಮಾಡುವುದೂ ಆದ ಲಾಭವು ಪಾಶ್ಚಾತ್ಯ ವಿದ್ಯಾಬೋಧನೆಯು ಬೌದ್ಧ ಮತಾಭಿವೃದ್ಧಿಯ ಕಾಲವು ಕಳೆದ