ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. &? &# ಯಗಳು ಮತ್ತಷ್ಟು ವಿರುದ್ಧ ಗಳಾಗಿ ಅವರೆಲ್ಲರೂ ಉಪಾ ಧ್ಯಾಯರೊಡನೆ ಪಾಠಶಾಲೆಯನ್ನು ಬಿಟ್ಟು ಹೊರಟುಹೋದರು, ವಿದ್ಯಾಭಿವೃದ್ಧಿಗೆ ಭಂಗವುಂಟಾಗಬಾರದೆಂದು ಸಭಿಕರು ಮಾಡಿದ ಪ್ರಯತ್ನಗಳು ಈಡೇರದೆ ನಿಮ್ಮ ವೇರ್ಪಡಲಿಕ್ಕೆ ಸಿದ್ಧವಾಗಿರುವ ಈ ಕಾಲದಲ್ಲಿ ದೇಶವಿರೋಧಿಯೆಂದು ಭಾವಿಸಲ್ಪಟ್ಟ ರಾಮಮೋಹನರಾಯನೇ ಬಾಲಕರಿಗೆ ಹಿತೋಪದೇಶ ವನ್ನು ಮಾಡಿ ಹಿರಿಯರ ಅಭಿಪ್ರಾಯಕ್ಕೆ ವಿರೋಧವಾಗಿ ಅವರು ಮತಾಂತರದಲ್ಲಿ ಸೇರಬಾ ರದೆಂತಲೂ, ವಿದ್ಯಾಭಿವೃದ್ಧಿಗೆ ಭಂಗತಂದುಕೊಳ್ಳಬಾರದೆಂತಲೂ ಬೋಧಿಸಿ ಆ ವಿದ್ಯಾಶಾಲೆ ಯನ್ನು ಕಾಪಾಡಿದನು, 1823 ರಲ್ಲಿ ಲಾರ್ಡ್ ಅಂಹರಸ್ಟ್ ಎಂಬ ರಾಜಪ್ರತಿನಿಧಿಯು ಹತ್ತು ವರ್ಷಗಳಿಂದ ವೆಚ್ಚಿಸದೆ ವುಳಿಸಿದ್ದ ಆ ದ್ರವ್ಯವನ್ನು ಖರ್ಚುಮಾಡಿ, ಹಿಂದುಗಳ ಭಾಷಾಭಿವೃದ್ಧಿ ಗಳಿಗೋ ಸ್ಕರ ಒಂದು ಸಂಸ್ಕೃತ ಪಾಠಶಾಲೆಯನ್ನೇರ್ಪಡಿಸಬೇಕೆಂದು ಯೋಚಿಸಿದನು. ರಾಮಮೋ ಹನನಿಗೆ ಸರ್ಕಾರದವರ ಅಭಿಪ್ರಾಯ ತಿಳಿದು ಆ ಕಾಲೇಜನ್ನು ಇಂಗ್ಲಿಷ್ ಪಾಠಶಾಲೆಯಾಗಿ. ಮಾರ್ಪಡಿಸುವುದು ಉತ್ತಮವೆಂಬ ತನ್ನ ಅಭಿಪ್ರಾಯವನ್ನು ತಿಳಿಸುವ ಒಂದು ವಿಜ್ಞಾ ಪನ ಪತ್ರವನ್ನು ಏಳೆಂಟು ಪುಟಗಳಲ್ಲಿ ಈ ಸಂಸ್ಕೃತ ಭ: ಪಾಭಿವೃದ್ದಿಗಾಗಿ ಬೇಕಾದ ಸಾಧ ನಗಳೂ ಆ ಭಾಷೆಯನ್ನು ಬೋಧಿಸುವ ಪಂಡಿತರೂ ಇಂಡಿಯಾದ ಎಲ್ಲಾ ಭಾಗಗಳಲ್ಲಿಯೂ ಇರುವರೆಂತಲೂ, ದೇಹವು ಅನಿತ್ಯವಾದುದರಿಂದ ದೇಹಸಂಬಂಧಿಗಳಲ್ಲಿ ಮಮತೆಯನ್ನು ಬಿಡ ಬೇಕೆಂತಲೂ ದೃಶ್ಯ ಪದಾರ್ಥಗಳೆಲ್ಲವೂ ಮಿದ್ಯೆಯೆಂತ ಬೋಧಿಸುವ ವೇದಾಂತಶಾಸ್ತ್ರ ಳಿಂದಲೂ, ಪಶ್ಯಾದಿ ಯಜ್ಞಗಳ ಯುಕ್ತಾಯುಕ್ತತೆಗಳನ್ನು ನಿರ್ಣಯಿಸುವ ಮಾಮಂಸಾದಿ ಗ್ರಂಥಗಳಿಂದಲೂ, ಮಗುಮೋರೆಗಳನ್ನು ಬಣ್ಣಿಸುವ ಶೃಂಗಾರ ಪ್ರಬಂಧಗಳಿಂದಲೂ ಲೋಕವ್ಯವಹಾರಕ್ಕೆ ಉಪಯೋಗಿಸುವ ಜ್ಞಾನವು ಅಭಿವೃದ್ಧಿಯಾಗಲಾರದೆಂತಲೂ ಹಿಂ ದೂದೇಶದವರು ವಿದ್ಯೆಯ ಪ್ರಯೋಜನಗಳನ್ನು ಹೊಂದಿ ನೆಟ್ಟಗಾಗಬೇಕೆಂಬ ಅಭಿಪ್ರಾಯ ವೇ ಸತ್ಕಾರದವರಿಗೆ ನಿಜವಾಗಿ ಇದ್ದಲ್ಲಿ ಶಾರೀರ, ರಸಾಯನ, ಭೂಗರ್ಭಶೋಧನಾದಿ ಪ್ರಕೃತಿಶಾಸ್ತ್ರ ಬೋಧಕರನ್ನು ಇಂಗ್ಲೆಂಡಿನಿಂದ ಕರೆಸಿ ಪ್ರಜೆಗಳಲ್ಲಿ ಪಾಶ್ಚಾತ್ಯರ ನಾಗರಿಕತೆ ಯು ವ್ಯಾಪಿಸುವುದಕ್ಕೆ ಅನುಕೂಲವಾಗುವಹಾಗೆ ಇದನ್ನು ಇಂಗ್ಲಿಷ್ ಕಾಲೇಜಾಗಿ ಮಾ ರ್ಪಡಿಸಬೇಕೆಂತಲೂ” ಪ್ರಾರ್ಥಿಸಿ, ತನ್ನ ವಿದ್ಯಾಚಾತುರವನ್ನೆಲ್ಲಾ ಉಪಯೋಗಿಸಿ ಚರ್ಚಿ ಸಿ ಹಲವು ಕಾರಣಗಳನ್ನು ಬರೆದು ರಾಜಪ್ರತಿನಿಧಿಯ ಬಳಿಗೆ ಕಳುಹಿಸಿದನು, ಆ ಪ್ರಾ ರ್ಥನೆಯಆಸ್ಥಾನದಲ್ಲಿಯ ಸಭಿಕರಲ್ಲಿ ವಿದ್ಯಾವಂತರಾಗಿಯ ಪ್ರಜೆಗಳ ಹಿತಚಿಂತಕರಾ ಗಿಯೂ ಇರುವ ಕೆಲವು ಇಂಗ್ಲಿಷರಿಗೆ ತುಂಬ ಸಂತೋಷಕರವಾಗಿದ್ದುದರಿಂದ ಅವರು ಇದ ಕ್ಯಾಗಿ ತುಂಬ ವ್ಯವಸಾಯಮಾಡಿದರು, ಆದರೂ ಸತ್ಕಾರದವರು ಅದಕ್ಕೆ ಮುಂಚೆಯೇ ಮಾಡಿದ ಎರ್ಪಾಡುಗಳನ್ನು ಅಷ್ಟು ತ್ವರೆಯಲ್ಲಿ ಬದಲಾಯಿಸುವುದು ರಾಜ್ಯಾಂಗನದ್ದತಿಗೆ ವಿರೋಧವಾಗಿರುವುದೆಂದು ಭಾವಿಸಿ ಅದನ್ನು ಪೂರ್ತಿಯಾಗಿ ಅಂಗೀಕರಿಸದಿದ್ದರೂ ಪ್ರಜೆ ಗಳ ಪಕ್ಷದಲ್ಲಿ ಸ್ಥಾಪಿಸಲ್ಪಟ್ಟಿರುವ ಹಿಂದೂಕಾಲೇಜನ್ನು ಪ್ರಸ್ತುತದಲ್ಲಿ ಸಂಸ್ಕೃತಕಾಲೇಜಿ
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೭೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.