ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಾ ರಾಮಮೋಹನರಾಯರ ಜೀವಿತ ಚರಿತ್ರ ೭೯ ರಾಮಮೋಹನನಿಗೆ ಇಂಗ್ಲೆಂಡಿಗೆ ಹೊರಡಬೇಕೆಂಬ ಆಸೆಯು 1837 ರಲ್ಲಿಯೇ ಹು ಟಿತು, ಆದರೆ ಆ ಕೋರಿಕೆಯು ಆಗ ನೆರವೇರದೆ ಹೋದುದರಿಂದ 1836ನೆಯ ವರ್ಷ ದಲ್ಲಿ ಪ್ರಯಾಣಕ್ಕೆ ಬೇಕಾದ ಪ್ರಯತ್ನಗಳನ್ನು ಮಾಡಿದನು. ಇವನಿಗೆ ಅಷ್ಟು ದಿನಗಳ ತನಕ ಪ್ರಯಾಣಕ್ಕೆ ಅನುಕೂಲಿಸದೆ ಏತರಿಂದ ಅಡ್ಡಿಯುಂಟಾಯಿತೋ ಅದನ್ನು ರಾಮ ಮೋಹನನು ಒಂದು ಕಡೆ ಸಂಕ್ಷೇಪವಾಗಿ ಹೀಗೆ ಬರೆದಿರುವನು ; ನಾನು ಆಗಾಗ್ಗೆ ಯೂರೋಪ್ ಖಂಡಕ್ಕೆ ಸಂಬಂಧಿಸಿದ ವ್ಯವಹಾರಗಳನ್ನು ಕುರಿತು ಬರೆಯಲ್ಪಟ್ಟ ಪತ್ರಿಕೆಗೆ ಇನ್ನೂ ವಿದ್ಯಾವಿಷಯದ ವ್ಯಾಸಗಳನ್ನೂ ಓದುತ್ತಾ ಅವುಗಳನ್ನು ಓದುವಾಗಲೆಲ್ಲ ಆ ದೇಶದ ಪ್ರಜೆಗಳಿಗೆ ರಾಜನೀತಿಯು ಚೆನ್ನಾಗಿ ತಿಳಿಯುವುದೆಂತಲೂ, ಅವರಲ್ಲಿ ವಿದ್ಯಾನಾಗರಿಕಾದಿ ಗಳು ವಿಶೇಷವಾಗಿ ವೃದ್ಧಿಯನ್ನು ಹೊಂದುತ್ತಿರುವುವೆಂತಲೂ, ಶಾಸ್ತ್ರಶೋಧನೆಯಲ್ಲಿ ಆ ದೇ ಶವು ದಿನದಿನಕ್ಕೂ ಒಂದೊಂದು ಹೊಸ ಸಂಗತಿಯನ್ನು ಕಂಡುಹಿಡಿಯುತ್ತಲೇ ಇರುವುದೆಂ ತಲೂ ಅವರು ತುಂಬಾ ಭಾಗ್ಯವಂತರಾಗಿದ್ದಾರೆಂತಲೂ ತಿಳಿದುಕೊಳ್ಳುತ್ತಲಿರುವುದರಿಂದ ಅಂತಹ ಮಹೋನ್ನ ತಪದವಿಯಲ್ಲಿರುವ ರಾಜ್ಯವನ್ನು ಒಂದುಸಾರಿ ನೋಡಬೇಕೆಂಬ ಆಸೆ ಹುಟ್ಟಿ, ದಿನದಿನಕ್ಕೆ ಬೆಳೆದು, ನನ್ನ ಹೃದಯದಲ್ಲಿ ಬಲವಾಗಿ ಬೇರೂರಿತು. ಆದರೆ ಕೆಲವು ಅಭ್ಯಂತರಗತಿ೦ದಲೂ ನನ್ನ ಸ್ವಂತ ತೊಂದರೆಗಳಿಂದ ಕೆಲವು ವರ್ಷಗಳವರೆಗೆ ನನ್ನ ಕೋರಿಕೆಯು ಈಡೇರದೆ ಹೋದರೂ ಕೊನೆಗೆ 1830 ನೆಯ ನವಂಬರು 19ನೆಯ ದಿನ ನಾನು ಕಲ್ಕತ್ತೆಯಿಂದ ಮುಂದಕ್ಕೆ ಪ್ರಯಾಣಮಾಡಿದೆನು.” ರಾಮಮೋಹನನು ಹೇಳಿದ ಸ್ವಂತ ತೊಂದರೆಗಳು ಎರಡು ವಿಧಗಳಾದುವು, ಆವು ಗಳಲ್ಲಿ ಮೊದಲನೆಯದು, ಇದುವರೆಗೆ ಬರೆದಿರುವಂತೆ ಇವನ ಅಣ್ಣನ ಮಕ್ಕಳು ಇವನಿಗೆ ಪಿತ್ರಾರ್ಜಿತವಾದ ಆಸ್ತಿ ಸಿಕ್ಕದಂತೆ ಮಾಡಬೇಕೆಂಬ ದುರುದ್ದೇಶದಿಂದ ಕೂಡಿದ ವ್ಯಾಜ್ಯ. ಈ ವ್ಯವಹಾರವು ಕೆಲವು ವರ್ಷಗಳ ತನಕ ನಡೆಯುತ್ತಲೇ ಇದ್ದು, ರಾಮಮೋಹನನು ಇಂಗ್ಲೆಂಡಿಗೆ ಹೊರಡುವುದಕ್ಕೆ ಕೆಲವು ದಿನಗಳ ಮುಂಚೆ ಇವನ ಪಕ್ಷವಾಗಿ ತೀರಾ ನವಾ ಯಿತು, ಆಗ ಇವನ ತಾಯಿಯು ಉಳಿದಿದ್ದ ಪಿತ್ರಾರ್ಜಿತವಾದ ಅಸ್ತಿಯನ್ನೆಲ್ಲಾ ರಾಮ ಮೋಹನನಿಗೂ ಅವನ ಅಣ್ಣನ ಮಕ್ಕಳಿಗೂ ಹಂಚಿಕೊಟ್ಟು, ತಾನು ಜಗನ್ನಾಥಕ್ಕೆ ಹೋಗಿ ಅಲ್ಲಿಯೇ ಕಾಲಧರ್ಮವನ್ನು ಹೊಂದಿದಳು. ಎರಡನೆಯ ತೊಂದರೆ ಯಾವುದೆಂದರೆ, ತನ್ನಲ್ಲಿ ಪ್ರಯಾಣಕ್ಕೆ ಸಾಕಾದಷ್ಟು ದ್ರವ್ಯವಿಲ್ಲದಿರುವಿಕೆ? ಇವನು ಸಂಪಾದಿಸಿದ ಹಣದಲ್ಲಿ ಸುಮಾರು ಮರುಪಾಲೆಲ್ಲವೂ ದೇಶೋಪಕಾರಕ್ಕಾಗಿಯೇ ವೆಬ್ಬಿಸಲ್ಪಟ್ಟು, ಉಳಿದ ಹಣವು ತನ್ನ ಕು ಟುಂಒಪೋಷಣೆಗೆ ಸಾಲದೆ ಇದ್ದಿತು, ಆದರೆ ಭಗವಂತನು ಈ ಮಹಾತ್ಮನ ಚಿಂತೆಯನ್ನು ಸುಲಭವಾಗಿ ಪರಿಹರಿಸಿದನು, ಆ ಕಾಲದಲ್ಲಿ ದೆಹಲಿಗೆ ರಾಜನಾಗಿದ್ದ ಎರಡನೆಯ ಅಕ್ಷರ ನೆಂಬುವನು ಕಂಪೆನಿಯವರು ತನಗೆ ವಿರೋಧವಾಗಿ ಅನೇಕ ಅಕ್ರನುಗಳನ್ನು ನಡೆಸಿದುದ ರಿಂದ ಆ ವಿಷಯವನ್ನು ಇಂಗ್ಲೆಂಡ್ ರಾಜನಿಗೆ ಬಿನ್ನವಿಸಬೇಕೆಂದು ಯೋಚಿಸಿದ್ದನು, ಆ ದುದರಿಂದ ಆ ಕೆಲಸವನ್ನು ನಿರ್ವ ಹಿಸಲು ರಾಮಮೋಹನನನ್ನೇ ತನಗೆ ಪ್ರತಿನಿಧಿಯಾಗಿ