ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ ಮೂಲಕ ತಿಳಿಯುತ್ತಿದ್ದ ಆಗಿನ ನಮ್ಮ ಭರತಭೂಮಿಯೆಂಬ ರಮಣಿಯು-ಯಾವನು ತನ್ನ ಯೋಗ್ಯತಾ ವಿಶೇಷ, ವಾಕ್ಚಾತುರ್ಯ ಇವುಗಳ ಸಹಾಯದಿಂದ ಈ ಪ್ರಪಂಚದ ನಾಲ್ಕು ದಿಕ್ಕುಗಳಲ್ಲಿಯೂ ಇರುವ ದೇಶಗಳಿಗೆ ಹೋಗಿ, ತನ್ನ ಕೀರ್ತಿಯೆಂಬ ಬೆಳದಿಂಗಳನ್ನು ವ್ಯಾಪನ ಗೊಳಿಸಿ, ಇನಿವಾತುಗಳೆಂಬ ರಸವನ್ನು ಚೆಲ್ಲಿ, ದೇಶದಲ್ಲಿ ನಾಗರಿಕತೆ ಬೆಳೆಯುತ್ತಾ ಬಂದಹ ಗೆಲ್ಲಾ ತನ್ನ ಉಪನ್ಯಾಸ ವಾಕ್ಯಸರಣಿಯನ್ನು ಬೆಳಗಿಸುವಂತೆ ವರ್ತಿಸಿದನೋ ಅಂತಹ ಮಹಾತ್ಮ ನಾ ದ ಶ್ರೀರಾಜಾರಾಮಮೋಹನ ರಾಯನನ್ನು ತನ್ನ ಅಪಾರವಾದ ಗರ್ಭದಿಂದ ಬಹಿಕಪ್ರಸಂ ಜಕ್ಕೆ ಇದೇ ವರುಷದಲ್ಲಿಯೇ ತಂದಳು ; ಆದುದರಿಂದ ಈ ಸಂವತ್ಸರವನ್ನು ಕುರಿತು ಎಷ್ಟು ಹೆಚ್ಚಾಗಿ ಹೇಳಿದರೂ ಸ್ವಭಾವೋಕ್ತಿಯೇ ಎನಿಸುವುದು. ಕಥಾನಾಯಕನಾದ ನಮ್ಮ ರಾಜಾರಾಮಮೋಹನರಾಯನು ಒಗಾಳಾ ರಾಜಧಾನಿ ಯಾಗಿ ಹುಗ್ಗಿ ಮಂಡಲಕ್ಕೆ ಸೇರಿದ ಕೃಷ್ಣನಗರದ ಬಳಿಯ ರಾಧಾನಗರವೆಂಬ ಒಂದು ಹಳ್ಳಿ ಯಲ್ಲಿ ಹಿರಿಯರ ಕಾಲದಿಂದಲೂ ಹೆಸರುವಾಸಿಯನ್ನು ಪಡೆದು ಗೌರವ್ಯವಾಗಿ ಶ್ರೇಷ್ಟವಾದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದನು, ಈ ಕುಟುಂಬದವರು ಅನೇಕ ತಲೆಮರೆಗಳಿಂದ ಕೇಳಿ ವಲ ವೈದಿಕವೃತ್ತಿಯಿಂದಲೇ ಜೀವಿಸಿದರೂ, ಆಲಂಘೀರ್ ಚಕ್ರವರ್ತಿಯ ಪ್ರಭುತ್ವದ ಕಾಲ ದಿಂದ ಮಾತ್ರ ತಮ್ಮ ಪೂರ್ವದ ವೃತ್ತಿಯನ್ನು ಬಿಟ್ಟು, ಲೌಕಿಕವೃತ್ತಿಯನ್ನವಲಂಬಿಸಿ, ಮರ ಷದಾಬಾದ್ ನವಾಬರ ಇಲಾಖೆಯಲ್ಲಿ ದೊಡ್ಡ ಅಧಿಕಾರಗಳನ್ನು ಮಾಡುತ್ತಾ ಬಂದರು, ಹಾಗೆ ಈ ವಂಶದಲ್ಲಿ ಲೌಕಿಕವೃತ್ತಿಯನ್ನು ಪ್ರಥಮದಲ್ಲಿ ಅವಲಂಬಿಸಿದವನು ಕೃಷ್ಣ ಚಂದ್ರಬೆನರ್ಜಿ. ಇವನು ವಿದ್ಯಾವಂತನಾಗಿಯೂ, ವಿವೇಕಿಯಾಗಿಯೂ ಇದ್ದುದರಿಂದ ಸ್ವಲ್ಪ ಕಾಲದಲ್ಲಿಯೇ ನವಾಬನ ಅನುಗ್ರಹಕ್ಕೆ ಪಾತ್ರಾಗಿ 'ರಾಯಲ್' ಎಂಬ ಬಿರುದನ್ನು ಪಡೆದನು, ಆಗ ಈತನ ಜನ್ಮಸ್ಥಾನವು ಮುರಷದಾಬಾದ್ ಮಂಡಲಕ್ಕೆ ಸೇರಿದ ಪಾ೦ಕಾಸಾ ಎಂಬ ಹಳ್ಳಿಯಾಗಿದ್ದರೂ ಈತನೇ ತನ್ನ ವಾಸಸ್ಥಳವನ್ನು ಇಲ್ಲಿಂದ ರಾಮನಗರಕ್ಕೆ ಬದಲಾಯಿಸಿದನು, ನವಾಬನು ಈ ಬೆನರ್ಜಿಯನ್ನು ಭಾವಾಕೋಲ್, ಕೃಷ್ಣನಗರಪ್ರಾಂತ್ಯ ಪ್ರದೇಶಗಳ ಅಧಿಕಾರಿಯಾಗಿ ನಿಯಮಿಸಿ ಕಳುಹಿದನೆಂತಲೂ, ಆ ಪ್ರದೇಶವು ಬಹು ಸೌಖ್ಯಪ್ರದವಾಗಿ ಕಾಣಿಸಿದುದರಿಂದಲೇ ಈತನು ಕೃಷ್ಣನಗರದ ಹತ್ತಿರ ಇದ್ದ ರಾಧಾನಗರವನ್ನು ತನ್ನ ನಿವಾಸವಾಗಿ ಮಾಡಿಕೊಂಡನೆಂತಲೂ, ಹೇಳುವರು, ಆ ಕಾಲದಲ್ಲಿ ಈ ಬೆನರ್ಜಿ ಯವರನ್ನು 'ಸಿಕ್ಕೇದಾರ್' ಎಂಬ ಮರಾದೆಯಿಂದ ಕರೆಯುತ್ತಿದ್ದರು. ಆ ಗ್ರಾಮದಲ್ಲಿ 'ಸಿಕ್ಕೇದಾರರ ಕೆರೆ' ಎಂಬ ಹೆಸರಿನದೊಂದು ದೊಡ್ಡ ಕೆರೆಯು ಈಗಲೂ ಇದೆ. - ಕೃಷ್ಣ ಚಂದ್ರನಿಗೆ ಅಮರಚಂದ್, ಹರಿಪ್ರಸಾದ್‌, ಬಿರ್ಜಿ ಬನೂದ್ ಎಂಬ ಮೂವರು ಮಕ್ಕಳಿದ್ದರು. ಇವರಲ್ಲಿ ಕಿರಿಯವನಾದ ಬಿರ್ಜಿಬನದೆಂಬುವನು ಸತ್ಯ ಸಂಧನಾಗಿಯೂ, ಭಗವದ್ಭಕ್ತನಾಗಿಯ, ಪರೋಪಕಾರ ಶೀಲನಾಗಿಯೂ, ಇದ್ದನು, ಈತನೂ ತನ್ನ ಹಿರಿ ರಂತೆ ಆಗಿನ ನವಾಬನಾದ ಸುರಾಜೆದ್ಲಾವಿನ ಅಧಿಕಾರದಲ್ಲಿ ಒಂದು ಉದ್ಯೋಗಕ್ಕೆ ಸೇರಿ