೯೨ ರಾಣಾ ರಾಜಸಿಂಹ [ಪ್ರಕರಣ www೧om ಪತ್ರವನ್ನು ಓದಿದ ಬಳಿಕ ಸ್ವಲ್ಪ ಹೊತ್ತು ವಿಚಾರದಲ್ಲಿ ಮಗ್ನನಾ ದನು ಆಮೇಲೆ ಜಯಸಿಂಹನ ಕಡೆಗೆ ತಿರುಗಿದನು ಈ ಪತ್ರವನ್ನು ತಂದ ಉಪಾಧ್ಯಾಯನು ಎಲ್ಲಿರುವನು ನೋಡು ಒಯಸಿಂಹನು ಬಹಳ ಹೊತ್ತಿ ನವರೆಗೆ ಹುಡುಕಿದನು ಆದರೆ ಉಪಾಧ್ಯಾಯನು ಸಿಗಲಿಲ್ಲ ರಾಣಾನ ವಿಜಯನೆಂಬ ಕುದುರೆಯು ಮಾತ್ರ ಅಲ್ಲಿಯೆ ನಿಂತಿತ್ತು ಉಪಾಧ್ಯಾ ಯನ ಶೋಧವಾಗಲಿಲ್ಲಾದ್ದರಿಂದ ರಾಣಾನು ವಿಜಯನ ಹತ್ತಿರ ಬಂದನು. ಇಷ್ಟರಲ್ಲಿ ಅವನ ಸೇವಕರೆಲ್ಲ ಅಲ್ಲಿಗೆ ಬಂದರು | ರಾಜಸಿಂಹನು ಕಳ್ಳರ ಬೆನ್ನು ಹತ್ತಿದ ಕೂಡಲೆ ಇವನೂ ಅವರೊಳ ಗಿನವನೊಬ್ಬನೆಂದು ಮಿಶ್ರದೇವನು ಒಂದು ಗುಹೆಯಲ್ಲಿ ಅಡಗಿನಿಂತಿದ್ದನು ರಾಣಾನ ರಕ್ತಮಯವಾದ ವಸ್ತ್ರಗಳನ್ನು ನೋಡಿ ಏನೋ ಒಂದು ಮಹತ್ಕಾರ್ಯವಾಗಿರಬಹುದೆಂದು ಸೈನಿಕರೆಲ್ಲ ತಿಳಿದರು ಒರಿಗೂ ಕೇಳುವ ಧೈರ್ಯವಾಗಲಿಲ್ಲ ಕಾಣಾನು ಕುದುರೆಯ ಮೇಲೆ ಹತ್ತಿ ಸೈನಿಕರೊಳಗಿನ ತನ್ನ ಪ್ರಧಾನ, ಸೇನಾಪತಿ, ಸರದಾರನನ್ನು ಒತ್ತಟ್ಟಿಗೆ ಕರೆದು ಅವರೊಡನೆ ಏನೇನೋ ಏಕಾಂತಮಾತಾಡಿದನು ಆಮೇಲೆ ಎಲ್ಲ ರನ್ನು ಒಂದು ಸ್ಥಳದಲ್ಲಿ ಕೂಡಿಸಿ ಹೇಳಿದನು
- * ಗೆಳೆಯರೆ, ಹೊತ್ತು ಬಹಳಾಯಿತು ನೀವೆಲ್ಲರು ಹಸಿದಿರುವಿರಿ. ಆದರೆ ಈಹೊತ್ತು ಮನೆಗೆಹೋಗಿ ಊಟಮಾಡುವದು ನಮ್ಮ ದೈವದ ಇಲ್ಲ, ನಾವು ಈಹೊತ್ತು ಈ ಪರ್ವತದ ಹಿಂಭಾಗಕ್ಕೆ ಹೋಗಬೇಕಾ ಗಿದೆ ನಾನೊಂದು ಸಣ್ಣ ಯುದ್ದೋದ್ಯೋಗವನ್ನು ಕೈಕೊಂಡಿರುತ್ತೇನೆ ಯುದ್ಧ ಮಾಡಬೇಕೆಂಬ ಬಯಕೆಯುಳ್ಳ ವೀರರು ನನ್ನೊಡನೆ ಒರಬೇಕು. ಉಳಿದವರು ಉದೇಪುರಕ್ಕೆ ತೆರಳಬೇಕು ?”
ಈ ಪ್ರಕಾರ ಮಾತಾಡಿ ರಾಣಾನು ಪರ್ವತವನ್ನು ಏರಲಿಕ್ಕೆ ಹತ್ತಿ ದನು ಅದರೊಡನೆ CC ಜಯಮಾಹಾರಾಣಾಜೀಕಿ ಜಯ ?” “ ಜಯ ಏಕಲಿಂಗಕಿಜಯ ಎಂದು ಜಯಘೋಷಮಾಡುತ್ತ ನೂರುಜನ ಸವಾರ ರರು ರಾಣಾನ ಬೆನ್ನು ಹತ್ತಿದರು ಪರ್ವತದ ಶಿಖರದ ಮೇಲೆ ಹೋದ