೧೭] ಮಾರ್ಗದೊಳಗಿನ ಯುದ್ಧ ೧೦೫ • • • • • • •••• * • ವಿನಲ್ಲಿ ಆನಂದದಿಂದ ಕೆಲಕೆಲವು ಸವಾರರು ಹಾಡತೊಡಗಿದರು. ಯೇ ಣೆಯ ಹಿಂದಿರುವ ಸವಾರರಲ್ಲಿ ಎಲ್ಲ ಕ್ಕೂ ಮುಂದಿನವನು, ಕೆಳಗಿನ ಪದ ವನ್ನು ಉಚ್ಚ ಸ್ವರದಿಂದ ಹಾಡುತ್ತಿದ್ದನು. ಪದ || ಶರಮ ಭರವಸೆ ಸಿಯಾರಿ | ಸಿಮರತ ಬಸಿ ಧಾರಿ | ರುರತ ರೋಚನನೆ ಬಾರಿ ! ನ ಸಮರ ಗೋಪಕುಮಾರಿ | ಜೆ ಹಿನ ಬೈರಕ ಮುರಾರಿ | ಬಿಹಾರತ ರಾಹತ ಮಾರಿ | ರಾಜಕನೈ ಯು ಗಾಯನವನ್ನು ಕೇಳಿದಳು ಅದರ ಅರ್ಥವನ್ನು ತಿಳಿದು ಮನಸ್ಸಿನಲ್ಲಿ “ಪ್ರಭೂ, ಈ ಮುಂಜಾವಿನ ಗಾಯನವು ನಿಜವಾ ದರೆ, ನನ್ನ ಆನಂದಕ್ಕೆ ಮರ್ಯಾದೆ ಇಲ್ಲ ” ರಾಜಕನ್ನೆಯ ಮನಸ್ಸಿ ನಲ್ಲಿ ರಾಜಸಿಂಹನ ವಿಚಾರವು ಬಂದಿತ್ತು. ಜಯಸಿಂಹನು ಈ ಪದವನ್ನು ಹೇಳುತ್ತ ಮೇಣೆಯ ಹಿಂದಿಂದೆ ನಡೆದಿದ್ದನು, ಅವನು ಒಳ್ಳೆ ಪ್ರಯಾಸ ದಿಂದ ಈ ಸ್ಥಳವನ್ನು ದೊರಕಿಸಿದ್ದನು ಇದೆಲ್ಲ ಆ ಸರಳಮನಸಿನ ಬಾಲಿ ಕೆಗೆ ಪ್ಯಾಗೆ ಗೊತ್ತಾಗಬೇಕು ? ದೊಡ್ಡ ಅಜಗರಹಾವಿನ ಶರೀರದಂತೆ ದೊಗಲಸೇನೆಯು ಮೆಲ್ಲ ಮೆಲ್ಲನೆ ನಡೆದಿತ್ತು ಸೇನೆಯು ಪರ್ವತದ ಮಾರ್ಗದಿಂದ ರಾಜಸಿಂಹನು ಔತುಗೊಂಡಿದ್ದ ಸ್ಥಳದ ಸಮೀಪಕ್ಕೆ ಬಂತು, ಅರ್ಧಸೇನೆಯು ಆ ಮಾರ್ಗದಿಂದ ಮುಂದೆ ಹೋಗಿತ್ತು ಅಷ್ಟರಲ್ಲಿ ಧಮ್, ಧಮ್ ?” ಎಂಬ ಬಲವಾದ ಸಪ್ಪಳವಾಗತೊಡಗಿತು. ಮುಂದಿನ ಸಿಪಾಯಿಗಳು ಬೆದರಿ ನಿಂತುಬಿಟ್ಟರು. ಪರ್ವತಶಿಖರದಿಂದ ಗುಡ್ಡದ ಒಂದುಭಾಗವು ಕಡಿದು ಕೆಳಗೆಬಿದ್ದಂತೆ ಕಂಡಿತು. ಒಬ್ಬ ಸವಾರನು ಸತ್ತನು, ಮತ್ತೂ ೭ನು ವಿಶೇಷ ಪೆಟ್ಟು ತಿಂದನು. ಎಲ್ಲರು ಆಶ್ಚರ್ಯಚಕಿತರಾಗಿ ನೋಡಹತ್ತಿದರು, ಎತ್ತನೋಡಿ ದತ್ತ ಕಲ್ಲಿನ ಮಳೆ ಸುರಿಯಹತ್ತಿತು, ಅದರಿಂದ ಎಷ್ಟೋ ಜನರಿಗೆ ಗಾಯಗಳಾದವು. ಎಷ್ಟೋ ಜನರು ಸತ್ತುಹೋದರು. ದಾರಿಯು ಒಂದಾಗುವಂತೆ ಕಂಡುಬಂತು ಕುದುರೆಗಳು ಬೆನ್ನ ಮೇಲಿನ ಸವಾರ
ಪುಟ:ರಾಣಾ ರಾಜಾಸಿಂಹ.djvu/೧೧೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.