ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧] ರಾಜಸಿಂಹನ ಪತ್ರ ೧೨ (Nvvvvvvvvvv\ v 1 \ vvvvvvvy\ \ \\ \ \\ \\ \\\Vs VV\ * ಭೂಷಣರು. ಆದರೆ ಈಗ ಮಾತ್ರ ನೀವು ರಜಪೂತರ ಕುಲಕ್ಕೆ ಕಳಂಕವನ್ನು ಹಚ್ಚಬೇಕೆನ್ನು ವಿರಿ, ನೀವು ನನ್ನ ಮಗಳನ್ನು ಅಪಹರಿಸಿದಿರಿ, ಆಕೆ ದಿಲ್ಲಿಗೆ ಹೋಗುವದನ್ನು ತಪ್ಪಿಸಿದಿರಿ, ಇದರಿಂದ ನಿಮ್ಮೊಡನೆ ವೈರವನ್ನು ಬೆಳೆಸು ವದು ನನ್ನ ಧರ್ಮವು, ನೀವು ಅವಳೊಡನೆ ಲಗ್ನವಾಗುವದಂತೂ ಎಲ್ಲ ರೀತಿಯಿಂದ ನನ್ನ ಇಚ್ಛೆಗೆ ವಿರುದ್ಧವಾದದ್ದು. “ ಪೂರ್ವಕಾಲದಲ್ಲಿ ಕ್ಷತ್ರಿಯ ವೀರರು ಕನ್ನೆಯನ್ನು ಅಪಹರಿಸಿ ಲಗ್ನ ವಾ ಗುತ್ತಿದ್ದರೆಂದು ನೀವು ಹೇಳಬಹುದು. ಭೀಷ್ಮ ಅರ್ಜುನ ಕೃಷ ಮೊದಲಾದವರು ಕನ್ನೆ ಯನ್ನು ಅಪಹರಿಸಿ ಲಗ್ನ ವಾಗಿರುವದೆಂಬದು ನಿಜವು ಆದರೆ ಅವರಂತೆ ನಮ್ಮಲ್ಲಿ ಶಕ್ತಿ ಇರುವದೆ? ನೀವು ಅಂಧಬಲಿಷ್ಟ ರಾಗಿದ್ದರೆ ಮೊಗಲರನ್ನು ಹಿಂದುಸ್ತಾನದಲ್ಲಿ ರಾಜ್ಯಭಾರ ಮಾಡಗೊಡುತ್ತಿ ದಿಲ್ಲ ನರಿಯು ಸಿಂಹನಂತೆ ವರ್ತಿಸುವದು ಮೂರ್ಖತನವು, ನಾನೂ ರಜಪೂತನು ಮುಸಲ್ಮಾನರಿಗೆ ಕನ್ನೆಯನ್ನು ಒಪ್ಪಿಸುವದು ಕುಲಕ್ಕೆ ಕಲಂಕ ತರುವ ಕೆಲಸವೆಂದು ನನಗೆ ತಿಳಿಯುತ್ತದೆ. ನಿಮ್ಮಲ್ಲಿ ಮೊಗಲ ರೊಡನೆ ಕಾದುವಷ್ಟು ಶಕ್ತಿಯದೆ ಎಂದು ನನಗೆ ಗೊತ್ತಿದ್ದರೆ ಮೊದಲು ಮೊಗಲರಿಗೆ ನನ್ನ ಕನ್ನೆ ಯನ್ನು ಕೊಡುತ್ತಿದ್ದಿಲ್ಲ, ಅವರ ಬೇಡಿಕೆಯನ್ನು ತುಚ್ಛಮಾಡಿ ನಿಮ್ಮಂಧ ವೀರರಿಗೆ ಕೊಡುತ್ತಿದ್ದನು, ಆದರೆ | ತಾವೇ ನನ್ನ ಕನ್ನೆಗೆ ಯೋಗ್ಯವರರೆಂದು ನಾನು ನಿಶ್ಚಯಿಸುವವರೆಗೆ ನೀವು ಅವ ಳೊಡನೆ ಲಗ್ನ ಮಾಡಿಕೊಂಡರೆ ನಾನು ಶಾಪಕೊಡುತ್ತೇನೆ. "ಈ ತರ ಹದ ಅಭಿಪ್ರಾಯವಿತ್ತು, ಅದನ್ನು ಚಂಚಲಕುಮಾರಿಗೆ ಓದಿತೋರಿಸಿದನು. ಮತ್ತು ಅದರೊಳಗಿನ ಗರ್ಭಿತಾರ್ಥವನ್ನು ತಿಳಿದು 11 ಇನ್ನು ಮುಂದೆ ಮಾಡತಕ್ಕದ್ದೇನು ?” ಎಂದು ಕೇಳಿದನು. ಚಂಚಲಕುಮಾರಿಯ ನೇತ್ರಗಳಿಂದ ಅಶ್ರುಸ್ರಾವವಾಗಹತ್ತಿತು. ಅವಳು ದುಃಖದಿಂದ ಬಿಗಿದಂಥ ಗದ್ದತ ಕಂರದಿಂದ-“ ತನ್ನ ತಂದೆಯ ಆಪ್ಪಣೆಯನ್ನು ಮಾರಿ ಆತನಶಾಪಕ್ಕೆ ಗುರಿಯಾಗಿ ಲಗ್ನ ಮಾಡಿಕೊಳ್ಳುವ ದಕ್ಕೆ ಯಾವಕನ್ನ ಯು ಬಯಸುವ?