೨೧] ರಾಜಸಿಂಹನ ಪತ್ರ ೧೨೫ \\\AAAAAAAAAAA hhhhh \ \ANA \ \n\ NAr 1 A ANA - S \ \ nhrr ಇತ್ತ ರೂಪನಗರದ ರಾಜಕನ್ನೆ ಯನ್ನು ರಜಪೂತರು ಅಪಹರಿಸಿ ಕೊಂಡು ಹೋದರೆಂಬ ಸುದ್ದಿಯು ದಿಲ್ಲಿಗೆ ಒಂದು ಮುಟ್ಟಿತು. ಅದನ್ನು ಕೇಳಿ ಔರಂಗಜೇಬನ ಕೋಪಾಗ್ನಿ ಯು ಪ್ರಜ್ವಲಿಸಹತ್ತಿತು. ಈ ಶಿಟ್ಟಿನ ಭರದಲ್ಲಿ ದಂಡಿನ ಎಷ್ಟೋ ಅಮಲದಾರರನ್ನು ಕೆಲಸದಿಂದ ದೂರಮಾಡಿ ದನು. ಎಷ್ಟೊಜನರನ್ನು ಕೊಲ್ಲಿಸಿದನು, ನಿಜವಾದ ತಪ್ಪುಗಾರರನ್ನು ಶಿಕ್ಷಿಸುವ ಕೆಲಸವು ಸಣ್ಣ ಪುಟ್ಟ ವಾದದ್ದಲ್ಲ ರಾಜಸಿಂಹನ ರಾಜಧಾನಿ ಊಾದ ಉದೇಪುರದ ಸುತ್ತಲಿನ ಪ್ರದೇಶವು ಭಯಂಕರವಾದದ್ದಿತ್ತು ಇಕ್ಕಟ್ಟಾದ ಗುಡ್ಡಗಳಿಂದ ತುಂಬಿ ಹೋಗಿತ್ತು, ಆದ್ದರಿಂದ ಆತನೊಡನೆ ಕಾದುವದು ಸುಲಭವಾಗಿದ್ದಿಲ್ಲ ರಾಣಾಪ್ರತಾಪಸಿಂಹನೊಡನೆ ಕಾದು ವಾಗ ಅಕಬರಬಾದಶಹನು ಭಯಭೀತನಾಗಿ ಎದೆಯಡಕೊಂಡದ್ದು ಇತಿ ಹಾಸಕಾರರಿಗೆ ಗೊತ್ತಿದ್ದ ಮಾತಾಗಿದೆ ಔರಂಗಜೇಬನು ಒಹಳ ಉತಾ ವಳಿ ಸ್ವಭಾವದವನು ಆತನಸಿಟ್ಟು ಎಂದೂ ಸಹನವಾಗುವಂಧದಲ್ಲಿ ನಾನು ಹಿಂದುಗಳ ನಾಶಕ್ಕಾಗಿಯೆ ಹುಟ್ಟಿರುವೆನೆಂದು ತಿಳಿಸಿದ್ದನು. ರಾಜ ಸಿಂಹನ ತಪ್ಪಿಗೆ ಯಾವತ್ತು ಹಿಂದೂ ಜನರ ಕಡೆಯಿಂದ ಜರಿಯ ತೆರಿಗೆ ಯನ್ನು ಸಕ್ತರೀತಿಯಿಂದ ತಕ್ಕೊಳ್ಳಲಿಕ್ಕೆ ಆಜ್ಞಾಪಿಸಿದನು ಈ ಕರವನ್ನು ವಸೂಲಮಾಡುವ ಕೆಲಸವು ಮೊದಲೆ ನಡೆದಿತ್ತು ಆದರೆ ಈಗ ಅದು ಬಹಳ ಭಯಂಕರಕ್ಕಿಟ್ಟಿತು, ಹಿಂದುಜನರು ಗಾಬರಿಗೊಂಡರು. ಮನಸಿ: ನಲ್ಲಿ ಬಯ್ಯು ಶಪಿಸ ತೊಡಗಿದರು ಕಡೆಗೆ ಬಾದಶಹನಲ್ಲಿ ಕ್ಷಮೆಯನ್ನು ಬೇಡಿಕೊಂಡರು, ಯಾವಾತನ ಅಂತಃಕರಣದಲ್ಲಿ ಕ್ಷಮೆಯ ಅಂಕುರವೆ ಉತ್ಪಾದಿಸದ ಅಂಧವನು ಜನರ ಮೊರೆಯನ್ನು ಹ್ಯಾಗೆ ಕೇಳುವದು ! ಬಾದಶಹನು ಪ್ರತಿಶುಕ್ರವಾರಕೊಮ್ಮೆ ಜುಮ್ಮಾ ಮಸೀದೆಯಲ್ಲಿ ನಮಾಜ ಮಾಡುತ್ತಿದ್ದನು, ಲಕ್ಷಾವಧಿ ಹಿಂದುಗಳು ಕೂಡಿ ಅಲ್ಲಿಗೆಹೋಗಿ ವಿನಂ ತಿಯನ್ನು ಮಾಡಿಕೊಳ್ಳಹತ್ತಿದ್ದರು, ಅವರೆಲ್ಲರನ್ನು ಆನೆಯ ಕಾಲಿನಿಂದ ತುಳಿಸಿ ಕಳಿಸಿರೆಂದು ಕುಕುವುದೊರೆಯಿತು. ಮೊದಲೆ ಬಾದಶಹನ ಅಕ್ಷಣೆ, ಅದರೊಳಗೂ ಔರಂಗಜೇಬನದು; ಅಂದಮೇಲೆ ಕೇಳುವದೇನು!
ಪುಟ:ರಾಣಾ ರಾಜಾಸಿಂಹ.djvu/೧೩೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.