೨೩] ೧೩೧ Ivvvvvvvv v 11VI V & vv\\ \ \ \ vvvvvvvv\ \ » ಯುದ್ಧದ ಮೊದಲನೆಯ ಪ್ರಸಂಗ ಶಿಲಾದಿತ್ಯ ಮೊದಲಾದವರ ಯಾವ ಸೇನಾಧಿಪತ್ಯವೂ ನಮಗೆ ಗೊತ್ತಿಲ್ಲ. ಅವರಂತ ಹಿಂದುಸ್ತಾನವನ್ನು ಗೆದ್ದ ಮಹಮ್ಮದಕಾಶೀಮ, ಗಝೂನಿ ಮಹಮ್ಮ ದ, ಶಹಾಬುದ್ದೀನ, ಅಲ್ಲಾ ಉದ್ದಿನ, ಬಾಬರ, ತೈಮುರ ಲಿಂಗ, ನಾದಿರಶಹ ಇವರಿಗೂ ಈ ವಿದ್ಯೆ ಯಜ್ಞಾನವು ಇತ್ತೊ ಇಲ್ಲೊ ತಿಳಿಯುವದಿಲ್ಲ, ಈ ವಿದ್ಯೆಯು ಅಕಬರನಕಾಲದಿಂದ ಸುರುವಾಯಿತು. ಅಕಬರ, ಶಿವಾಜಿ, ಅಬ್ದಾಲಿಅಹಮ್ಮದ, ಹೈದರಅಲ್ಲಿ, ಹರಿಸಿಂಹ, ಮೊದ ಲಾದ ಸೇನಾಪತಿಗಳು ಯುದ್ಧ ಮಾಡಿದ ಕೌಶಲ್ಯವನ್ನು ನೋಡಿದರೆ ಸೇನಾಪತಿಗಳಲ್ಲಿರುವ ವಿದ್ಯಾ ಜ್ಞಾನವು ಅವರಿಗೆ ಇತ್ತಂದು ತೋರು ಇದೆ ರಣರಂಗದಲ್ಲಿ ಶಾಂತತನದಿಂದಿದ್ದು, ಯುಕ್ತಿಯಿಂದ ಕಾದುವ ಶಕ್ತಿಯು ಅವರಲ್ಲಿತ್ತು, ನಮ್ಮ ಇತಿಹಾಸದಲ್ಲಿ ಇಂಧ ರಣಧುರಂಧರರ ಹೆಸರುಗಳು ತೀರಸ್ವಲ್ಪಅವೆ. ಇವರಲ್ಲಿ ರಾಜಸಿಂಹನು ಯಾವದಕ್ಕೂ ಕಡಿಮೆಯೆನಿಸಿರಲಿಲ್ಲ, ಅವನಂಧ ರಣಧುರಂಧರರಾದ ಸೇನಾಪತಿಗಳು ಯುದ್ದ ವಿದ್ಯೆಯ ಮಲಸ್ಥಾನವಾದ ಯುರೋಪಖಂಡದಲ್ಲಿ ತೀರಸ್ವಲ್ಪ ಜನರಾದರೆಂದು ಹೇಳಿದರೆ ಅತಿಶಯೋಕ್ತಿಯಾಗದು, ಅತ್ಯಲ್ಪ ಸೇನಾ ಸಹಾಯದಿಂದ ರಾಣಾರಾಜಸಿಂಹನಂಧ ಭಯಂಕರ ಸಾಹಸವನ್ನು ಹಾಲಂ ಡದ ವೀರಪುರುಷನಾದ ವಿಲಿಯಮ್‌ನ ಹೊರ್ತು ಸೃಷ್ಟಿಯಲ್ಲಿ ಬೇರೆ ಯಾರೂ ಮಾಡಿದಂತೆ ತೋರುವದಿಲ್ಲ, ರಾಜಸಿಂಹನ ಯುದ್ಧದ ಕುಶಲ ತೆಯನ್ನು ವಿಸ್ತಾರ ಭಯದಿಂದ, ಸ್ವಲ್ಪದರಲ್ಲಿಯೆ ಹೇಳಿರುತ್ತೇವೆ. ನಾಲ್ಕು ಕಡೆಯಿಂದ ಬರುವ ಔರಂಗಜೇಬನ ಸೇನೆಯು ಒಂದೇ ಸ್ಥಳದಲ್ಲಿ ಒಟ್ಟು ಗೂಡುವಕಾಲಕ್ಕೆ ಯುದ್ದ ವಿಶಾರದನಾದ ರಣಪಂಡಿತನು ಮಾಡಬಹುದಾದ ಕೆಲಸವನ್ನು ರಾಜಸಿಂಹನು ಮಾಡಿದನು. ಮೇವಾ ಡದ ಸುತ್ತು ಪರ್ವತಸಾಲುಗಳ ಆಚೆಮಗ್ಗುಲು ಉದೇಪುರದ ಅಂಕಿತದ ಲ್ಲಿರುವ ಪ್ರದೇಶವನ್ನು ಬಿಟ್ಟು ಪರ್ವತದ ಮೇಲೆ ಒಂದು ಛಾವಣಿಯನ್ನು ಹಾಕಿದನು, ಮತ್ತು ತನ್ನ ಸೇನೆಯನ್ನು ಮರುಪಾಲಾಗಿ ವಿಭಾಗಿಸಿ ದನು. ಹಿರಿಯಮಗನಾದ ಜಯಸಿಂಹನಿಗೆ ಸೇನೆಯ ಒಂದು ಭಾಗ
ಪುಟ:ರಾಣಾ ರಾಜಾಸಿಂಹ.djvu/೧೪೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.