೧೬L ರಾಣಾ ರಾಜಸಿಂಹ [ ಪ್ರಕ • + ny wh • • • •h •n • ಹೇಳುವೆ? ವಿಶ್ವಾಸಘಾತಕಿಯಾದ ಚಂಡಾಲನಿಗೆ ಶಿಕ್ಷೆಯ, ಭಯಂಕ ರವಾಗಿಯೆ ಆಗಬೇಕು, ನೀಚ, ಕಪಟಿ, ಮತ್ತು ಸ್ವಾರ್ಥಿಗಳಾದ ನರಾಧ ಮರ ಉತ್ಪತ್ತಿಯು ನಮ್ಮ ರಾಜಸ್ತಾನದಲ್ಲಿಯೇ ಇದನ್ನು ಕೇಳಿ ನನ್ನ ಹೃ ದಯವು ತಪ್ತವಾಗಿ ಹೋಗಿದೆ. ಎಲ್ಲೊ, ನರಾಧಮ, ನೀನು ನನ್ನ ಕೈ ಯ್ಯಲ್ಲಿ ಒಂದುವೇಳ ಸಿಕ್ಕಿದ್ದರೆ ತುಂಡುತುಂಡಾಗಿ ಕತ್ತರಿಸಿ ಹಾಕಿ ಕೂರ ಪಶುಗಳಿಂದ ತಿನ್ನಿಸುತ್ತಿದ್ದೆನು, ರಾಜಸ್ತಾನವೇ, ನಿನ್ನು ದರದಲ್ಲಿ ಎಂಧೆಧ ರತ್ನ ಗಳು ಉತ್ಪತ್ತಿಯಾದವ' ರಾಣಾಸಂಗ, ಹಮೀರ, ಪ್ರತಾಪಸಿಂಹ ಮೊದಲಾದವರೂ ನಿನ್ನ ಮಕ್ಕಳೇ ಅಲ್ಲವೆ? ಅಂಧ ನಿನ್ನ ಹೊಟ್ಟೆಯಲ್ಲಿ ವೀರಸೇನನಂಧ ಗಾರುಗಲ್ಲುಗಳೂ, ಹುಟ್ಟಬಹುದೆ? ಇದೆಲ್ಲವೂ ಕಾಲದ ಮಹಿಮೆಯೆ? ರಜಪೂತರ ಭಾಗ್ಯ ಸೂರ್ಯನು ರಾಹುವಿನಿಂದ ಹಿಡಿಯ ಲ್ಪಟ್ಟಿರುವನು, ಅಂಧವರಲ್ಲಿ ಇಂಧ ಕೀಳರ ಉತ್ಪತ್ತಿಯ? ಇಷ್ಟು ಮಾತಾ ಡುವದರಲ್ಲಿ ರಾಣಿಯು ತೀರ ಗಲಿತಳಾಗಿ ಹೋದಳು ಆಕೆಯ ಬುದ್ದಿಯು ಇಲ್ಲದಂತಾಗುತ್ತ ಬಂತು. ಕೂತಸ್ಥಳದಲ್ಲಿಯೇ ಮೂರ್ಛಹೊಂದಿದಳು ಈಗ ಏನುಮಾಡಬೇಕೆಂಬ ವಿಚಾರವೂ ಸವಾರರಿಗೆ ತೋರದಂತಾಯಿತು ಕೂಡಲೆ ಪ್ರತಾಪಸಿಂಹನು ಅಲ್ಲಿಗೆ ಒಂದನು ಪ್ರತಾಪನು ಅವಳ ಕಣ್ಣುಗ ಳಿಗೆ ನೀರು ತೊಡೆದು, ಸಮಾಧಾನಗೊಳಿಸ ಎತ್ನಿಸಿದನು. ದಾಸಿಯರು ಗಾಳಿಹಾಕತೊಡಗಿದರು ಕೆಲವರು ವೈದ್ಯನನ್ನು ಕರೆಯಲಿಕ್ಕೆ ಹೋದರು. ವೈದ್ಯನು ಬಂದಾಯಿತು, ಆತನು ಯಾವದೋ ಒಂದು ಪದಾರ್ಥವನ್ನು ಮಸಿ ನೋಡುವದಕ್ಕೆ ಕೊಟ್ಟನು, ಆಮೇಲೆ ರಾಣಿಯು ಕಣ್ಣು ತೆರೆ ದಳು, ಕಣ್ಣು ತೆರೆದಮೇಲೆ ಸ್ವಲ್ಪ ಹೊತ್ತಿನವರೆಗೆ ಸ್ವಸ್ಥ ಮಲಗಿಕೊಂಡಿರು ವಂತ ಕೈಸಂಜ್ಞೆಯನ್ನು ಮಾಡಿ ವೈದ್ಯನು ಹೊರಟುಹೋದನು ಪ್ರತಾ ಪನು ದಾಸಿಯ ಕೈಯೊಳಗಿನ ಬೀಸಣಿಗೆಯನ್ನು ತಕ್ಕೊಂಡು ಆಕೆಗೆ ಒಳಗೆಹೊಗುವದಕ್ಕೆ ಹೇಳಿದನು ಈಗ ಅಲ್ಲಿ ರಾಣಿಹಾಗು ಪ್ರತಾಪ ಇವರಿ ೬ರೇ ಉಳಿದರು ಕೆಲಹನಮೇಲೆ ಪ್ರತಾಪನು_“ಒಮ್ಮಿಂದೆ ಮೆಲೆ ಪ್ರಕೃತಿಯು ಈರೀತಿ ಹೆಚ್ಚು ಕಡಿಮೆಯಾಗಲಿಕ್ಕೆ ಕಾರಣವೇನು ?
ಪುಟ:ರಾಣಾ ರಾಜಾಸಿಂಹ.djvu/೧೮೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.