೧೭೦ ಕಾಣಾ ರಾಜಸಿಂಹ [ಪ್ರಕರಣ ಗೋಪೀನಾಧರಾದೊಡನನ್ನೇ ಕಳಿಸುತ್ತಿದ್ದನು ಆದರೆ ಆತನಲ್ಲಿ ಸೇನೆಯು ಸ್ವಲ್ಪವಿರುವದು ಆದ್ದರಿಂದ ತಮ್ಮ ಸೇನೆಯನ್ನು ಅತ್ತ ಕಡೆಗೆ ಕಳಿಸು ವದು ಯೋಗ್ಯವಾದದ್ದು. ನೀವು ಅತ್ತ ಕಡೆಗೆ ಹೋಗಿ ದಿಲೇರಖಾನನ ಸೇನೆಯನ್ನು ನಾಶಗೊಳಿಸಬೇಕೆಂಬ ಅಪೇಕ್ಷೆಯದೆ ?” ಎಕ್ರಮಸಿಂಹನು ಅತ್ಯಂತ ಹರ್ಷಿತನಾದನು ತಮ್ಮ ಅಪ್ಪಣೆಯು ಶಿರಸಾಮಾನ್ಯವಾದದ್ದೆಂದು ಹೋಗಲುದ್ಯುಕ್ತನಾದನು ಇಷ್ಟರಲ್ಲಿ ಪ್ರತಾಪಸಿಂಹನು ಅಲ್ಲಿಗೆ ಒರುವನೆಂಬ ಸುದ್ದಿಯು ಬಂತು ಬೇಗನೆ ಆತ ನಿಗೆ ಒಳಗ ಬರಹೇಳಿದನು ಪ್ರತಾಪನು ಒಳಗೆ ಬಂದು ರಾಣಾನಿಗೆ ನಮಸ್ಕರಿಸಿ ಹತ್ತರ ಕುಳಿತಿರುವ ತನ್ನ ಕಕ್ಕನನ್ನು ನೋಡಿದನು ಕ್ಷಣ ಹೊತ್ತು ಆತನು ಗೊಂದಲದಲ್ಲಿ ಬಿದ್ದನು ತನ್ನ ಕಕ್ಕನು ಇಲ್ಲಿಗೆ ಹ್ಯಾಗೆ ಬಂದನೆಂಬದು ತಿಳಿಯಲೊಲ್ಲದು ಮೊದಲಿನಿಂದಲೂ ವಿರುದ್ಧವಾಗಿದ್ದ ವನು ಈಗ ಇಲ್ಲಿ ಬಂದದ್ದನ್ನು ಕಂಡು ಅತ್ಯಂತ ಆಶ್ಚರ್ಯವುಂಟಾಗಿತ್ತು ವಿಕ್ರಮಸಿಂಹನು ಆತನ ಈ ಸ್ಥಿತಿಯನ್ನು ಕಂಡು-• ಬಾಳಾ ಪ್ರತಾಪ ಈ ಅಭಿಮಾನಶೂನ್ಯನಾದ ಕಕ್ಕನಿಗ ಒಂದಾವರ್ತಿ ಆಲಿಂಗನವನ್ನು ಕೊಡು, ನಿನ್ನ ಮೊದಲಿನ ಸ್ವಾಭಿಮಾನಹೀನನಾದ ಕಕ್ಕನು ತೀರಿಹೋಗಿ ಆತನ ಸ್ಥಳದಲ್ಲಿ ರಜಪೂತಸ್ತಾನದ ಉಪಯೋಗಕ್ಕೆ ಬೀಳುವದಕ್ಕೆ ಉದ್ದ ವಿಸಿದ ಹೊಸಕಕ್ಕನಿಗೆ ಭೆಟ್ಟಿಯನ್ನು ಕೊಡು ” ಎಂದದ್ದನ್ನು ಕಂಡು ಪ್ರತಾಪಸಿಗ ಎಲ್ಲ ಸಂಗತಿಯ ಹೊಳೆಯಿತು ತಟ್ಟನ ಎದ್ದು ಬಂದು ಕಕ್ಕನ ಚರಣಕ್ಕೆ ನಮಸ್ಕರಿಸಿ ದೃಢವಾಗಿ ಆಲಂಗಿಸಿಕೊಂಡನು -« ಕಕ್ಕ ನವರೇ, ಕಡೆಗೆ ಸತ್ಯಪಕ್ಷವನ್ನ ಕೂಡಿದಿರಿ ಅದರಿಂದ ನನ್ನ ಹೃದಯವು ಆನಂದಾತಿಶಯದಿಂದ ತುಂಬಿಹೋಗಿರುವದು, ಈಶ್ವರನು ಕಲ್ಯಾಣ ಮಾಡಿದನು ಇನ್ನು ಮೇಲೆ ನನಗೆ ಯಾವ ಚಿಂತೆಯ ಇಲ್ಲ ಎಂದು ರಾಣಾನ ಕಡಿಗೆ ತಿರುಗಿ- ಮಹಾರಾಣಾರಾಜಸಿಂಹನ ಚರಣಾರ್ಪಣ ಕಾಗಿ ಇಪ್ಪತ್ತೈದು ಸಾವಿರ ಸವಾರರೊಂದಿಗೆ ನಮ್ಮ ಗುಪ್ತ ವೀರರ ಸಂಘದ ರಾಣಿಯವರು ಸಿದ್ಧರಾಗಿರುತ್ತಾರೆ ಮಹಾರಾಜರೇ, ಅಪ್ಪಣೆ ಯನ್ನು ಕೊಡಬೇಕು.'
ಪುಟ:ರಾಣಾ ರಾಜಾಸಿಂಹ.djvu/೧೮೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.