ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಪ್ತವಾರ್ತಯ ಪರಿಸ್ಟೋಟ ೧೮೫ ಮಾತಾಜಿ, ನಿಮ್ಮನ್ನು ಮಾತೆಯಂತೆ ತಿಳಿದಿರುತ್ತೇನೆ ನೀವು ನನ್ನ ತಾಯಿ ತಂದೆಗಳನ್ನು ತೋರಿಸತಕ್ಕವರು ಅವರು ನನ್ನ ಜನ್ಮದಾತೃಗಳು. ನೀವ ನನ್ನ ಧರ್ಮದ ಮಾತಾಪಿತರರು ನನಗೆ ಒಮ್ಮೆ ಅವರನ್ನು ತೋ ರಿಸಿರಿ ನನ್ನಿಂದ ಹೆಚ್ಚು ಹೊತ್ತು ತಡೆಯಲಿಕ್ಕಾಗದು.” ಈವರೆಗೆ ಪತನಿಯು ಸ್ವಸ್ಥವಾಗಿ ಕುಳಿತಿದ್ದಳು. ಇನ್ನು ಮೇಲೆ ಅವಳ ಮನಸ್ಸು ತಡೆಯದಂತಾಯಿತು ಎದ್ದು ಒಂದು ಆ ಪ್ರೇಮ ನಂದಿನಿ ಯನ್ನು ದೃಢವಾಗಿ ಆಲಿಂಗಿಸಿಕೊಂಡು ಅತ್ಯಂತಕಾತರಸ್ವರದಿಂದ “ಮಗಳೆ, ಇವಳೇ ನಿನ್ನ ಅಭಾಗಿನಿಯಾದ ತಾಯಿಯು ಈಹೊ ತಿನವರೆಗೆ ಈ ಚಂಡಾಲಿನಿಯು ನಿನ್ನ ಅಂತಃಕರಣವನ್ನು ನೋಡಿದಳು. ಮನಸ್ಸು ಕಲ್ಲು ಮಾಡಿಕೊಂಡು ನಿನ್ನನ್ನು ಗೊಂದಲದಲ್ಲಿ ಕೆಡವಿದಳು. ಅದಕ್ಕೋಸುಗ ಅತ್ಯಂತ ಪಶ್ಚಾತ್ತಾಪವೆನಿಸುತ್ತದೆ ಬಾಳಾ, ಈ ಹೊತ್ತು ನಾನು ಕೃತಕೃತ್ಯಳಾದೆನು. ” ಎಂದಳು. ತರುಣಿ-“ಏನು, ದೇವಿ, ನೀನು ನನ್ನ ತಾಯಿಯೆ ? ಹಾಗಾ ದರೆ ಈ ಅಭಾಗಿನಿಗೆ 'ನಾನೇ ನಿನ್ನ ತಾಯಿಯೆಂದು ಈವರೆಗೆ ಯಾಕೆ ಹೇಳಲಿಲ್ಲ?' ಮಾತೆ, ಅಹಹಾ, ಮಾತೆ, ನಾನು ಧನ್ಯಧನ್ಯಳು, ದೇವಾ, ನನ್ನ ಬ ಯಕೆಯನ್ನು ಪೂರ್ಣಗೊಳಿಸಿದಿ ಒಳ್ಳೇದು ತಾಯಿ, ತಾತನೆಲ್ಲಿರುವನು, ?” ಎಂದು ಪರಮಹಂಸನ ಕಡೆಗೆ ಆಶ್ಚರ್ಯ ಯುಕ್ತದೃಷ್ಟಿಯಿಂದ ನೋಡ ಹತ್ತಿದಳು. ಇನ್ನು ಮೇಲೆ ಇವಳನ್ನು ಸಂಶಯದಲ್ಲಿರಿಸುವದು ಒಳಿತಲ್ಲ ವೆಂದು ಪರಮಹಂಸಮ ಮುಂದಕ್ಕೆ ಬಂದು-ಬಾ, ಮಗಳೆ, ನಾನೆ? ನಿನ್ನ ಅಭಾಗಿಯಾದ ತಂದೆಯು ಕೂಡಲೆ ಆ ತರುಣಿಯು (“ಅಪ್ಪಾ, ಅಪ್ಪಾ,” ಎಂದು ಪರಮಹಂಸನನ್ನು ಅಪ್ಪಿಕೊಂಡಳು. ಆಮೇಲೆ “ಅಪ್ಪಾ, ಅವ್ಯಾ, ನೀವು ನನ್ನ ಮನಸನ್ನು ಎಷ್ಟು ನೋಡಿದಿರಿ,? ಇಷ್ಟು ವರ್ಷಗಳವರೆಗೆ ನಾನು ನಿಮ್ಮ ಸಹವಾಸದಲ್ಲಿದ್ದು, ನಾನು ನಿಮ್ಮನ್ನು ತಿಳಿ ಯಲಿಲ್ಲ. ನಾನಂಧ ಮೂರ್ಖಳು ನಿಮ್ಮ ಮೋಹಮಮತೆಗಳು ನಿಜವಾದ