೫] YYYY ವಿಷಯಸುಖವು ಹೆಚ್ಚೇ ಅಪತ್ಯ ಸುಖವು ಹೆಚ್ಚಿ ? ೩೫ • • • • • • • • • • • • •, , ಚಿತ್ರಿಸಿದ್ದರೆ, ಆ ನಿಸರ್ಗಸೂಂದರಿಯ ಚಿತ್ರವು ಅತ್ಯಂತ ಲೋಕ ಪ್ರಿಯವಾಗುತ್ತಿತ್ತು ರಾಣಾನು ಏನೂ ಮಾತಾಡದೆ, ಸುಮ್ಮನೆ ನಿಂತಿದ್ದನು ಕೆಲಹೊತ್ತಿನಮೇಲೆ ಚಂಚಲಕುಮಾರಿಯು “ ಅಪ್ಪಾ, ತಮಗ ವಿಕ್ರಮಸಿಂಹನೆಂಬ ಹಸರುಂಟು ಮೊಗಲರ ಈ ಕಪಟಕೃತ್ಯ ವನ್ನು ಉದೇಪುರಾಧಿಸತಿಗೆ ತಿಳಿಸಿರಿ ನೀವೂ ಅವರೂ ಕೂಡಿ ಯುದ್ಧದ ಸಿದ್ಧತೆಯನ್ನು ಮಾಡಿ ತಮ್ಮ ಕುಲದ್ದಾಗಲಿ ಹಸರಿನದಾಗಲ ಕೀರ್ತಿ ಯನ್ನು ಕಾಯ್ದು ಕೊಳ್ಳಿರಿ, ನಿಮ್ಮ ಪರಾಕ್ರಮವನ್ನು ಶತ್ರುವಿಗೆ ತೋರಿ ಸಿರಿ ಈ ಕೆಲಸದಲ್ಲಿ ಶ್ರೀಭಗವತಿ ಚಿತೋಡದ ದೇವಿಯು ತಪ್ಪದೆ ತಮಗ ಕೀರ್ತಿಯನ್ನು ಕೊಡುವಳು ಮತ್ತು ಆ ಮೊಗಲರಿಗೆ ತಮ್ಮ ಕಪತಕೃತ್ಯದ ಫಲವೂ ದೊರೆಯುವದು ” ಎಂದು ಹೇಳುತ್ತಿರಲು ರಾಣಾನು ಚಕಿತಮುದ್ರಯಿಂದ " ಚಂಚಲೆ, ಮೊಗಲಸೇನೆಯೊಡನೆ ಯುದ್ಧ ಮಾಡಬೇಕಂಬ ಮಾತು ಸಾಮಾನ್ಯವಾದದ್ದಲ್ಲ ನೀನನ್ನು ವಂತೆ ಉದೇಪುರದ ರಾಣಾನ ಸಹಾಯವನ್ನು ಪಡೆಯುವುದು ಕಾಲಶ್ರಯ ದಲ್ಲಿಯೂ ಸಾಧ್ಯವಲ್ಲ ಉದೇಪುರದ ಮನೆತನದವರು ನಮಗೆ ವಂಶ ಪರಂಪರಾಗತವಾದ ಶತ್ರುಗಳು ಆತನಿಗೆ ಶರಣು ಹೋಗಿ ಆತನ ಆಶ್ರಯ ದಿಂದ ನನ್ನ ವೈಭವವನ್ನು ರಕ್ಷಿಸಿಕೊಳ್ಳಲೇನು? ಒಲ್ಲೆ, ಉದೇಪ್ಪರದವರಿಗೆ ಶರಣುಹೋಗಲೊಲ್ಲೆನು ಬೇಕಾದಂಧ ಸಂಕಟಗಳೊದಗಿದರೂ ಸಹಿ ಸುತ್ತನೆ ಆದರೆ ಅವರಿಗೆ ಮಾತ್ರ ತಲೆ ಬಗ್ಗಿಸಲಾರೆನು ” ಇಷ್ಟು ಹೇಳಿ ವಿಕ್ರಮಸಿಂಹನು, ದೊಡ್ಡದೊಂದು ಉಸುರುಗರೆದು ಸಮ್ಮನಾದನು ತಂದೆಯ ಈ ಶೋಕಮಯವಾದ ಸ್ಥಿತಿಯನ್ನು ಕಂಡು ಚಂಚಲ ಕುಮಾರಿಯು ಅತಿಶಯ ಸಂತಾಪಗೊಂಡು ೧೯ ಅಪ್ಪಾ, ಇಲ್ಲದಿದ್ದರೆ ಪ್ರತಾಪಣ್ಣನನ್ನು ಸೆರೆಯಿಂದ ಬಿಡಿಸಿ ಯುದ್ಧದ ಸಿದ್ಧತೆಯನ್ನು ಮಾಡಿರಿ ಪ್ರತಾಪನಂಧ ವೀರನ ಕತ್ತಿಯಮೇಲ ಪಿಶ್ವಾಸವನ್ನಿಡಿರಿ, ಆತನ ಶಕ್ತಿಯು ಎಂದೂ ಹಿಂಜರಿಯುವದಲ್ಲ, ಒಂದು ವೇಳೆ ತಮಗೆ ಅಪಜಯವಾಗಿ ರಣದಲ್ಲಿ ಬಿದ್ದು ಸತ್ತದ್ದಾದರೆ ಒಂದು ಕ್ಷತ್ರಿಯೋಚಿತ ಕರ್ಮವನ್ನು
ಪುಟ:ರಾಣಾ ರಾಜಾಸಿಂಹ.djvu/೪೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.