೬೨ ರಾಣಾ ರಾಜಸಿಂಹ ಪ್ರಕರಣ • . ་་་་གནའ་་འ་་ ་ག - ಎ . ಕಲ್ಲು ಮಣ್ಣು ರಾಶಿಯಾಗಿ ಬಿದ್ದಿತ್ತು ಮೇಲಿನ ಶಿಬಿರವ, ಛಿನ್ನ ವಿಚ್ಛಿನ್ನ ವಾಗಿತ್ತು ಆದರೆ ಬಿಳೇ ಕಲ್ಲಿನ ನಾಲ್ಕು ಕಂಬಗಳ ನಡುವೆ ದೊಡ್ಡ ದೊಂದು ಘಂಟೆಯು ಇನ್ನೂ ತೂಗಾಡುತ್ತಿತ್ತು ದೇವಾಲಯದ ಎದು ರಿನಲ್ಲಿ ಉಪವನವು , ಉಪವನವು ದೇವಾಲಯದಷ್ಟು ಬೆರ್ಣಾವನ್ನೇ ಯನ್ನು ಹೊಂದಿರಲಿಲ್ಲ ಇದು ಈಶ್ವರನ ದೇವಾಲಯವ ಬಾಂಶ ಹನ ಸೇನಾಪತಿಯಾದ ರಾಜಾ ಜಯಸಿಂಹನು ಈ ದೇವಾಲಯಕ್ಕೆ ಪೂಜೆಗೋಸ್ಕರ ಒರುತ್ತಿದ್ದನು ಅಂತೆ ಮೊಗಲರು ಇದನ್ನು ಇನ್ನೂ ನಾಶಮಾಡಿದ್ದಿಲ್ಲ ಪೂಜಾ ಸಾಹಿತ್ಯಗಳನ್ನು ತೆಗೆದುಕೊಂಡು ಒಂದ ಬಾಲಿಕೆಯು ಮೊದಲು ದೇವಾಲಯದಲ್ಲಿಯಾಗಲಿ ಬೇರೆ ಮಗ್ಗುಲಲ್ಲಿಯಾಗಲಿ ಯಾರಾ ದರೂ ಇರುವರೋ ಹ್ಯಾಗೊ ? ಎಂಬದನ್ನು ಪರೀಕ್ಷಿಸಿ ನೋಡಿದಳು ಯಾರೂ ಇಲ್ಲೆಂದು ಗೊತ್ತಾದ ಮೇಲೆ ಒಳಗ ಹೋಗಿ ಭಕ್ತಿಪೂರ್ವಕ ವಾಗಿ ಈಶ್ವರನ ಪೂಜೆಯನ್ನು ಮಾಡಹತ್ತಿದಳು ಸರಾಸರಿ ಅರ್ಧತಾ ಸಿನವರೆಗ ಪೂಜೆಯಾದ ಮೇಲೆ ಏಕಾಂತ ಸ್ಥಳವನ್ನು ಕಂಡು ತನ್ನ ಸುಸ್ವ ರವಾದ ಸುಕೋಮಲ ಕಂಠದಿಂದ ಭಕ್ತಿ ಪೂರಿತವಾದ ಈಶವನದ ಪದ ವನ್ನು ಹೇಳಹತ್ತಿದಳು ಅಹಾ ! ಆಕೆಯ ಕಂಠ ಮಾಧುರ್ಯವನ್ನು ಎಷ್ಟಂದು ವರ್ಣಿಸುವದು ” ಪುರಾಣಗಳಲ್ಲಿ ಯಕ್ಷ, ಗಂಧರ್ವ, ತಿನ್ನರ ಮೊದಲಾದವರ ಗಾಯನ ಪಟುತ್ವದ ವರ್ಣನೆಯಲ್ಲವ್ರ ಅತಿಶಯೋಕ್ತಿ ಯಾಗಿರಬಹುದು. ಈ ಪಾಲಿಕೆಯ ಕಂಠದಂತೆಯೇ ರೂಪವಾದರೂ ಅಪೂರ್ವ ಮನೋಹರವಾಗಿತ್ತು ಮೊದಳ ನಿರ್ಜನವಾದ ವನ ಅದರೊಳಗ ಏಕಾಂತ ದೇವಾ ಲಯದ ಗರ್ಭಾಗಾರ, ಅಲ್ಲವನ್ನೂ ತುಂಬಿ ಪ್ರವಾಹ ರೂಪದಿಂದ ಹರಿ ಯುವ ಗಾಯನದ ಸುಸ್ವರದ ಆಲಾಪ, ಆ ಮೇಲೆ ಕೇಳುವುದೇನು ? ಆ ಗಾಯನದ ನಾದದಿಂದ ಪಕ್ಷಿಗಳು ತಮ್ಮ ಕಿಲಬಿಲವನ್ನೂ ಬಿಟ್ಟು ಮೌನವಾಗಿದ್ದವ, ಇಷ್ಟರಲ್ಲಿ ಹೊರಗೆ ಒಂದು ಚಮತ್ಕಾರವಾಬತು
ಪುಟ:ರಾಣಾ ರಾಜಾಸಿಂಹ.djvu/೭೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.