೧೦] ಪರ್ಣಕುಟೀರದ ರಹಸ್ಯ , » • ” ೧ - ೧೧ ೧ ೧ ೧ ೧ ಆರ್ಯರ ಧರ್ಮಕ } ಭಾರ್ಯರ ತ್ಯಜಿಸಿರಿ | ಶೌರ್ಯದಿ ಸನ್ನಹ | ಕಾರ್ಯದೊಳ್ ಗೆಲ್ಲಿರಿ ||೨|| ಹರ ಹಗ ರವದಿಂ | ಚರ ಚರ ರಿಪುಗಳಿ | ತರಿತರಿದೊಟ್ಟು ತ | ಮೆರೆಯಿರಿ ಲೋಕದಿ !!೩!? ಈ ಗಾಯನದ ಕಡೆಯ ಚರಣವನ್ನು ಕೇಳಿದ ಕೂಡಲೆ ರಮ ಚಾನನು ಎಚ್ಚರತಪ್ಪಿದನು. ಪಹರೆಯವರಲ್ಲಿ ಒಬ್ಬನು ಮತ್ತೊಬ್ಬನನ್ನು ಕುರಿತು 'ಭೀಮ, ಇನ್ನು ಮೇಲೆ ಹೊತ್ತು ಮಾಡಿ ಪ್ರಯೋಜನವಿಲ್ಲ ಇವರನ್ನು ದರಬಾರಕ್ಕೆ ಕಳಿಸಿ ಬಿಡೋಣ ” ಎಂದನು ಎರಡನೆಯವನು ಶಿಳ್ಳು ಹಾಕಿದನು | ಅದನ್ನು ಕೇಳಿದ ಕೂಡಲೆ ಬೇರೆ ಇಬ್ಬರು ಅಂಧ ಕಪ್ಪನ್ನ ಆವರಣ ಉಳ್ಳ ವರೆ ಬಂದುನಿಂತರು ಅವರಿಬ್ಬರಿಗೆ ಇವರು ಏನೋ ಸನ್ನೆಯಿಂದ ಹೇಳಿ ದರು ಆಮೇಲೆ ಅವರಿಬ್ಬರು ರಮಜಾನ ಸಮಶೇರರನ್ನು ತಮ್ಮ ವಶಕ್ಕೆ ತೆಗೆದು ಕೊಂಡರು ಅದರೊಳಗಿನವನೊಬ್ಬನು ರಮಜಾನನಿಗೆ ನಿಮ್ಮ ಜೀವವನ್ನು ಉಳಿಸಿಕೊಳ್ಳುವ ಮನಸ್ಸಿದ್ದರೆ ಸುಮ್ಮನೆ ನನ್ನೊಡನೆ ನಡೆ ಯಿರಿ ” ಎಂದನು. ಅದನ್ನು ಕೇಳಿ ರಮಜಾನನೂ ಸಮಶೇರನೂ ಸುಮ್ಮನೆ ಅವರು ತೆಗೆದುಕೊಂಡು ಒಯ್ಯುತ್ತ ಹೋದರು, ಅಲ್ಲಿಂದ ಸ್ವಲ್ಪ ಅಂತರದ ಮೇ ಲೊಂದು ಬಾಗಿಲವಿತ್ತು ಅದನ್ನು ತೆರೆದು ರಮಜಾನ ಸಮಶೇರರನ್ನು ಕರಕೊಂಡು ಒಳಗೆ ಹೋದರು ಅವರ ಹಿಂದಿನಿಂದ ಕೂಡಲೆ ಬಾಗಿಲವು ಮುಚ್ಚಿ ಹೋಯಿತು ಅವರು ಕೂದ ಸ್ವಲ್ಪ ಹೊತ್ತಿನಮೇಲೆ ಭೀಮನು ಶಿವುನನ್ನು ಕುರಿತು ನೀನು ಅಗ್ನಿ ಕುಂಡದಲ್ಲಿ ಕಟ್ಟಿಗೆಯನ್ನು ಹಾಕುವದಕ್ಕೆ ಹೋದಾಗ್ಗೆ ಗುಪ್ತದ್ವಾರವನ್ನು ತೆಗೆದು ಬಂದಿದ್ದಿಯಾ? " ಶಿವು-« ನನ್ನಿಂದ ತಪ್ಪಾದದ್ದು ಸತ್ಯ; ಬಾಗಿಲವನ್ನು ಮುಚ್ಚಿ ಲಿಕ್ಕೆ ಮರೆತೆನು. ?”
ಪುಟ:ರಾಣಾ ರಾಜಾಸಿಂಹ.djvu/೮೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.