ಈ ಪುಟವನ್ನು ಪರಿಶೀಲಿಸಲಾಗಿದೆ
ಪ್ರಥಮಾಶ್ವಾಸಂ
೧೯

ಯಮನಾಲೋಕನಮೂತ್ರದಿಂ ಮರೆದು ಪಾಂಥಶ್ರೇಣಿ ನೀರಳ್ಕೆಯಂ,
ಶ್ರಮಮಂ ತೀರಮೆಯಂ ಪ್ರಪಾಂಗನೆಯರಂ ಕಣ್ಗಾವುದಾದೇಶದೊಳ್||೧೦೩||

ಕಂ||ತೀವಿದ ತಿಳಿಗೊಳದಿಂ ಪೊ
ಸ್ಟಾವರೆಗೊಳದಿಂದರಲ್ಪ ನೆಯಿಲ್ಗೊಳದಿ೦||
ದಾವಲ್ಗೊಳದಿಂ ಚೆಲ್ವಿಂ
ಗಾವಾಸಮ್ಮೆನಿಪು ವೊಪುವಾ ನಾಡೂರ್ಗಳ್||೧೦೪||

ಕಲಕಂಠಕ್ಕತನುಗೆ ಚಾ
ಪಲತಾರೋಹಣ ವಿಕಾರವಳಿಗಾಮ್ರ ಕುಜಾ
ವಲಿಗೆ ಮಧುವಿಕೃತಿ ಮಾನವ
ಕುಲಕ್ಕೆ ಕನಸಿನೊಳಮಿ೦ತಿವಿಲ್ಲಾ ನಾಡೊಳ್

ಸಮರತ ಸ೦ಜನಿತ ಪರಿ
ಶ್ರಮಮಂ ದಂಪತಿಗೆ ಕಳೆದು ಮಗುಳ್ದು೦ ರತಿರಾ||
ಗಮನಿರದೊದವಿಪುದು ನವೋ
ದ್ಗಮ ಪರಿಮಳವಿಷಯಮೆನಿಪ ವಿಷಯಸಮಾರಂ

ಆ ವಿಷಯವಿಲಾಸಿನಿಗೆ ಮಣಿಮಯ ಮುಕುರವೆನಿಸಿ--


ಕಣ್ಣೆಮೆಯಿಕ್ಕದಾರು ಋತುವುಂ ಬನಮಂ ಸಿರಿ ಕೆಯ್ವೊಳಂಗಳ
ಕಣ್ಣೆಮೆಯಿಕ್ಕದಲ್ಲಿ ಪಥಿಕರ್,ಗಿಳಿಸೋವಬಲಾಜನಂಗಳಂ॥
ಕಣ್ಣೆಮೆಯಿಕ್ಕದೀಕ್ಷಿಸೆಪುರಂ,ಸುರಲೋಕಮನೇಕೆ ಳಿಕ್ಕಟಂ|
ಕಣ್ಣೆವೆಯಿಕ್ಕದೆಂದು ನಗುಗುಂ ನಿಜರತ್ನಗೃಹಾಂಶು ಜಾಲದಿ೦||೧೦೭||

ಆ ಪುರದುಪವನದೊಳಸಮಶರ ಕಿಶೋರಕೇಸರಿ ಗಜರಿ ಗರ್ಜಿಸದ ಕೃತಕಗಿರಿ
ಗಳಿಲ್ಲ, ಮನೋಜರಾಜ ವಿಜಯಕೇತನ ಶಫರ ಸಂಚಾರಮಿಲ್ಲದ ಸರೋವರಂಗಳಿಲ್ಲ,
ರತಿಪತಿಯ ಹೂಗಣೆಯ ದೊಣೆಗೆದರದ ಪೂದೋ೦ಟಮಿಲ್ಲ,ಕುಸುಮಶರ ಕೋಪ
ಶಿಖಿಯನುದ್ದಮುರಿಪದ ತಣ್ಣಾಳಿಯಿಲ್ಲ, ರತಿಯ ಲಾವಣ್ಯರಸಪ್ರವಾಹದಿಂ ಪಲ್ಲವಿಸದ
1.ಒಲುಮೆಯಂ ಗ.ಘ 2.ನೋಲಗಿಸುವುದು. ಚ. 3.ಕಣ್ಣಿಮೆಯಿಕ್ಕವಾರು ಋತುವುಂ ಬನದಿಂ ಸಿರಿಕೆಯ್ಜಲಂಗಳಿಂ ಕಣ್ಣಿಮೆಯಿಕ್ಕಳಲ್ಲಿ ಪಥಿಕರ್ಗಿಳಿಸೋವಬಲಜನಂಗಳಿಂ/ ಕಣ್ಣಿಮೆಯಿಕ್ಕರೀಕ್ಷಿಸೆ. ಕ. ಖ. ಗ. ಘ.