ಮ||ಸ್ರ||ವನಜಂ ಪಂಕಾಂಕಿತಂ|ಗೋವಳಿತಿಯ ಮೊಲೆಯೊತ್ತಿಂಗೆ ಫಕ್ಕಾಯ್ತುಗೋವ
ರ್ಧನ ವಕ್ಷೋಭಾಗಮೌರ್ವಜ್ವಲನ ಬಹುಲ ಧೂಮೂಕುಲಂ ಪಾಲ ಮುನ್ನೀ||
ರೆನಪಾಯಸ್ಥಾನಮೆಂದಾ ಪುರವರದ ವಣಿಗ್ವಾಟ ಹರ್ಮ್ಯ೦ಗಳೊಳಮು|
ನ್ನಿನ ಸಂಚಾರಸ್ವಭಾವಂ ಪರಿಪಡೆ ಪದೆಪಿಂ ಲಕ್ಷ್ಮಿ ನಿಶ್ಚಿಂತಮಿರ್ಪಳ್ ||೧೨೨||
ಕಂ|| ದಿವಿಜ ವಿಮಾನಂ ಮಾಡದ
ನಿವು ಮಾಡಿದುವೆಂಬ ಭೇದಮಲ್ಲದೆ ಚೆಲ್ವಿಂ||
ನವರತ್ನರಚನೆಯಿ೦ ಭೇ
ದವಿಲ್ಲ ತತ್ಪುರದ ಭವನಮೆನಿತನಿತರೊಳಂ||೧೨೩||
ಇರುಳುಂ ಪಗಲುಂ ಪುರದೊಳ್
ಬೆರಸಿರ್ಪುವು ಪದ್ಮರಾಗಗೃಹದೆಳವಿಸಿಲಿ೦||
ಹರಿನೀಲಗೃಹದ ತಮದು
ಬೃರದಿಂ ಶಶಿಕಾಂತಗೃಹದ ಚಂದ್ರಾತಪದಿಂ||೧೨೪||
ಶಿಲ್ಪಿ ಗಡ ಕಲ್ಪಪತಿಸಂ
ಕಲ್ಪಂ ರತ್ತೋಪಲಂ ದಳಂ ಗಡ ಶೋಭಾ||
ತಲ್ಪಮಿದೆನ್ನದೆ ಬೇರೆ ವಿ
ಕಲ್ಪಿಸುವನೆ ಗಾ೦ಪನೆನಿಸುಗುಂ ಕರುಮಾಡಂ||೧೨೫||
ನೆಲೆಮಾಡದ ಪೊಸದೇಸಿಯ
ನೆಲೆ ಮಾಡದ ಕಲ್ಪಸದನಮೆಯ ದಣಂ
ನೆಲೆಯಾದುದಿದರ ತೆರದಿಂ
ನೆಲೆಯಾದುದೆ ಸಕಲಜನದ ಕಣ್ಗಂ ಮನಕಂ||೧೨೬||
ಉ|| ಬಾಳತೃಣಂಗಳೆಂದೆಳಸುಗುಂ ಪಸುರ್ಗಲ್ಗಳ ಕಾಂತಿಯಂ ಮೃಗೀ,
ಜಾಳಕಮಲ್ಲಿ ಮಾಣಿಕದ ಕೆಂಬೊಳಪಂ ಬಿಸಿಲೆಂದು ೧ನಟ್ಟಿರುಳ್
ಮೇಳಿಸುಗುಂ ರಥಾಂಗಮೆಳಿಲಿಕ್ಕಿದ ಮುತ್ತಿನ ಸೂಸ್ತಕಂಗಳಂ|
ಬಾಳಮೃಣಾಳಮೆಂದು ಕರ್ದುಕಲ್ ಬಗೆಗುಂ ಕಲಹಂಸ ಪೋತಕಂ||೧೨೭||
ಚ೦|| ಗಿಳಿ ಗಿಳಿವೆಣ್ಗೆ ಚೂತಫಲಮಂ ಕಲಹಂಸಿಗೆ ಹಂಸನಬ್ಜಕ೦|
ದಳಮನಿಭಂ ಕರೇಣುಗೆ ಲವಂಗ ದಳಂಗಳನೀವ ೨ಚಿತ್ರಮಂ॥
ತಳೆದು ವಿಲಾಸಮಂ ಮೆರೆವ ರಾಣಿಯವಾಸದ ಬಳ್ಳಿಮಾಡದು|
ಜ್ವಳ ಮಣಭಿತ್ತಿ ಚೆಲ್ವನೊಳಕೊಂಡೊಳಕೊಂಡುದಪೂರ್ವ ಭಿತ್ತಿಯಂ||೧೨೮||
1. ಕಟ್ಟರುಳ್, ಕ, ಖ.
2. ಭಾವಮಂ, ಗ, ಘ.