ಪಟುಪಟಹ ಶಂಖ ರುತಿ ದಿ
ಕ್ತಟಮಂ ತಳ್ಪೊಯ್ಯೆ ಗಂಡಮಂಡಲತಟದೊಳ್||
ನಟಿಯಿಸೆ ಮಣಿಕುಂಡಲ ರುಚಿ
ಪಟಲಂ ನೃಪನಣೆದು ನೂಂಕಿದಂ ವಾರಣಮಂ||||೧೦||
ಮ|| ಎರಡು೦ಪಕ್ಕದೆ ಪಣ್ಣಿದೋಜೆವಿಡಿಯಂ ಕೈಗೆಯ್ದು ಬಂದೇರಿ ಚಾ|
ಮರಮಂ ಕನ್ನೆಯರಿಕ್ಕೆ ಲೋಹಖುರವಾಹಂ ಸುತ್ತಿ ಕಾಲ್ಗಾಪಿನೊಳ್
ಬರೆಬಂದಂ ಧವಳಾತಪತ್ರದಡಿಯೊಳ್ ಕಾಲ್ಗೋದು ಗಂಧಾಂಧ ಸಿ೦|
ಧುರಮಂ ಮೆಯ್ಗಲಿ ವಜ್ರಬಾಹುಮಹಿಪಂ ವಜ್ರಾಯುಧಂ ಬರ್ಪವೋಲ್||೧೧||
ಕಂ|| ಕೆಲಕೆಲದೊಳ್ ರಾಜಸುತರ್
ಕೆಲಬರ್ ಬರೆ ರಾಜಚಿಹ್ನ ಪಾಳಿಧ್ವಜ ಸಂ||
ಕುಲಮುಂ ಭಟಕಟಕಮುಮಾ
ದಲೆಯೊಳ್ಬರೆ ವಜ್ರಬಾಹು ಪಯಣಂಬಂದಂ||೧೨||
ಅ೦ತು ಬರುತ್ತು೦--
ಮ|| ಮುಗಿಲ೦ ಮುಟ್ಟಿದ ರತ್ನಕೂಟರುಚಿಯಿಂ ಜ್ಯೋತಿರ್ವಿಮಾನಂಗಳಂ|
ನಗುವಂತುದತ ನಿರ್ಝರಪ್ಲವನದಿಂ ಗಂಗಾಸರಿತ್ಪೂರಮಂ||
ನಗುವಂತುನ್ನತಿವೆತ್ತ ಕಲ್ಪತರು ಸಾನೂದ್ಯಾನದಿಂ ಮೇರುವಂ|
ನಗುವಂತೊಪ್ಪುವುದಂ ವಸಂತಗಿರಿಯಂ ಕಂಡಂ ಮಹೀಮಂಡನಂ
ಆ ವಸಂತಗಿರಿಯೊಳೆಡೆಯಾಡುವ ವಿದ್ಯಾಧರ ವಧೂ ಜನದ ಸೋರ್ಮುಡಿಯಿಂ
ಸೂಸಿದ ಪೊಂಗೇದಗೆಯ ಕುತ್ತು೦ಗರಿಯ ತುರುಂಗಲುಮಂ, ಸಿದ್ದಕಾಮಿನಿಯರ
ಕಪೋಲಪತ್ರದಿಂ ಮದನಕೇಳಿಯೊಳುದಿರ್ದ ಕತ್ತುರಿಯುಮಂ ಕನಕ ಕದಳೀದಳದ ಪತ್ರಭಂಗಂಗಳುಮಂ, ಕಿಂಪುರುಷ ದಂಪತಿಗಳ ಸುರತಕೋಲಾಹಲದಿಂದನಂಗ ಸಂ
ಗೀತಕ ಸದನಮೆನಿಸುವೆಳಲತೆಯ ಜೊಂಪಂಗಳುಮಂ, ಕಿನ್ನರ ನಿತಂಬಿನಿಯರ್ ಚೆಂ ಬೊನ್ನಶಿಲೆಯ ಮೇಲೆ ವಿರಚಿಸಿದ ಚೆನ್ನೆಯ್ದಿಲೆಸಳ ಪಸೆಗಳುಮಂ,ಗಂಧರ್ವಗಣಿಕೆಯರ
ಬಹುಳಪರಿಮಳಕ್ಕೆಳಸಿ ಬಳಸುವೆಳದುಂಬಿಗಳ ನಾದಕ್ಕೆ ಬೆರ್ಚಿ ಬಿಸುಟ ಕರ್ಣಪೂರ
ಪಾರಿಜಾತ ಸ್ತಬಕ್ಷಂಗಳುಮಂ, ಓರೊಂದೆಡೆಯೊಳ್ ಕಿಸುಸಂಜೆಯಂ ಪಸರಿಸುವ ಕಿಸು
ಗಲ್ಲ ಕೂಟಂಗಳುಮಂ, ಓರೊಂದೆಡೆಯೊಳಂಧಕಾರಮಂ ಕೆದರುವಿಂದ್ರನೀಲದೊಡ್ಡುಂ
ಗಲ್ಗಳುಮಂ, ಅಲ್ಲಿಗಲ್ಲಿಗೆ ನಿರ್ದ್ರವಜಲದ್ರುತಿಯನೊಡರಿಸುವ ವೈಡೂರ್ಯಶಿಖರಂ,
ಗಳುಮಂ, ಅತ್ತಲಿತ್ತಲೆಳವೆಳ್ದಿಗಳಂ ಬಿತ್ತರಿಸುವ ಚಂದ್ರಕಾನ್ತದ ಪಾಸತೆಗಳುಮಂ
ಎಲ್ಲದೆಸೆಗಂ ತಣ್ಣಿಸಿಲನವಟಯಿಸುವ ವಜ್ರಶಿಲಾತಲಂಗಳುಮಂ, ಬೇರೆವೇರೆ ಮಾಣಿ
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೧೯
ಈ ಪುಟವನ್ನು ಪ್ರಕಟಿಸಲಾಗಿದೆ
೨೯