ಈ ಪುಟವನ್ನು ಪರಿಶೀಲಿಸಲಾಗಿದೆ

೪೬

ತೃತಿಯಾಶ್ವಾಸಂ



      ಅದೆಂತೆನೆ ವಿಭೀಷಣಂ ಸಾಗರಬುದ್ದಿವೆಸರ ನೈಮಿತ್ತಿಕನಂ ಬರಿಸಿ ರಾವಣನ ಮರಣಕಾರಣಮಂ ಬೆಸಗೊಳ್ವುದುಂ---

       ಕಂ|| ಏನುಂ ತೊದಳಿಲ್ಲಿದುವೆ ಶಿ
             ಲಾನಿಕ್ಷಿಪ್ತಾಕ್ಷರಂ ವಿಭೀಷಣರಣದೊಳ್||
             ಜಾನಕಿಯ ದೂಸರಿ೦ ಲಂ
             ಕಾನಾಥಂ ದಾಶರಥಿಯ ಕೈಯೊಳ್ ಮಡಿಗುಂ ||೨೩||

ಎನೆ ವಿಭೀಷಣಂ ವಿಷಣ್ಣನಾಗಿ---

       ಕಂ || ಆರ_ಲವರುತ್ಪತ್ತಿಗೆ
              ಕಾರಣಮೆನಿಸಿರ್ದ ಜನಕನಂ ದಶರಥನಂ||
              ಮಾರಣಮಂ ಪೊರ್ದಿಸುವೆಂ
              ಕಾರಣ ವಿಘಟನಮೆ ಕಾರ ವಿಘಟನಮಲ್ತೇ||೨೪||

ಎಂದು ತರಿಸಂದು--

ಚ||ಎನಗಿದಯುಕ್ತಮೆನ್ನ ಬಗೆ ಪಾಪನಿಬಂಧನಮೇವುದೆಂಬಿದಂ|
    ನೆನೆಯದೆ ತನ್ನ ಸೋದರನೊಳಪ್ಪ ವಿಪತ್ತಿಗಣಂ ವಿಭೀಷಣಂ||
    ಮನದೊಳಳಿಲ್ದು ನಿಮ್ಮನಳಿಯಲ್ಬಗೆದಂದನಿದರ್ಕೆ ತಕ್ಕುದಂ|
    ನೆನೆದಿರಿಮಾನಿದಂ ತಡೆಯದಿಂ ಜನಕಂಗರಿಪಲ್ಕೆ ಪೋದಪೆಂ||೨೫||

     ಎಂದು ನಾರದಂ ನೀರದಪಥಕ್ಕೆ ನೆಗೆದು ಮಿಥಿಳೆಯನೆಯ್ದಿ ಜನಕಂಗಮಾ
ಸ್ವರೂಪಮನರಿಪಿಪೋಪುದುಮಿತ್ತಲ್ ದಶರಥನಾ ವಾರ್ತೆಯೆಲ್ಲಮಂ ಸಮುದ್ರ
ಹೃದಯನೆಂಬ ತನ್ನ ಮಂತ್ರಿಮುಖ್ಯಂಗರಿಪುವುದುಮಾತನಿದರ್ಕೆ ಕಾಲವಂಚನಮೆ
ಕಾರಮೆಂದು ನಿಶ್ಚಯಂಗೆಯ್ದು ದಶರಥನಂ ಕಳಿಪಿ ಚಿತ್ರಕನುಂ ತಾನುಮಲ್ಲದೆ ಪೆರ
ರರಿಯದಂತು ಕರುವಿಡಿಸಿ ಲಾಕ್ಷಾರಸಾದಿಗಳಿ೦ ಸಪ್ತ ಧಾತುಗಳಂ ಪಡೆದು ವರ್ಣ
ಕ್ರಮಂ ಗೆಯ್ಯೆ----
      ಕಂ|| ಇದು ಭೂಪನ ರೂಪಿದು ಲೆ
            ಪ್ಪದ ರೂಪೆನಲೆ೦ತುಮರಿಯಲರಿದೆನೆ ಬಗೆಗೊಂ||
            ಡುದು ನಡೆವ ನುಡಿವ ತೆರದಿಂ
            ಪ್ರದೇಶಸೌಷ್ಠವಮದೇಂ ವಿಚಿತ್ರವೊ ಚಿತ್ರ೦||೨೬|| .

      ಅ೦ತು ಪರವಿದ್ದಮಂ ಪ್ರತ್ಯಕ್ಷಮಂ ಮಾಡಿದ ಚಿತ್ರಕನ ಪರಿಣತಿಯಂ ಮನದೆ