ಈ ಪುಟವನ್ನು ಪರಿಶೀಲಿಸಲಾಗಿದೆ

೪೯

ತೃತಿಯಾಶ್ವಾಸಂ



       ಅ೦ತವನ ತಂದ ತಲೆಯಂ ಕಡಳೊಳೀಡಾಡಿ ಜನಕನುಮನಂತೆಮಾಡಿ
ಮಗುಳೆ ಲಂಕೆಗೆ ಪೋಗಿ---

ಮ|| ಮನದೊಳ್ತನ ನೆಗಳ್ತೆಯಂ ನೆನೆದು ಕಷ್ಟಂಗೆಯ್ದೆನಾಸೀ ದಶಾ|
     ನನನಂ ಕೊಲ್ವವನಾವನೀ ಕಡಲನಾವಂ ದಾಂಟುವಂ ಲಂಕೆಗಾ||
     ವನೊ ಬರ್ಪಂ ಗಡ|ಭೂಮಿ ಗೋಚರನಿದಂ ನೈಮಿತ್ತಿಕಂ ಪೇಳ್ದೊಡಾ|
     ತನ ಮಾತಿಂಗವಿಚಾರಿತಂ ನೆಗಳ್ದೆನೆಂದುಬ್ಬೇಗಮಂ ತಾಳ್ದಿದಂ

     ಕಂ|| ಜಿನಗೃಹಮಂ ಪ್ರಾಯಶ್ಚಿ
           ತ್ತ ನಿಮಿತ್ತಂ ನಿರತಿಶಯಮೆನಲ್ಮಾಡಿಸಿದಂ||
           ತನಗೆ ಕಷಾಯೋದಯದಿಂ
           ಜನಿಯಿಸೆ ಪೊಲ್ಲಮೆಯನೊಳ್ಳಿದಂ ಸೈರಿಪನೇ||೩೩||

      ಅನ್ನೆಗಮಿತ್ತ ದಶರಥನ ಜನಕನ ಪರಿಜನಂ ಲೆಪ್ಪದರಸನಪ್ಪುದನರಿದು
ಸಂತೋಷಂಬಟ್ಟಿರ್ಪುದು೦: ಅತ್ತ ದಶರಥನುಂ ಜನಕನುಂ ರೂಪ ಪರಾವರ್ತನದಿ
ನನೇಕ ದೇಶಂಗಳಂ ನೋಡುವುದೆ ತಮಗೆ ವಿನೋದಮಾಗೆ ತೊಳಲುತ್ತುಂ ಬಂದು---

       ಕ೦|| ಸಕಲರ್ತುಕ ವನದಿಂ ದೀ
             ರ್ಫಿಕೆಯಿಂ ಪುಷ್ಕರಿಣಿಯಿಂ ಸರೋವರದಿಂ ಕೌ॥
             ತುಕಮನವರ್ಕಂಡರ್ಕೌ
             ತುಕ ಮಂಗಳಪುರಮನುರ್ವರಾ ನೂಪುರಮಂ||೩೪||

ಚ|| ಮಿಸುಗುವ ಪೊನ್ನಕೋ೦ಟೆ ಮುಗಿಲ೦ ತುಡುಕುತ್ತಿರೆ ಸೆಂಪುವೆತ್ತಗಳ್
     ಬಿಸರುಹಮುಳ್ಳರಲ್ದು ಸಿರಿ ಕಣ್ದೆರೆದಂತಿರೆ|ಸುತ್ತಲುಂ ಬನಂ||
     ಕುಸುಮಶರಂಗೆ ಪೊಚ್ಚಪೊಸ ಜೌವನದಂತಿರೆ|ರಾಜಧಾನಿ ಕ|
     ಣ್ಗಸದಳವೊಪ್ಪಿ ತೋರಿದುದು ಕೌತುಕ ಮಂಗಳಮಾತ್ತ ಮಂಗಳಂ||೩೫||
 
     ಆ ಪುರದ ಪೊರವೊಳಿಲನೆಯ್ದೆವರ್ಪಾಗಳ್---

     ಕಂ|| ಲಲನಾ ರತ್ನದೊಳಂ ಜಯ
           ಲಲನಾ ರತ್ನದೊಳಮಪ್ಪ ತೋಳ್ವೆರಗನನಾ||
           ಕುಲಮರಿಪುವಂತೆ ಬಲಗ
           ಣ್ಬಲಗೈ ಕೆತ್ತಿದುವು ದಶರಥಂಗೊರ್ಮೊದಲೊಳ್||೩೬||
     ಅಂತೆಯ್ದೆ ವರ್ಪುದುಮಾಪುರದ ಬಹಿಃಪುರೋದ್ಯಾನ ಪ್ರದೇಶದೊಳ್ ಕನಕ