ಈ ಪುಟವನ್ನು ಪರಿಶೀಲಿಸಲಾಗಿದೆ

೫೪

ರಾಮಚಂದ್ರಚರಿತಪುರಾಣಂ

 
      ಕಂ|| 1ಕಡುಕೆಯ್ದು ಗಂಡವಾತಂ
           ನುಡಿದಿದಿರಾದಂತೆ ಗಂಡನಾಗೆನುತುಂ ಕೈ||
           ಮುಡಗದೆ ದಶರಥನೆಚ್ಚಂ
           ಸಿಡಿಲಳ್ಗಿಡಿಗಳವೊಲಂಬನಂಬಟ್ಟುವಿನಂ ||೫೬||

ಅ೦ತಿಸುವುದುಂ

      ಕಂ|| ಉಡಿಯೆ ಪಳಿಯಿಗೆ, ವರೂಥಂ
            ಕೆಡೆಯೆ ಭುಜಾದಂಡ ವಜ್ರಮಯ ಕೋದಂಡಂ||
            ಕಡಿಕಂಡಮಾಗೆ,ಪರಿಪಡೆ
            ಪೊಡರ್ಪು,ಹೇಮಪ್ರಭಂ ಹತಪ್ರಭನಾದಂ||೬೦||

       ಆ ಸಮಯದೊಳ್ ದಶರಥನಭಯಘೋಷಣೆಯೊಡನೆ ಜಯಪತಾಕೆ ನಭಮ
ನಳ್ಳಿರಿಯೆ ಬೀರಸೇಸೆಯೊಡನೆ ಸೊಯಂಬರ ಸೇಸೆಯನಾಂತು ಪೌರಜನದ ಮನ
ದೊಡನೆ ಕೌತುಕಮಂಗಳ ಪುರಮಂ ಪುಗುವಾಗಳ್--

ಉ|| ಓಡಿಸಿದಾತನೀತನಿದಿರಾದ ವಿರೋಧಿಗಳಂ ವಿಲಾಸದಿಂ|
     ರೋಡಿಸಿದಾತನೀತನಸಮಾಯುದನಂ| ತನಗೊಲ್ದು ಮಾಲೆಯ೦||
     ಸೂಡಿಸಿದಾತನೀತನವನೀಶ್ವರ ಕನ್ಯೆಯನೆಂದು ತೋರಿ ಮಾ|
     ತಾಡಿದುದೊಲ್ದು ನೋಡಿದುದು ಪೌರ ವಧೂಜನಮಾದಿರಾಜನಂ||೬೧||

     ಅಂತು ಪುರಮಂ ಪೊಕ್ಕರಮನೆಗೆ ಬಿಜಯಂಗೆಯ್ವುದುಂ ದಶರಥಮಹೀ
ನಾಥನಪು ದನರಿದು--

ಉ|| ನೋಡಿರೆ ಕನ್ನೆಯಂ ದಶರಥಂಗನುರೂಪೆಯನೀವ ಸೈಪು ಕೈ|
     ಗೂಡಿದುದೆಂದು ತನ್ನ ವಿಭವಕ್ಕನುರೂಪಮೆನಲ್ವಿವಾಹಮಂ||
     ಮಾಡಿದನುತ್ಸವಕ್ಕೆ ಪೊರಗೊರ್ವರುಮಿಲ್ಲೆನೆ ಕೊಟ್ಟು ಸಂತಸಂ|
     ಮಾಡಿದನಾರೊಳಂ ಶುಭಮತಿ ಕ್ಷಿತಿನಾಥನಿದೇನುದಾತ್ತನೋ||೬೨||

     ಆಗಳಾ ವಿವಾಹಾನಂತರಂ ಕೈಕೆವೆರಸು ದಶರಥನಯೋಧ್ಯೆಗೆ ಜನಕಂ ಮಿಥಿಳೆಗೆ
ಪೋಗಿ ಮುನ್ನಿನಂತೆ ಸುಖದಿನರಸುಗೆಯ್ಯುತ್ತಿರ್ದರಿತ್ತಲ್ ದಶರಥ ನರೇಂದ್ರನೊಂದು
ದಿವಸಂ--