೬೭
ಕಂ|| ಅರುಣಮಣಿ ಕರ್ಣಭೂಷಣ
ಮರೀಚಿ ೧ಪಸರಿಸಿದ ರಾಮಚಂದ್ರ ಶರೀರ೦||
ಪರಿಭವಿಸಿದುದೆಳವಿಸಿಲಾ
ವರಿಸಿದ ಕಮನೀಯ ಪುಂಡರೀಕ ಶ್ರೀಯಂ||೧೨೩||
ಅರಸಿಯ ಮನದೊಳ್ ಕೆಂಜಡೆ
ದೊರೆಕೊಳಿಸುವುದುಚಿತಮೊಡನೆ ಕಜ್ಜಲರುಚಿಯೊಳ್||
ಪೊರೆದ ನಯನೋತ್ಪಲಂಗಳ್
ದೊರೆಕೊಳಿಪುದು ಚಿತ್ರಮಲ್ತೆ ರಾಗೋತ್ಸವಮಂ||೧೨೪||
ಧಾತ್ರಿಯೊಳನ್ಯರ ತೇಜೋ
ಮಾತ್ರಮನಾಂ ೨ಸಲ್ಲಿಸೆನೆಂಬ ತೆರದಿಂ ಪೊಯ್ಯಲ್||
ಧಾತ್ರಿಯ ಕಯ್ಯಿಂ ನಿಮಿರ್ವ೦
ಕ್ಷತ್ರಶಿಖಾಮಣಿ ಮಣಿಪ್ರದೀಪಾಂಕುರಮಂ||೧೨೫||
ಕಿವಿಗಿನಿದೆನಿಪ್ಪ ವೀಣಾ
ರವದೊಳನಾದರಮನುಂಟುಮಾಡಿತು ತನೂ||
ಭವನ ತಳರ್ನಡೆಯೊಳ್ ಪೊ
ಣ್ಮುವ ಮೃದುಪದ ಕನಕ ಕಿಂಕಿಣೀ ಝಣರುಣಿತ೦||೧೨೬||
ಶ್ರವಣಕ್ಕರ್ಥವ್ಯಕ್ತಿಯ
ನವಟಯಿಸದೆ ನೆಗಳ್ವಿ ವಶ್ಯಮಂತ್ರಾಕ್ಷರದಂ||
ತೆವೊಲೆಲ್ಲರುಮಂ ಸೋಲಿಸಿ
ದುವು ೩ತೊದಲಂನುಡಿವ ರಾಮಚಂದ್ರನ ನುಡಿಗಳ್||೧೨೭||
ತಿಳಿಗೊಳದೊಳಗೆಡೆಯಾಡುವ
ಕಳಹಂಸನ ಬಾಲಕೇಳಿ ಪುದುವೆನೆ ಮಧುಪಾ||
ಟಳನೇತ್ರಂ ಧವಳಾಂಗಂ
ಪಳಿಕಿನ ಕುಟ್ಟಿಮದಮೇಲೆ ದಟ್ಟಡಿಯಿಟ್ಟಂ||೧೨೮||
೧. ಪರಿಕಲಿಸೆ, ಚ,
೨. ಸಹಿಸೆ, ಘ.
೩. ತೂದಳೊಳ್ಪುದಿನ. ಗ. ಫ.