೭೨
ಮ|| ಸೊಡರಂ ಪೊತ್ತಿಸಿಕೊಂಡು ಪೋಗೆ ಸೊಡರೊಳ್ ತೇಜಂ ಗುಣಾಧಿಕ್ಯದಿಂ|
ಕಡುಗೊರ್ವಂ ಪಡೆವಂತೆ| ತಮ್ಮ ವಿಶದಪ್ರಜ್ಞಾ ಗುಣೋತ್ಕರ್ಷದಿಂ||
ಪಡೆಮಾತೇನರುವತ್ತುನಾಲ್ಕು ಕಳೆಯುಂ ತತ್ಕೋವಿದರ್ ಮೆಚ್ಚೆ ನೂ|
ರ್ಮಡಿ ಮೇಲಾದುವು ರಾಮಲಕ್ಷ್ಮಣರೊಳೇಂ ಸತೇವೆ ಸಾಮಾನ್ಯ ಮೇ
ಚ|| ಕಲಿತನಮುಂ ಮಹಾಬಲಮುಮಳ್ಳನ ಕಯ್ದುವೆ ಕಯ್ದು ಪಂದೆದು|
ರ್ಬಲನೆನಿಸಿರ್ದವಂ ಪಿಡಿದ ಕೈದುವದೇತರ ಕೈದುವೆಂಬಿನಂ||
ಕಲಿಸಿದ ಭಾರ್ಗವಾ೧ತ್ಮಜರನೋಡಿದ ತಜ್ಞರ ಮುಯ್ವು ನೆತ್ತಿಯಂ|
ಗೆಲೆ ಸಲೆ ರಾಮಲಕ್ಷ್ಮಣರದೇಂ ನೆರೆ ಕಲ್ತರೊ ಕೈದುವೆಲ್ಲಮಂ||೧೫೦||
ಮ|| ಮಿಗೆ ವಂದೆಲ್ಲರ ಬಿಲ್ಲ ಬಿನ್ನಣದ ಬಿಣ್ಪಂ ರಾಮನೇಸೆಂಬಿನಂ|
ಮಿಗೆ ತನ್ನೇಸುಪಮಾನಮಾದುದೆನೆರಾಮಂ ಕಲ್ತ ಬಿಲ್ಬಲ್ಮೆಯಂ||
ಪೊಗಳಿಲ್ವೇಳ್ಪುದೆ|ರಾಮನೊಳ್ ಸದೃಶವೆಂಬನ್ನಂ ಧನುರ್ವಿದ್ಯೆಯಿಂ|
ಜಗಮಂ ಮೆಚ್ಚಿಸಿ ಚಾಪ ಚಾಪಲತೆಯಂ ಕೊಂಡಾಡಿದ೦ ಲಕ್ಷ್ಮಣಂ||೧೫೧||
ಅಂತವರ್ ಸಕಲಶಸ್ತ್ರ ಶಾಸ್ತ್ರ ವಿದ್ಯಾವಿಶಾರದರಾಗಿ ಕುಮಾರ ದತ್ತಾತಿಶಯ
ಮನಪ್ಪುಕೆಯ್ವುದುಂ---
ಚ|| ಹಿಮಕರ ಬಿಂಬದಿಂ ಕಡೆದುದೋಪಳಿಕಿಂ ಪಡೆದತ್ತೊ ಪೂಗಳಿ೦|
ಸಮೆದುದೊ ಚಂದ್ರಕಾಂತಮಣಿಯಿಂ ಬೆಸಕೆಯ್ದುದೊಮೌಕ್ತಿಕ೦ಗಳಿ೦||
ಸಮನಿಸಿದತ್ತೊ. ಕೋಮಲಮೃಣಾಳಿಕೆಯಿಂ ಪರಿಪೂರ್ಣಮಾಯ್ತೊ ಪೇ|
ಳಿಮಿದೆನೆ ರಂಜಿಸಿತ್ತು ರಘುರಾಮನ ಪಾಂಡುರ ದೇಹಮ೦ಡಲ೦||೧೫೨||
ಕಂ|| ಉನ್ನತ ಲಲಾಟ ಪಟ್ಟ೦,
ಮನ್ನಿಸದಷ್ಟಮಿಯ ಚಂದ್ರನಂ ನಗೆಗಣ್ಗಳ್|
೨ಮುನ್ನಡೆವಿಡಿದುವು ಕಮಳಮ
ನಿನ್ನೇವಣ್ಣಿಪುದೊ ರಾಮನಭಿರಾಮತೆಯಂ||೧೫೩||
ಚ|| ತೆರೆ ಕರೆಗಣ್ಮಿದಿಂಗಡಲ ಗಾಡಿಯನೇಳಿಸೆ ತೋರಮುತ್ತಿನೈ|
ಸರದ ಮರೀಚಿಯಿಂ ಸಿರಿಯ ತಾಯ್ವನೆ ರಾಮನ ಪೇರುರಂ ಮನೋ||
ಹರಮೆನಿಸಿತ್ತು ವಾರವನಿತಾಜನ ವಶ್ಯವಿಧಾನ ವೇದಿಯೊಳ್|
ದೊರೆಯೆನಿಸಿತ್ತು ಧೈರ್ಯಗುಣ ರೋಹಣಶೈಲ ಶಿಲಾತಲೋಪಮಂ||೧೫೪||
೧. ತ್ಮಜನಿನೋದಿತ ತಜ್ಞರ ಮುಯ್ವು ನೆತ್ತಿಯುಂ, ಚ,
೨. ಮುನ್ನುರೆ ಕ. ಖ. ಗ. ಘ.