ಈ ಪುಟವನ್ನು ಪ್ರಕಟಿಸಲಾಗಿದೆ

೭೬

ರಾಮಚಂದ್ರಚರಿತಪುರಾಣಂ

     ಆ ವಿದೇಹಿಯ ಗರ್ಭನನಾನಿಶಾಚರನದೇ೦ಕಾರಣದಿಂ ಕಾದಿರ್ದನೆಂದೊಡೆ
ಚ೦ದ್ರಪುರಮನಾಳ್ವಂ ಚಂದ್ರಧ್ವಜನಾತನರಸಿ ಮನಸ್ವಿನಿಯೆಂಬಳಾಕೆಗೆ ಪುಟ್ಟದ ಚಿತ್ತೋತ್ಸವೆಯೆಂಬ ಬಾಲಿಕೆಯುಮಾನೃಪನ ಪುರೋಹಿತನ ಮಗನಪ್ಪ ಕಪಿಳನೆಂಬ
ಬಾಲಕನುಂ--
     ಕಂ|| ಒಡನಾಡಿಯುಮೊಡನೋದಿಯು
           ಮೊಡವಳೆದುಂ ಪಲವುಕಾಲದಿಂದನುಬಂಧಂ||
           ಗಿಡದೊಡಲೆರಡಸುವೊ೦ದೆನೆ
           ಗೆಡೆವಕ್ಕಿಗಳಂತೆ ಕೂಡಿ ನಲಿಯುತ್ತಿರ್ದ‌ರ್||೬||

     ಅಂತವರೋರೊರ್ವರಂ ಮಚ್ಚಿ--

ಮ|| ಪದೆಪಿ೦ ಚುಂಬಿಸದುಮ್ಮಳಂ ಬಯಸಿದಾಗಳ್ಮನ್ಮಥಕ್ರೀಡೆ ಕೂ|
     ಡದಳಿಲ್ ಕಳ್ದೊಡಗೂಡುವಂಜಿಕೆ ಮನಕ್ಕುದ್ವೇಗಮಂ ಮಾಡೆ ನೋ||
     ಡದೆ ತಾಯ್ತಂದೆಯಗಲ್ಕೆಯಂ ಮದನ ರಾಗೋನ್ಮಾದದಿಂ ಮು೦ದುಗಾ|
     ಣದೆ ಮುಗ್ಲಾಶಯರಾ ವಿದಗ್ಧಪುರಮಂ ಪೊಕ್ಕಿರ್ದರಾಯಿರ್ವರುಂ||೭||

     ಕಂ|| ಅನಿತಿಂದ್ರಿಯ ಸುಖಮುಂ ಸ್ಪ
           ರ್ಶನ ಸುಖಮೊಂದಳೊಳಡಂಗಿದತ್ತೆನೆ ನೃಪ ನಂ||
           ದನೆಯುಂ ದ್ವಿಜ ನಂದನನುಂ
           ಮನೋಜ ಸುಖರಸ ವಿಲೀನ ಮಾನಸರಿರ್ದರ್||೮||

      ಅಂತಿರ್ಪುದುಮೊಂದುದಿವಸಂ ಪ್ರತಾಪಸಿಂಹನ ಮಗಂ ತತ್ಸುರಾಧಿಪತಿ--
 
ಚ|| ಕೊಡೆವಿಡಿದಂತೆ ಮಂಡಳಿಸೆ ಮೇಲೆ ಕಿರೀಟಮರೀಚಿ ಸುತ್ತಲುಂ|
     ಕಡಿತಲೆಯಾಳ್ ಕಡಂಗಿಬರೆ ಮಾರ್ಗಮೊಡಂಬಡೆ ರಾಜಮಾರ್ಗದೊಳ್||
     ನಡೆಯೆ ಹಯಂ ವಿಳಂಬಿತದೆ ಕು೦ಡಳಮಂಡಿತನೇಂ ವಿಳಾಸಮಂ|
     ಪಡೆದನೊ ಪದ್ಮರಾಗ ಮಣಿಕುಂಡಲ ಮಂಡಿತ ಗಂಡಮಂಡಲಂ||೯||

     ಅ೦ತು ಬರುತ್ತು೦--

ಚ|| ಶರದದ ಚ೦ದ್ರನಂ ನಗೆಮೊಗಂ ನಗೆ ಚಂದ್ರಮರೀಚಿಮಾಲೆಯಂ|
     ತರಳ ಕಟಾಕ್ಷಮಾಲೆ ಗೆಲೆ ಬಂದು ಗೃಹಾಂಗಣದೊಳ್ ಲತಾ ತನೂ||


೧.ವುಜ್ಜುಗ. ಖ. ಗ ಘ ; ವ೦ಜಮೆ. ಚ.