ಕರ್ಣಕುಂಡಲಮಂ ಬಾಲಕನ ಕರ್ಣಯುಗಳಂಗಳೊಳಮರ್ಚಿ ಪರ್ಣಲಘುವಿದ್ಯೆಯಿ
ನೀಡಾಡಿ ಪೋಪುದುಂ--
ಚ||ತನುರುಚಿ ಕರ್ಣಕುಂಡಲಮರೀಚಿ ವಿಯತ್ತಳಮೆಲ್ಲಮಾ ಪಳ|
ಚ್ಚನೆ ಬೆಳಪಂತು ಪರ್ಣಲಘುವಿದ್ಯೆಯೊಳೊಯ್ಯನೆ ಬಂದು ಖೇಚರೇ೦||
ದ್ರನ ಮೃದುತಲ್ಪದೊಳ್ ಸುರ ಕುಮಾರಕನಂದುಪಪಾತ ತಲ್ಪದೊಳ್ |
ಜನಿಯಿಸಿದಂತೆ ಕಣೆ ಪಡೆದಂ ಶಿಶು ನಿರ್ಭರ ಹರ್ಷ ಭಾರಮಂ||೨೦||
ಅಂತಾ ಶಿಶುವಂ ದಕ್ಷಿಣಶ್ರೇಣಿಯ ರಥನೂಪುರಚಕ್ರವಾಳಪುರಮನಾಳ್ವಿಂದುಗತಿ ವಿಯಚ್ಚರೇಂದ್ರನಂದಿನ ಸೂತೃವಂದ ಪುಷ್ಪವತಿ ವೆಸರ ಮಹಾದೇವಿ ಫಲವತಿಯಾದ
ಳೆನಿಸಿ ಕೊಟ್ಟು ಕುಂಡಲ ಪ್ರಭಾ ಮಂಡಲ ವಿಳಾಸಮಂ ತಳೆದನಪ್ಪುದರಿಂ ಪ್ರಭಾ
ಮಂಡಲನೆಂದು ಹೆಸರನಿಟ್ಟನನ್ನೆಗಮಿತ್ತಲ್--
ಉ|| ಈಗಳೆ ಪುಟ್ಟದೆನ್ನ ಶಿಶುವಂ ಕರುಣಂ ತನಗಿಲ್ಲದೆತ್ತಿಕೊಂ|
ಡಾಗಸದತ್ತಲಂತಕನ ದೂತನವೋಲ್ ಪಿಡಿದುಯ್ದ ನೊರ್ವಸಿ||
ನ್ನೇ ಗಳ ಗೆಯ್ವೆನೆಂದಳಿ ವಿದೇಹಿ ನವೋತ್ಪಲಮಾಲೆ ಕಾರುವಂ|
ತಾಗೆ ಕದುಷ್ಣ ವಾರಿಗಳನುಣ್ಮಿದುವಾಕೆಗೆ ಬಾಷ್ಪವಾರಿಗಳ್||೨೧||
ಕಂ॥ ಬಡವಂ ಚಿಂತಾಮಣಿಯಂ
ಪಡೆವಂತೆಂತಾನುಮೊರ್ವನಂ ತನಯನನಾ೦||
ಪಡೆದಾಗಳೆ ಮತ್ತೊರ್ವ೦
ಪಿಡಿದುಯ್ದಂ ದನುಜನೆಂದು ಶೋಕಂಗೆಯ್ದಳ್||೨೨||
ರಕ್ಷಾವಿಧಾನಮಂ ತನು
ರಕ್ಷಕರಂ ಬಗೆಯದೆನ್ನ ತನಯನನುಯ್ದಂ||
ರಾಕ್ಷಸನೆಂದಳ್ತಿಳ್ ಧವ
ಳೇಕ್ಷಣೆ ದಳದಳಿಸಿ ಸುರಿಯೆ ಬಾಷ್ಪಜಲಂಗಳ್||೨೩||
ಕುಳವೃದ್ಧೆಯರುಂ ಧಾತ್ರೀ
ಕುಳಮುಂ ಶುದ್ದಾಂತ ಕಾಂತೆಯರ್ಕಳುಮಳಿಲಿಂ||
ದರೆ ಕಂಡು ಜನಕನತಿ ವಿ
ಹ್ವಳ ಚಿತ್ತಂ ಶೋಕರಸಮನೊಳಕೊಂಡಿರ್ದಂ||೨೪||
ಆಗಳ್ ಮೌಹೂರ್ತಿಕರೀ ಶುಭಮುಹೂರ್ತದೊಳ್ ಪುಟ್ಟಿದ ಬಾಲಕ೦ಗ ಮೋ ಘಮಪಾಯಮಾಗದೀಕೆಯುಮಗಣ್ಯ ಪುಣ್ಯವತಿಯಕ್ಕುಮೆಂದು ಶೋಕಮನದಿರ್ಪೆ
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೬೯
ಈ ಪುಟವನ್ನು ಪ್ರಕಟಿಸಲಾಗಿದೆ
ಚತುರ್ಥಾಶ್ವಾಸಂ
೭೯