೮೨
ನ್ನರಿವಂತುಟನುಳ್ಳ೦ತುಟ
ನರಿಪುವೆನವಧರಿಪುದೆಂದು ಚರನಿಂತೆಂದಂ||೩೬||
ಕಂ||೧ಧನದಾಚಲಕ್ಕೆ ಬಡಗಣ
ದೆನೆ ವಿಜಯಾರ್ಧಾಚಲಕ್ಕೆ ತೆಂಕಣದೆನೆ ದು||
ಷ್ಟ ನಿವಾಸಮರ್ಧ೨ಪರಮೆಂ
ಬ ನಾಮದಿಂ ಮ್ಲೇಚ್ಛದೇಶಮಿರ್ಪುದಪಾರಂ||೩೭||
ಅಲ್ಲಿ ಮಯೂರಮಾಲೆಯೆಂಬ ಶಬರ ಶಿಬಿರಮನಾಳ್ವ ತರಂಗತಮನೆಂಬ ಶಬರ ನಾಯಕಂ ತನ್ನಾಳ್ವನಾಡ ಬೇಡವಡೆಯೆಲ್ಲಮಂ ಕೂಡಿಕೊಂಡು ಕಪೋತ ಕಾಂಭೋಜ
ಕಣಾದಿ ದೇಶಂಗಳಂ ಕಿಡಿಸುತ್ತುಂ ಬ೦ದು--
ಉ|| ನಾಡರಸಂ ತಗುಳ್ದು ತಡೆಗಾಲದ ಮಾರಿಯ ಮೂರಿಯಂತೆ ಕ|
೩ಣ್ಗೋಡದೆ ಬಾಲ ವೃದ್ಧ ವನಿತಾ ವಧೆಗೆಯ್ದು ಕವರ್ತೆಗೊಂಡು ಸು||
ಟ್ಟೋಡಿಸಿ ಜಾತಿಯಂ ಕಿಡಿಸಿ ನಾಡನವಂ ಕಡಿದಿಕ್ಕಿ ಮೆಚ್ಚಿದಂ|
ಬೇಡರಸಂ ತರಂಗತಮನಾನಿರೆ ಬೇಡರಸೆಂಬ ಗರ್ವದಿಂ||೩೮||
ಎಂದು ಬಿನ್ನವಿಸೆ--
ಕ೦|| ಚರ ವಚನಮನಾಲಿಸಿ ತುಂ
ಬುರಕೊಳ್ಳಿಯ ತೆರದಿನ೦ಬರಕ್ಕೆ ಸಿಡಿಲ್ದಾ||
ಹರಿವಂಶಕೇತು ಕಣ್ಣಿಸು
ಸೆರೆವರಿಯೆ ಕೃತಾಂತನಂತೆ ಮುಳಿದಿಂತೆಂದಂ||೩೯||
ಉ|| ಒಂದೆ ಕುಠಾರದಿಂದಡವಿಯಂ ಕಡಿವಂತಿರೆ ಪೋಡುಗಾರನೆ|
ನ್ನೊ೦ದೆ ಭುಜಾಸಿಯಿಂ ಶಬರಕೋಟಿಯನಿಕ್ಕಿ ಪಿಶಾಚ ಕೋಟಿಗಾ||
ನಂದಮನುಂಟುಮಾಳ್ಪೆನುರಿದಾನಿದನೇಳಿಸಿದಂದು ದುರ್ಯಶೋ|
ದುಂದುಭಿ ನಾದಮಾವರಿಸದಿರ್ಕುಮೆ ಕೂಡೆ ಜಗ೦ಗಳೆಲ್ಲಮಂ||೪೦||
ಕಂ||ಇರಿಯದೆ ಬೇಡಿದೊಡೀಯದೆ
ಬರಿದೆ ಕುಲೀನತೆಗೆ ಬೆಸೆದು ಪಾರ್ಥಿವ ಶಬ್ದ||
ಕೈರೆವಟ್ಟಿನಿಸಿ ಧರಿತ್ರಿಗೆ
ಪೊರೆಯೆನಿಪಂ ರಾಜ ನಾಮಧಾರಕನಲ್ತೇ||೪೧||
೧. ಕನಕಾ. ಚ. ;
೨. ಪುರ, ಗ.
೩. ; ಣ್ಣಾಡದೆ. ಚ.