೮೬
ಕಂ|| ರುಂಜೆಯ ದನಿ ದಿಕ್ಪಾಲರ
ನಂಜಿಸೆ ತಳ್ತೊಗೆವ ಕೋಡ ಕಾಳೆಯ ದನಿ ದಿ||
ಕ್ಕುಂಜರಮಂ ಬೆದರಿಸಿ ನಭ
ಮಂ ಜೇವೊಡೆಯುಲಿಪು ಸುತ್ತಿ ಮುತ್ತಿತ್ತಾಗಳ್||೫೬||
ಪಲದಿವಸಕ್ಕೆಂತಾನುಂ
ಕಲಹಂ ದೊರೆಕೊಂಡುದೆಂದು ಕೆಲಬರ್ ಬಿಲ್ಲಂ||
ಗೋಲೆಗೊತ್ತಿ ತೀವಿ ತೆಗೆದೇಂ
ನಲಿವರಿದರೊ ಜವನ ದೂತರೆನಿಸಿ ಕಿರಾತರ್||೫೭||
ಕರಿಘಂಟಾನಾದಂ ಹಯ
ಖುರಪುಟ ನಿನದಂ ವರೂಥ ಚೀತ್ಕಾರಂ ಕಿಂ||
ಕರ ಚಾಪ ಟಂಕೃತಂ ಭೋ
ರ್ಗರೆವಿನಮಾರ್ದೆತ್ತಿದತ್ತು ವನಚರ ಸೈನ್ಯಂ||೫೮||
ಮತ್ತಿತ್ತ ರಾಮಚಂದ್ರನ ಬಲಮೆ ಚಂದ್ರಬಲವಾಗೆ--
ಕಂ||ಆನೆ ಹಯಂ ತೇರಾಳೆಂ
ಬೀನಾಲ್ಕುಂ ಸೇನೆ ಬೇಡವಡೆಯೊಡೆಯನ ಪೇ॥
ರಾನೆ ಹಯಂ ತೇರಾಳೆಂ
ಬೀನಾಲ್ಕು೦ಸೇನೆಯೊಡನೆ ತಾಗಿದುವಾಗಳ್||೫೯||
ಉ|| ಪಂದಲೆ ಪಾರೆ ಪುಟ್ಟಿ ಬಿಸುನೆತ್ತರ ಸುಟ್ಟುರೆ ಬಾಣಜಾಲದಿಂ|
ಪಂದರವಿಕ್ಕಿದಂತಿರೆ ನಭಂ ಮದದಾನೆಯ ದಂತ ಶಲ್ಕವೆಂ||
ಟು೦ದೆಸೆಗುಳ್ಕದಂತೆಸೆಯೆ ಕೂರಸಿ ಕೂರಸಿಯೊಳಳ್ಪಂಚೆ ಭೋ|
ರೆಂದೊಡನುಣ್ಮೆ ತೋರಗಿಡಿ ತಾಗಿದುವಂದೆರಡುಂ ಚತುರ್ಬಲಂ||೬೦||
ಅಂತು ಕಾದುವಾಗಳ್---
ಚ|| ಇನಿತು ಸಿಡಿಲ್ಗೆ ಕಾಯ್ಪಿನಿತು ನಂಜಿನ ಗಾಳಿಗೆ ವೇಗವಿಲ್ಲೆನಲ್|
ಕನಕನನಾಜಿಯೊಳ್ ಪಿಡಿದು ಕಟ್ಟಿದನಳ್ಕುರಿ ಸುತ್ತಿ ಮುತ್ತಿದಂ||
ಜನಕನನೆಚ್ಚನಚ್ಚುಡಿಯ ಲಲ್ಷ್ಮಣನೇರಿದ ತೇರನಾವನಾಂ|
ಪನೊ ಯಮನಂತರಂಗ ಸುಭಟೋತ್ತಮನಂ ಮಹಾಜಿಯೊಳ್||೬೧||
ಶಾ|| ತೇರಚ್ಚಂ ಮುಳಿಯೆಚ್ಚು ಬಿಲ್ಲನುಡಿಯೆಚ್ಯಶ್ವಂಗಳಂ ಸೂತನಂ|
ಕೂರಂಬಿ೦ ಕೆಡೆಯೆಚ್ಚು ತಾಂ ಗಡೆನಗಂ ಮಾರೂಂಪ ಗಂಡಂ ಗಡೆ೦||