೮೮
ತಾದುದು ಗಾಳಿಗೊಡ್ಡಿದ ಮುಗಿಲೆಣೆಯಾದುದು ಕೂಡೆಯೊಕ್ಕಿದಂ।
ತಾದುದು ರಾಮಬಾಣ ಹತಿಯಿಂದಿದಿರಾದ ವಿರೋಧಿಸಾಧನಂ||೬೭||
ಆಗಳ್--
ಕಂ|| ಬಲವಳಿಯೆ ತರಂಗತಮಂ
ಪಲಾಯನೋದ್ಯುಕ್ತನಾಸೆವಟ್ಟಂ ಜಂಘಾ||
ಬಲಮಂ ದಶರಥರಾಮನ
ಶಿಲೀಮುಖಕ್ಕೆಡರುವಂತವಂ ದಶಮುಖನೇ||೬೮||
ಓಡಲೊಡರಿಸುವೊಡಂ ತೊಡೆ
ಸೇಡೊಡರಿಸಿದಪ್ಪುದೆಂದು ಭಯರಸದಿಂದ||
ಲ್ಲಾಡೆ ಮನಂ ಕೈದುವನೀ
ಡಾಡಿದನ೦ಜಿಸುಗುಮಾರುಮಂ ರಾಮಶರಂ||೬೯||
ತುಳಿಲಾಳ್ತನಕ್ಕವಂ ನೀ
ರೀಳಿವಂತಳವಳಿದು ಸೂಸೆ ಕಣ್ಣೀರ್ತೇರಿಂ||
ದಿಳಿದಂ ನೆಲಕ್ಕೆ ಜಸಮಡಿ
ಗಿಳಿವಿನೆಗಂ ಲುಬ್ಧಕಂ ನೆಲ೦ ಪಳಿವಿನೆಗಂ||೭೦||
ಚ|| ಸುಗಿದಿರೆ ಚಂದ್ರಮಂಡಲದಮುಂದೆ ತಮಂ ಕೆಡೆದಿರ್ದುದೆಂಬಿನಂ|
ಮುಗಿಯೆ ಕರಾಂಬುಜಂ ಕುವಲಯಂ ನಗುವಂತಿರೆ ರಾಮಚಂದ್ರನೇ||
ಳ್ಗೆಗೆ ದೆಸೆಗೆಟ್ಟು ತೊಟ್ಟನೆ ತರಂಗತಮಂ ಶರಣೆಂದು ಬೀಳ್ವುದುಂ|
ಗಗನಮನಾಗಳಾವರಿಸಿದತ್ತಪಹಾರ ಘನಾನಕಸ್ವನಂ||೭೧||
ಕಂ||ಅಂಬರಮಂ ವಿಜಯಪತಾ
ಕಾಂಬರವೊಡನೊಡನೆ ಸಕಲ ದಿಗ್ವನಿತಾವ||
ಕ್ತ್ರಾಂಬುಜಮನಭಯಘೋಷಂ
ಚುಂಬಿಸಿದುವು ಕಳಿದುದಮರ ಕುಸುಮಾಸಾರಂ||೭೨||
ಅ೦ಜದಿರಂಜದಿರೆನೆ ಮುಗಿ
ದಂಜಲಿಪುಟಮಂ ತರಂಗತಮನಿದಿರೊಳ್ನಿಂ||
ದ೦ಜನಗಿರಿಯವೊಲಿರೆ ಕೊ
ಟ್ಟಂ ಜಯಜಾಯಾಸಹಾಯನಭಯಮನಾಗಳ||೭೩||