ಈ ಪುಟವನ್ನು ಪ್ರಕಟಿಸಲಾಗಿದೆ

೯೭

ಚತುರ್ಥಾಶ್ವಾಸಂ

     ಅಂತು ಬಂದು ತನ್ನ ತಂದುಪಾಯನಮಂ ಕೊಟ್ಟೆರಗಿ ಪೊಡೆವಟ್ಟು ದೇವ!
ನಮ್ಮ ಬನದೊಳೊಂದು ಭದ್ರಗಜಮಿರ್ದುದೆಂದು ಬಿನ್ನವಿಸೆ--
     
     ಕಂ||ಜನಕ ವನ್ಯ ಗಜಾಲೋ
           ಕನ ಕೌತುಕ ಚಿತ್ತನಾದನುಚಿತಮೆ ವಲಮಾ||
           ವನೊ ಭೂಭುಜಂ ಗಜಪ್ರಿಯ
           ನೆನಿಸದನರಸಾನೆಯಿಲ್ಲದೇನೊಪ್ಪುಗುಮೇ||೧೧೭||

     ಅನಂತರಂ--
    
     ಕಂ||ಪರಿಜನಮುಮಾಪ್ತಜನಮುಂ
           ಪರಿಕಾರರುಮೋಜೆವಿಡಿಯುಮೊಡವರೆ ವನ್ಯ||
           ದ್ವಿರದನ ಬಂಧನ ಕೌತುಕ
           ನರಣ್ಯಮಂ ಮುಟ್ಟಿವಂದನಂದು ನರೇಂದ್ರಂ ||೧೧೮||

      ಆ ಮಹಾಗಹನ ಸರಲ ಸಲ್ಲಕೀ ಪ್ರದೇಶದೊಳ್--

ಮ|| ಮುಗಿಲೊಡ್ಡಂ ಗೆಲೆವಂದ ಕಾಯಭರದಿಂ ಪೊಂಬಟ್ಟನೊಟ್ವೈಪದಿ|
      ಟ್ಟಿಗಳಿಂ ಕಾಳಿಗನಾಗನಂ ನಗುವ ಕೈಯಿಂ ಕಾರ ತಂದಲ್ಲೋಲ||
      ಲ್ಲುಗುವೆಂಟುಂ ಮದವಟ್ಟೆಯಿಂ ಪೆರೆತೆಯ ಸೌಭಾಗ್ಯಕ್ಕೆ ತೋಡಾದ ಕೋ|
      ಡುಗಳಿಂದೇಂ ಜನಕಂಗೆ ಹರ್ಷಜನಕಂ ತಾನಾಯ್ತೊ ವನ್ಯದ್ವಿಪಂ ||೧೧೯||

      ಆಗಳಾ ಗಜದ ಬಳಿಸಂದು ನಡೆವಾನೆ ವಾಹಕರೊಡನೆ ಪೋಗಲೆಂದು ಪಲ್ಲ ಣಿಸಿ ಕೆಲದೊಳಿರ್ದ ಕೃತಕ ತುರಂಗಮಂ ತರಿಸಿ--
      ಕಂ||ಉ೦ಗುಟಮನಂಕವಣಿಗೆ ಕ
           ರಾಂಗುಳಿಯ ಸ್ಕಂಧ ಸಂಧಿಗುಯ್ದೇರಿದನು||
           ತ್ತುಂಗ ತುರಂಗಮಮಂ ನೃಪ
           ತುಂಗಂ ಸೂಕಳವಮಿದೆಂದು ಸೆಡೆದನೆ ಮನದೊಳ್||೧೨೦||

      ಅಂತು ಬೆಂಗೆವಂದು ಕೀಳಿನಳವಡೆ ಪಿಡಿದು ತೊಡೆಯೊಳವು೦ಕಿ ನೂಂಕು


1. ಮದವರ್ಕೆ, ಚ,
2. ದಾನೆಯು ತರಲಾನೆ ವಾಹಕ. ಚ.; ತರಲ್ನಡೆವಾನೆವಾ೦ಕ. ಕ. ಖ.
3. ವಣೆ, ಕ.;
4. ಳವು೦ಚಿ, ಚ,