೧೦೭
ಯೊ೧ಳುಪಧಾನವಿರಾಜಮಾನ ಹಂಸ ತೂಲ ತಳ್ಪದೊಳ್ ವಿಶ್ರಮಿಸಿ ನಿಜಮನೋ
ವಲ್ಲಭೆಗೆ ತನ್ನ ಪೋದ ಬಂದ ವೃತ್ತಾಂತಮಂ ನೆರೆಯೆ ಪೇಳೆ ಘನ ನಿನದಮಂ
ಕೇಳ್ದ ಹಂಸವನಿತೆಯಂತೆ ವಿಕಳೆಯಾಗಿ--
ಉ||ನೋಡಿರೆ ಪುಟ್ಟದಾಗಳೆ ಖಳಂ ಶಿಶುವಂ ಪಿಡಿದುಯ್ದೊಡೀಕೆಯಂ|
ನೋಡಿ ತನೂಜನಂ ಮರೆದೆನೀಕೆಯುಮಂ ಗಡ ಬಿಲ್ಗಳಂ ನೆವಂ||
ಮಾಡಿ ವಿಯಚ್ಚರಾನುಚರರುಯ್ದಪರೆಂದು ವಿದೇಹಿ ಮೆಯ್ಯನೀ|
ಡಾಡಿ ಕಪೋಲಮಂ ತೊಳೆದಳುಣ್ಮಿದ ಲೋಚನ ವಾರಿಧಾರೆಯಿಂ||೩೧||
ಅಂತು ವಿಕಳೆಯಪ್ಪುದುಂ--
ಉ||ಅಂಬುಜ ನೇತ್ರೆ ನಿನ್ನ ಮನದುಮ್ಮಳಮಂ ಬಿಡು ತನ್ನ ತೋಳ್ಗೆ ಪಾ|
ಳುಂಬಳೆ ಭೂರಿ ಭೂವಳಯಮೆಂಬಳವಂ ತಳೆದಿರ್ದನನಂತ ವೀ||
ರ್ಯ೦ ಬಲಭದ್ರನೇರಿಸುಗುಮಂಕದಬಿಲ್ಲನಳುರ್ಕೆಗೆಟ್ಟು ಬಿ|
ಲ್ಲುಂಬೆರಗಾಗಿ ಪತ್ತುವಿಡೆ ಕನ್ನೆಯ ಲೋಭಮನನ್ಯರಾಜಕ೦||೩೨||
ಮ||ಸ್ರ|| ಋಣವಿಲ್ಲಿಬಿಲ್ಗೆ ವಿದ್ಯಾಧರರ್ಗಿವು ಋಣಸಂಬಂಧದಿಂ ರಾಮನಂ ಲ|
ಕ್ಷಣನಂ ಪೊರ್ದಲ್ಕೆ ವೇಡಿರ್ದುವು ನೆವದೊಳೆ ಕೈ ಸಾರ್ದುವೀಬಿಲ್ಗಳಿಂ ಧಾ||
ರಿಣಿಯಂ ಬಾಯ್ಕೇಳಿಸಲ್ ಕಾರಣಪುರುಷರಿವರ್ ಪುಟ್ಟದರ್ ಪಕ್ಷ್ಮವಿ ಕ್ಷೇ|
ಪಣಮಾತ್ರಂ ಕಾರ್ಮುಕಾರೋಪಣಮವರ್ಗದರಿಂದೇಕೆ ಶೋಕಾತಿರೇಕ೦||
ಎಂದು ಸತಿಯ ಶಂಕೆಯಂ ಕಳೆದು ಗೃಹ ಮಹತ್ತರಂಗೆ ಬೆಸಸುವುದುಂ--
ಕಂ||ಬಹಿರುದ್ಯಾನದ ಕೆಲದೊಳ್
ಬಹು ರತ್ನ ಸುವರ್ಣಮಯಮೆನಲ್ ನಯನ ಸುಖಾ||
ವಹಮಂ ಮಾಡಿಸಿದಂ ಗೃಹ
ಮಹತ್ತರ೦ ನಿಮಿಷದಿಂ ಸ್ವಯಂವರ ಗೃಹಮಂ||೩೪||
ಆ ಸ್ವಯಂವರ ಭೂಮಿ ಪೂರ್ವಾ ಪರಾಯತ ಚತುರಶ್ರಮೆನಿಸಿ ಪೊಳೆವ ಪೊ
ಮ್ಮಗಿಲ ಬಳಸಿನೊಳಂ, ದಕ್ಷಿಣೋತ್ತರ ಮುಖಂಗಳಾಗಿ ತೋರ್ಕೆವೆತ್ತ ಕರ್ಕೇತನದ
ನೆಲೆಮಾಡಂಗಳೊಳಮವರ ಮುಂದಣಿಂದುಕಾಂತದ ಬಯಲ ಮಂಡಪಂಗಳೊಳಂ,
ಅವರಿರ್ಕೆಲದ ಕರ್ಕೇತನದ ಚೌಪಳಿಗೆಗಳೊಳಂ,ಅವಂ ಸುತ್ತಿ ಮುತ್ತಿದ ಮಾಣಿಕದ
೧: ಳ್ವಿತಾನೋಪಧಾನಾದಿ. ಗ. ಘ.