೧೧೨
ಜನಕಾತ್ಮಜೆ ಪುಗೆ ಸಭೆಯಂ
ಜನಿಯಿಸಿದುದು ಮದನ ಚೇಷ್ಟೆ ರಾಜನಕದೊಳ್ ||೫೨||
ಆಗಳಾಕೆಯ ಲಾವಣ್ಯ ಮದಿರಾರಸ ಸೇವನೆಯಿಂ ಕರಂ ಸೊರ್ಕ್ಕಿ-
ಕಂ || ದ್ವಿಗುಣಿಸೆ ನಖರುಚಿ ಪೂಮಾ
ಲೆಗಳ೦ ಕಾರಿರುಳೊಳೊಗೆದ ತಾರಾವಳಿಯ೦ ||
ನಗೆ ತೋರದುರು೦ಬ೦ ಸಾ
ವಗಿಸಿದನಡಿಗಡಿಗೆ ನೃಪಕುಮಾರಕನೊರ್ವಂ ||೫೩||
ಪರಭಾಗ೦ಬೆರೆ ಪ
ರಾಗ ಮಣಿ ಪಾಣಿಪದ್ಮರಾಗದಿನೊರ್ವ೦ ||
ನರನಾಥ ಸುತಂ ಮೇಲೆದಂ
ಕಿರೀಟವಂ ತಿರ್ದುವಂತೆ ಭುಜಶಾಖೆಗಳಿಂ ||೫೪||
ತಾರಾವಳಿಯಂ ತಳೆದ ನ
ಭೋರಂಗದ ಭಂಗಿ ತನಗೆ ಪುದುವೆನಿಸಿದುದಂ ||
ಪೇರುರನನದೇಂ ಮೆಲೆದನೊ
ಹಾರಮನೋಸರಿಸುವಂತೆ ನೃಪಸುತನೊರ್ವ೦ || ೫೫ ||
ಮಂಗಳ ಮಣಿಪೀಠಂ ವಿಜ
ಯಾಂಗನೆಗೆನೆ ಕೊರ್ವುವತ್ತು ದಂ ಮತ್ತೋರ್ವ೦ ||
ತುಂಗ ಭುಜ ಶಿಖರಮಂ ರ
ತ್ಯಾ೦ಗದಮಂ ಸಾರ್ಚುವೊಂದುನೆವದಿಂ ಮೆಅಲೆದಂ || ೫೬||
ಮ || ತೀವಬೆಡಂಗುವೆತ್ತ ಕಮಲಾಕರದೊಳ್ ರಮಣೀಯವಾದ ಕೆ೦ |
ದಾವರೆ ಹೂವಿನೊಳ್ ಸೆಣಸಿದತ್ತು ಕುಮಾರ ವಿಶಾಲ ವಕ್ಷದೊಳ್ ||
ಸಾವಗಿಸುತ್ತುಮಿರ್ಪ ಪದದೊಳ್ ಪೊಳೆದೊಪ್ಪುವ ತೋರಮುತ್ತಿನೆ |
ಕ್ಯಾವಳಿ ಸೂಸುವಂಶುಜಲದಿಂ ಬೆಳರ್ಗೆ೦ಪಳವಟ್ಟ ಕೆಂದಳಂ || ೫೭ ||
ಆಗಳಾ ಸ್ವಯಂವರ ಮಧ್ಯಭೂಮಿಗೆ ಮಣಿಭೂಷಣಮೆನಿಸಿ ಮನಂಗೊಳಿಸುವ
ಪಳಿಕಿನ ಚೌಪಳಿಗೆಯ ನೀಲ ಶಿಲಾಸ್ತಂಭಮಂ ಮಲಂಗಿ ಪೊನ್ನ ಪುತ್ತಳಿಗೆಯ
ವಿಳಾಸವನಸಕಲದು ತಟದ್ವಲ್ಲರಿ ಬಳಸಿದ ಶರಲ್ಲ...ಯಂತೆಯುಂ, ತಾರಾವಳಿ
ಬಳಸಿದಿಂದುಕಳೆಯಂತೆಯುಂ, 'ವಿದ್ರುಮ ಲತೆ ಬಳಸಿದ ಲಾವಣ್ಯರಸ ಸಮುದ್ರ
ವೇಳೆ