ಈ ಪುಟವನ್ನು ಪ್ರಕಟಿಸಲಾಗಿದೆ

೧೧೮

ರಾಮಚ೦ದ್ರಚರಿತಪುರಾಣಂ

ಪದುಳಂನಿಂದುದೆ ಶೇಷಕಂಠ ಕಠಿನಾಸ್ಟಿ ಶ್ರೇಣಿ ನುರ್ಗಾಗದಿ |
ರ್ದುದೆ ಕೂರ್ಮೊನ್ನತ ಕರ್ಪರಂ ನಳಿದು ಬೆನ್ನಂ ಸತ್ತ ದೇಂ ಮಾಣ್ಣು ದೇ ||೮೭||

ಕಂ || ಇರ್ಮ ಭರಂಗೆಯ ನೆ ಗೊಲೆ
ಗೊರ್ಮೋದಿದನಗುರ್ವು ಮೆಯ್ಯತ್ತುದನಾ ||
ಕಾರ್ಮುಕಮಂ ರಘುವೀರನ
ದೊಮ೦ಡಳ ಶಕ್ತಿ ಮನುಜ ಸಾಧಾರಣವೇ || ೮೮ ||

ಮ || ಪುಲಕಂ ಜಾನಕಿಗುತ್ತವಂ ಜನಕರಾಜಂಗುಮ್ಮಳಂ ಖೇಚರಾ |
ವಲಿಗುದ್ವೇಗಭರಂ ನರೇಂದ್ರ ಸುತ ಸಂದೋಹಕ್ಕೆ ಸಮ್ಮೋಹನಂ ||
ಲಲನಾಶ್ರೇಣಿಗೆ ವಿಸ್ಮಯಂ ಪುರಜನಕ್ಕಾ ಕರ್ಷಣಂ ಲೋಚನಾ |
ವಲಿಗಾಯ್ಬಿ ಸಿ ನೀವಿ ಜೇವೊಡೆಯೆ ವಜ್ರಾವರ್ತಮಂ ರಾಘವಂ || ೮೯ ||

ತದನಂತರ-
ಮ | ಸಮದ೦ ಲೀಲೆಯಿನೆ ಖೇಚರಬಲಂ ಕಿಂ ಪಾತ್ಯನು |
ಕ್ರಮದಿಂದಾನತಮಾಗೆ 'ಕೊ ಪು ಪಿರಿದುಂ ಲಜ್ಞಾನತಂ ರಾಜಲೋ ||
ಕಮಣ೦ ಬೆಕ್ಕಸಮುತ್ತು ದೇಜಿಸುವುದುಂ ಕೋದಂಡಮಂ ರಾಮನ |
ಶ್ರಮದಿಂ ಮನ್ಮಥನಾಗಳೇಜಿಸದೆ ಮಾಜಿಚ್ಚಂ ಪುರಸ್ತ್ರೀಯರಂ || ೯೦ ||

ಕಂ | ಅವತಂಸಮಾದುವವರ
ಸ್ತವನಂಗಳ್ ಸಕಳ ಜನದ ಜಯಜಯ ನಿನದಂ ||
ಕಿವಿಸದ೦ ಕಿಡಿಸಿದುದು
ತ್ಸವ ಪಟಹ ಧ್ವನಿಗಳುದ್ರೆ ಪೊದುವಾಗಳ್ || ೯೧ ||

ಎತ್ತಿದುವ ಮಂಗಲಧ್ವಜ
ಮೆತ್ತಿದುದು ಸಿತಾತಪತ್ರವಾಗಸಮಂ ಪೊ ||
ತೈತ್ತಿದುದಾಶೀರ್ವಾದಂ
ಮುತ್ತಿನ ಸೇಸೆಗಳನಿಕ್ಕಿದರ್ ಮಾನಿನಿಯರ್ || ೯೨ ||

ಆಗಳಾ ಬಳನ ದೊರ್ಬಲಕ್ಕೆ ಕಂಚುಕಿ ರೋಮಾಂಚ ಕಂಚುಕಿತ ಶರೀರೆ
ಯಾಗಿ ಜಾನಕೀದೇವಿ ನಿಜಮನೋರಥಂ ಸಫಲವಾದುದಿದುವೆ ಪುಣ್ಯಾವಹ ಸಮಯ
ಮಖಿಲ ರಾಜಕುಲ ಶೇಖರನಂ ಕುಸುಮಶೇಖರನಂ ಮಾಲ್ಪುದೆಂದು ಬಿನ್ನವಿಸೆ-


1. ಕೂಳ್ಳು. ಚ