ಈ ಪುಟವನ್ನು ಪ್ರಕಟಿಸಲಾಗಿದೆ

೧೨೪

ರಾಮಚಂದ್ರಚರಿತಪುರಾಣಂ

ತ ಸಮಸ್ತಷಧಿ ಗರ್ಭನಕ್ಷತ ಯುತಂ ದೂರ್ವಾಂಚಿತಂ ಸರ್ವಧಾ |
ನ್ಯ ಸಮುತ್ತಂಭಿತ ಪೂರ್ ಕುಂಭಮೆಸೆದತ್ತಾ ವೇದಿಕಾ ಮಧ್ಯದೊಳ್ || ೧೨೪ ||

ಅನುರೂಪಂ ಸ್ಪಟಕಾಬ್ಬದೊಳ್ ದಧಿ ಸುವರ್ ಕೌ೦ಚದೊಳ್ ರೋಚನಂ |
ಘನ ಹಾರೀತಕ ಹಂಸಿಯೊಳ್ ಹರಿತ ದೂರ್ವ೦ ರಾಜತ ದ್ರೋಣಿಯೊಳ್ ||
ಘನಸಾರಂ ಹರಿನೀಲ ಶುಕ್ಕಿಕೆಗಳೊಳ್ ಕಸ್ತೂರಿ ಮಾಣಿಕ್ಯ ಭಾ|
ಜನದೊಳ್ ಕುಂಕುಮ ಸಂಕಮೇಂ ಮೆದುವೋ ಮಾಂಗಲ್ಯ ಸಾಕಲ್ಯ ಮ೦ ||

ಕಂ || ಮಿಸುಗುವ ಕೆಂದಳಿರಂ ದ್ವಿಗು
ಣಿಸೆ ಮೇಗೊಗೆವಂಶುಮಾಲೆ ವೇದಿಕೆಯೋಳ್ ರ೦ ||
ಜಿಸಿದುವೆಳನೇಸಂ ನೆನೆ
ಯಿಸುವ ಚತುಷ್ಮಣ ಶೇಣ ಮಣಿಕಲಶಂಗಳ್ ||೧೨೬ ||

ಆ ಸಕಲ ಮಂಗಲದ್ರವ್ಯ ಸಂಸೇವ್ಯಮಾನ ಮಣಿವೇದಿಕಾ ಮಧ್ಯ ವಿಶಾಲ ಕಲ
ಭೌತ ಪೀಠದೊಳ್ ರತಿಯುಂ ರತಿ ಪತಿಯುಮಿರ್ಪಮೋಲ್ ದಂಪತಿಗಳಿರ್ದರಲ್ಲಿ ಪೂರೈ
ಭಾಗದೊಳ್ ದಶರಥನಿಂದ್ರನಂದದಿನುಪೇಂದ್ರ ಭರತ ಶತ್ರುಘ್ನ ಸಮನ್ವಿತನು
ಮನೇಕ ಮಕುಟದಿದ್ದ ಪರಿವೃತನುವಾಗಿರ್ದ೦; ಮತ್ತಮಪರಭಾಗದೊಳಪರಾಜಿತಾ
ಮಹಾದೇವಿ ಸುಮಿತ್ರೆ ಸುಪ್ರಭೆ ಕೈ ಕೆ ವೆರಸನಂತ ಸಾಮಂತ ಸೀಮಂತಿನಿಯರ ನಡುವೆ
ಸುರ ಪುರಂಧಿಯರ್ಬಳಸಿದಿಂದ್ರಾಣಿಯಂತೆ ಮಹಾ ಮಹಿಮೆವೆತ್ತಿರ್ಪುದುಮಿತ್ತಲ್-

ಉ|| ರನ್ನದ ಬಾಯಿನಕ್ಕೆ ಪಲವಂದದ ಚಂದದ ಸೀರೆಗೆನ್ನವ |
ರ್ತನ್ನವರೆನ್ನದಿತ್ತೊ ಸಗೆಗೀ ನೆಲದೊಳ್ ಪೊಜಿಗಾರುಮಿಲ್ಲೆನಲ್ ||
ಮನ್ನಿಸಿ ಮೈಮೆಯಂ ಮೆಆಲೆದಳಂದು ವಿದೇಹಿ ವಿವಾಹ ಗೇಹದೊಳ್ |
ಸನ್ನಿದಮಾದ ಕಲ್ಪಲತೆಯೋ ಸುರಧೇನುವೊ ಪೇಮೆಂಬಿನಂ ||೧೨೭ ||

ಅಂತಪಾರ ಪುಣ, 'ಪುಣ್ಯಾಂಗನಾಜನಕ್ಕೆ ಪಂಚರತ್ನ ದುಪಾಯನಮನಿತ್ತು
ಪಳಂಚಿನುಂಗುರದ ನೂಪುರದ ನೂಲ ತೊಂಗಲ ಸಂಕಲೆಯ ಪಿಂಡುಗಂಕಣದ ಕಲ
ಕಲ ನಿನದನತನು ಚಾಪ ಲತಾ ಟಂಕಾರ ಶರಮೋಕ್ಷ ಹೂಂಕಾರದಂತೆ ಕಿವಿಸದ್ದಂ
ಕಿಡಿಸಿ, ಕಡೆಗಣ್ಣ ಕಾಂತಿ ಕುಡಿಮಿಂಚಿನ ಗೊಂಚಲ೦ತೆ ಸ೦ಚಲಿಸೆ, ಪೆಂಡವಾಸದ
ವಿಲಾಸಿನೀ ಜನಂಗಳಂಗಜ ಜಂಗಮ ಲತೆಯಂ ಸುತ್ತಿದೆಳಲತೆಗಳನೆ ವಿವಿಧೋಪಾ
ಯನ ರತ್ನ ಪಟಲಿಕೆಗಳಂ ಪಿಡಿದೊಡನೆ ಬರೆ ಬಂದು-


1. ಪೂರ್ಣ ಚ.
2. ಪಣ್ಯಾ೦ಗನಾ. ಕ. ಖ. ಗ