ಈ ಪುಟವನ್ನು ಪ್ರಕಟಿಸಲಾಗಿದೆ

೧೨೬

ರಾಮಚಂದ್ರಚರಿತಪುರಾಣಂ

ಕಂ || ಅನುವಿಸಿದುದು ರಜತಾಚಲ
ದನರ್ವ್ಯ ಮಣಿ ವಿಕಟ ಕೂಟಮಂ ದಶರಥರಾ ||
ಮನ ಮಣಿಮಯ ಮಕುಟಂ ಕಾ
ಮನ ಬಿಲ್ಲ೦ ಬೀಟೆ ಬೇರೆ ನಿಜದೀಧಿತಿಗಳ್ ||೧೩೩ ||


ಮರಕತ ಮಣಿ ಕುಂಡಲ ರ
ಶ್ಮಿರೇಖೆಯಿಂ ಗಂಡ ಮಂಡಳಂ ಸೇವಾಳ೦ ||
ಬೋರೆದ ಸಿತಕಮಲದಂತಿರೆ
ಕರಮೆಸೆದಂ ನೃಪಕುಮಾರ ಚೂಡಾರತ್ನಂ || ೧೩೪ ||

ಜಯಲಕ್ಷ್ಮಿಯ ಮಣಿಪೀಠಂ
ಭಯಾನತ ಕ್ಷತ್ರ ವಜ್ರಪಂಜರಮಿದೆನಲ್ ||
ನಯನೋತ್ಸವಮಂ ಪಡೆದುವು
ಜಯಧೀರನ ಬಾಹುಯುಗಲದಂಗದ ಯುಗಳ೦ || ೧೩೫ ||


ಉಭಯ ಪ್ರಕೋಷ್ಠ ಶಾಖಾ
ಸುಭಗ ಧನುರ್ಗುಣ ಕಿಣಂಗಳುಂ ಮಣಿಮುದ್ರಾ ||
ಪ್ರಭೆಯುಂ ಗೆಲೆವಂದುವು ಬಾ
ಹು ಭುಜಂಗನ ಕೊರಲ ಕ ಜಯ ಫಣಮಣಿ ರುಚಿಯಂ || ೧೩೬ ||

ಜಳ ಬುದ್ಬುದ ಮಾಲೆಗಳವಿ
ಚಳ೦ಗಳಿ೦ಗಡಲ ಮಡುವಿನೊಳ್ ಪೊಳೆವವೊಲೇಂ ||
ಪೊಳೆದುವೊ ನಿಸ್ತುಲ ಮುಕ್ತಾ
ವಳಿಗಳ ಹಲಧರ ವಿಶಾಲ ವಕ್ಷಸೂಲದೊಳ್ || ೧೩೭ ||

ಉ || ಪಿಂಗಿದುದಂಗಜಂಗೆ ಕಡುಗಾಡಿಯ ಗರ್ವಮಪೂರ್ವಸೃಷ್ಟಿ ಚ |
ಲೈಂಗಿನಿ ತೆಡ್ಡಮಪ್ಪರೆ ಫಣೀಂದ್ರ ಸುರೇಂದ್ರ ಕುಮಾರರೆಂದು ಕ ||
ಇಂಗದೆ ಪತ್ತೆ ಚಿತ್ತದೊಡನೀಕ್ಷಿಸಿದತ್ತು ಪುರಾಂಗನಾ ಜನಂ |
ಮಂಗಳ ಭೂಷಣ ಪ್ರಚಯದಿಂದಭಿರಾಮನೆನಿಪ್ಪ ರಾಮನಂ || ೧೩೮ ||

ರಾಜಕುಮಾರರಿರ್ಕೆ ಸುರರಾಜ ಕುಮಾರಕರೊಳ್ ಮನುಷ್ಯ ಕ |
ನ್ಯಾ ಜನಮಿರ್ಕೆ ವಿಕ್ಕ ಸುರಕನೈಯರೊಳ್ ದೊರೆಯಪ್ಪರಾರೊ ಪೇ ||


1. ತಪ್ಪೋತಸ್ಸರೆ. ಚ.