ಈ ಪುಟವನ್ನು ಪ್ರಕಟಿಸಲಾಗಿದೆ
ಸಪ್ತಾಶ್ವಾಸಂ
೧೩೩

ರ್ವೆದಮನನ್ನು ಕೆಯ್ಯು ಗಗನೇಚರಸಂಪದಮಂ ಪೊಗುವೆ |
ತ್ತಾದೊರೆತಂ ಜರತೃಣ ಸಮಾನವೆನಲ್ ಬಗೆದಂ ವಿಯಚ್ಚರಂ ||೨೩ ||

ಅಂತು ವೈರಾಗ್ಯ ಪರಂ ನಿಜ ವಿಯಚ್ಚ ರಾಧಿರಾಜ ವಿಭವಮಂ ಪ್ರಭಾಮಂಡ
ಲಂಗಿತ್ತ೦ದಿನದಿನದೊಳ್ ಮಹೇಂದ್ರೋದ್ಯಾನದೊಳಿರ್ಪ ಸರ್ವಭೂತಹಿತ ಭಟ್ಟಾರ
ಕರ ಪದಪಯೋರುಹದ ಸಮಕ್ಷದೊಳ್ ದೀಕ್ಷೆಗೊಳ್ವುದು೦-

ಕಂ || ಇಂದುಗತಿಯ೦ತೆ ರಾಜ್ಯಮ
ನೊಂದ ರ್ಕ೦ ಬಾಳಿಗೆಯ್ಯ ದಾವನೊ ತೋಜಿದಂ ||
ಮಂದರಧೈರಂ ನೃಪನೆಂ
'ದೊಂದೇತೆ ಅಮಮುಸಮಿತಿ ಪೊಗಟ್ಟಿ ತಾಗಳ್ || ೨೪ ||


ಅಂತು ವಿಯಚ್ಚರಾಧಿರಾಜಂ ಮುನಿರಾಜ ಪದವಿಯನನ್ನು ಕೆಯ್ಯುದುಮಿತ್ತಲ್
ಜನಕಂ ಸಕಲ ಸಾಮ್ರಾಜ್ಯ ರಾಜ್ಯ ಚಿಹ್ನಮುಖಿಯಲುಟಿದ ವಸ್ತು ವಾಹನಾದಿಗಳಂ
ಸೀತೆಗೆ ಬುವಲಿಗೊಟ್ಟು ಅಯೋಧ್ಯೆಗೆ ಕುಶಿ ಪುವುದುಂ ದಶರಥಂ ಕತಿಷಯ
ಪ್ರಯಾಣ೦ಗಳಿ೦ ವಿನೀತಾನಗರಮಂ ಪೊಕ್ಕಿರಲೊಂದುದಿವಸಂ-

ಕಂ || ಸುಕೃತ ಸುರದ್ರುಮ ವನಪಾ
ಲಕನೆಂಬಿನನತುಲ ವಿಚಕಿಲೋದ್ದ ಮಮಂತಂ ||
ದಕಲುಷ ಚಿತ್ತಂ ದಶರಥ
ಸಕಲೋರ್ನಿಶಂಗೆ ಋಷಿನಿವೇದಕನಿತ್ತಂ || ೨೫ ||

ಅಂತು ಸಮಯೋಚಿತ ಸುಮನೋದರ್ಶನಮನಿತ್ತು ದೇವ! ನಮ್ಮ ಸರಯೂ
ನದೀತೀರದ ಮಹೇಂದ್ರೋದ್ಯಾನದೊಳ್ ಮನಃಪರಯಜ್ಞಾನಿಗಳಪ್ಪ ಸರ್ವಭೂತ
ಹಿತಭಟ್ಟಾರಕರ್ ಮಹಾಋಷಿ ಸಮುದಾಯಂಬೆರಸು ಯೋಗ ನಿಯೋಗದಿಂದಿರ್ದ
ರೆಂದು ಬಿನ್ನವಿಸೆ-

ಕಂ ||ನೊಸಲೊಳ್ ಕರಪಲ್ಲವ ಪುಟ
ಮೆಸೆದಿರೆ ದಶರಥನೃಪಂ ಮುನೀಶ್ವರರಿರ್ದಾ ||
ದೆಸೆಗೆ ಮೊಗವಿತ್ತು ತನ್ನಿ
ರ್ದ ಸಿಂಹವಿಷ್ಟರದಿನೆಟ್ಟು ವಿನಮಿತನಾದಂ ||೨೬ ||

ಆಗಿ ಪರಿಮಿತ ಪರಿಜನಂಬೆರಸು ಮುನೀಂದ್ರರಿರ್ದ ಮಹೇಂದ್ರೋದ್ಯಾನಕ್ಕೆ
ಬಂದು-


1. ದೂಂದುತ್ತರ. ಚ.