ಈ ಖಚರ ಪ್ರಭು ಪ್ರಭಾಮಂಡಲನ ಪೋದ ಭವದೊಳಾದ ವೃತ್ತಾಂತಮುಮ
ನೀಭವದೊಳಾದ ಸೀತಾಪ್ರಪಂಚಮುಮಂ ಕೇಳು ತಿಳಿದದುವೆ ನಿರ್ವಹಕಾರಣ
ಮಾಗೆ ದೀಕೈಗೊಂಡನೆಂಬುದುಂ ಪ್ರಭಾಮಂಡಲಂ ವಿನಯ ವಿನಮಿತ ಶಿರಸ್ಸರೋಜ
ನಾಗಿ-
ಕಂ || ಇಂದುಗತಿ ಖಚರಪತಿ ಪಿರಿ
ದೊ೦ದನೆನಗೆ ಮಾಲ್ಪುದಂ ಬೆಸಸಿಂ ನೀ ||
ಮೆಂದು ಮುಕುಳಿತ ಕರಂ ಮುನಿ
ವೃಂದಾರಕರಂ ಕುಮಾರಕಂ ಬೆಸಗೊಂಡಂ || ೩೨ ||
ಅಂತು ಬೆಸಗೊಳ್ಳುದುವವರಿಂತೆಂದು ಬೆಸಸಿದರ್ : ಧಾಮ ನಾಮಧೇಯ
ಗ್ರಾಮದೊಳಿರ್ಪ೦ ಧರಾಮರಂ ವಿಮುಂಚಿಯೆಂಬನಾತನ ಕುಲವಧು ವಸುಮತಿ
ವೆಸರವಳವರ್ಗತಿಭೂತಿಯೆಂಬ ತನಯನಾದಂ-
ಕಂ || ಆತಂಗೆ ಸರಸೆಯೆಂಬ
ಪಾತಕಿ ಕುಲವನಿತೆಯೆನಿಸಿ ಕಯನೆಂಬ ಮಹಾ ||
ಪಾತಕನೊಳ್ ಪುದುವಾಳ್
ಜಾತಿಯ ನೀತಿಯ ನೆಗಟ್ಟಿ ನೆಲೆಗಿಡುವಿನೆಗಂ || || ೩೩ ||
ಆಯುರ್ದಶೆಯಗುಂ ನರ
ಕಾಯುಷ್ಯಂ ಕಟ್ಟುಗುಂ ಪರಾಭವಮುಕ್ಕುಂ ||
ಶ್ರೀಯುಗುಮೆನ್ನದನ್ಯ
ಪ್ರೇಯಸಿಯಂ ಸರಸೆಯಂ ಕಯಂ ಕಳ್ಳುಝಂ || ೩೪ ||
ಅ೦ತಾಕೆಯಂ ಕಯಂ ಕಸವರಂಬೆರಸುಯ್ಯುದು ಅತಿಭೂತಿ ಮತಿವಿಕಲ
ನಾಗಿ-
ಕಂ | ಸುಡು ಪೊಲ್ಲಳನೆನ್ನದೆ ತ
ನೊಡಮೆಯ ಕೇಡಿಂಗಮವಳ ಪೋಗಿಂಗಂ ಆನಿ ||
ರ್ಗಡಿ ಬೆನ್ನೊಳಸಿ ಪೋದಂ
ಕಡು ಮೋಹಿತರಾರುಮುಚಿತಮಂ ನೆನೆದಪರೇ || ೩೫ ||
1. ಮನುವತಿ. ಚ.
2. ನಿಳಡಿ. ಚ. ; ಸಿಗ್ಗಡಿ ಗ ಘ ; ನಿರ್ಗಡೆ. ಕ. ಖ.