ಈ ಪುಟವನ್ನು ಪ್ರಕಟಿಸಲಾಗಿದೆ
ಸಪ್ತಾಶ್ವಾಸಂ
೧೩೯

ಚ || ತನಯ ಮುಖೇ೦ದು ಮಂಡಲಮನೀಕ್ಷಿಸುವುತ್ಸುಕ ವೃತ್ತಿ ಚಿತ್ತದೊಳ್ |
ನನೆಕೊನೆವೋಗೆ ಸಜ್ಜನ ಸುಭಾಷಿತದೊಳ್ ಪುದುವೊಕ್ಕು ಸೇಸೆಯಂ ||
ಮನಮೊಸೆದಾಂತು ಬಾಂಧವಜನಂಬೆರಸುತೃವದಿಂ ವಿದೇಹಿಯುಂ |
ಜನಕನುಮೇಅದರ್ ಮಣಿವಿತಾನ ವಿರಾಜಿತಮಂ ವಿಮಾನಮಂ || ೪೮ ||

ಅಂತು ವಿಮಾನಾರೂಢರಾಗಿ ಕಿಆದಾನುಂ ಬೇಗದಿಂದಯೋಧ್ಯೆಗೆ ಬಂದು
ರಾಜಭವನಮಂ ಪೊಕ್ಕು ಜನಕನುಂ ವಿದೇಹಿಯುಂ ದಶರಥಂಗಮಪರಾಜಿತಾ
ಮಹಾದೇವಿಗಂ ತುಂಲೈ ಝು ದುಂ, ರಾಮಾದಿಗಳವರ್ಗೆ ವಿನಯವಿನತರಾಗಿ ಪರಕೆ
ಯಂ ಕೈಕೊಳ್ವುದುಂ, ಜಾನಕಿಯುಂ ಜನನೀಜನಕರಂ ನಿಬಿಡಾಲಿಂಗನಂಗೆಯ್ದು
ವರ ಪದ ಪಯೋರುಹಕ್ಕೆ ಅಗೆ ಪ್ರಭಾಮಂಡಳಂ ತಂದೆಯ ಪಾದಾರವಿಂದಮಂ
ಮಣಿಕುಂಡಲ ಪ್ರಭಾಮಂಡಲ ಬಾಲಾತಪದಿನರ್ಚಿಸುವುದುಂ, ಜನಕಂದಿಕ್ಕರಿ
ಕರಾನುಕಾರಿಗಳಪ್ಪ ತೋಳಳಿ೦ ತೆಗೆದು ತಬ್ಬಿಸಿ, ಮಗನ ಮೊಗಮನಕ್ಕರ್ತು
ನೋಡಿ, ಕಲ್ಪತರು ಕೊರಕಿತವಾದಂತೆ ಪುಳಕಮ ತಳೆದು, ಆನಂದಬಾಷ್ಪ ಬಿ೦ದು
ಸಂದೋಹದಿಂ ನಂದನನ ಸಹಸ್ರ ಕುಂತಳ ಕಲಾಪಕ್ಕೆ ಬಿಡುಮುತ್ತಿನ ತಲೆದುಡು
ಗೆಯಂ ಪಡೆದು, ಮೊಹರಸ 'ಸುಧಾ ಪೂರದೊಳವಗಾಹಮಿರ್ಪುದುಂ-

ಕಂ || ಅಂಬಿರಿವಿಡೆ ಭೋಂಕನೆ ನಯ
ನಾಂಬುಗಳ ತಿವಿಹ್ವಲಂ ಪ್ರಭಾಮಂಡಲನಾ |
ತಾಂಬಿಕೆಯ ಪದಕ್ಕೆಆಗಿದ
ನಂಬುರುಹಕ್ಕೆ ಅಗಿದಳಿಗಳೆನಿಸೆ ಕುರುಳ್ಳಳ್|| ೪೯ ||

ಆಗಳಾ ವಿದೇಹಿಸುತ ಪರಿಷ್ಯಂಗ ಸುಖಾನುಭವಮನಸ್ಸು ಕೆಯ್ಯುದುಂ-

ಮ || ಮೊಲೆವಾಲಂಬಿರಿವಿಟ್ಟು ಸೂಸೆ ಮೊಲೆಯುಂ ಬಾಷ್ಪಾಂಬು ಕೈಗ ಕ |
ಟ್ರೈಲರಿಂ ಮೆಯ್ಕ ವಿರ್ಗಳ್ ಪೊದಿಗೆಯ ಮೆಯ್ಯಂ ಗದ್ಧ ದಂ ಕಂಠ ಕ೦||
ದಲದಿಂದುದ್ಧ ತಮಾಗೆ ಮನ್ಯುಮಿಗೆ ನಾನಾಚೇಷ್ಟೆ ನಾನಾರಸಂ |
ತಲೆದೋತ್ತು ವಿದೇಹಿಗಚ್ಚರಿ ಸುತ ವ್ಯಾಮೋಹ ಕೌತೂಹಲಂ|| ೫೦ ||

ಚ || ಉದಯಿಸಿದಾಗಳಾತನನಗಲ್ಲ ಬಿಲಾತನ ಬಾಲಕೇಳಿಯ೦ |
ಪದೆದವಲೋಕಿಸಲ್ ಪಡೆಯದುಮ್ಮಳವಾತನ ಸೋಂಕಿನೊಳ್ ಪೊದ ||
ಅದವಿದ ಮೋಹವಾತನ ಮುಖಾಬ್ಬ ವಿಲೋಕನ ಜಾತಕೌತುಕಂ |
ಸುದತಿವಿದೇಹಿಗೇಂ ಪಡೆದುದೋ ರಸಸಂಕರ ಚಿತ್ರ ಚೇಷ್ಟೆಯಂ || ೫೧ ||


1. ಸುಧಾರಸ ಕ. ಖ ಗ.ಘ.