ಈ ಪುಟವನ್ನು ಪ್ರಕಟಿಸಲಾಗಿದೆ
ಪಾಶ್ವಾಸಂ
೧೪೧

ಜನಿಯಿಸಿ ದುರಂತ ದುಃಖಮ
ನನುಭವಿಸಿದೆ ವಕ್ರಭಾವಮಅಲಿಸದಾರಂ|| ೫೬ ||

ಅ೦ತೆತ್ತಾನುಂ 'ಸವಿಪಾಕ ನಿರ್ಜರೆಯಿಂ ದುಷ್ಕರ್ಮ ಫಲಮಂ ತವಿಸಿ ನಿಜ
ದನುಪಶಮಭಾವಮಂ ಪಡೆದದ ಫಲದಿಂ ಚ೦ದ್ರಪುರಮನಾಳ್ವ ಚಂದ್ರನೆಂಬ
ನರೇಂದ್ರಂಗಮಾತನ ಮನೋಹಾರಿಣಿ ಧಾರಿಣಿಗಂ ಧಾರಣನೆಂಬ ಮಗನಾದೆ ; ನಿನಗೆ
ಸುಧರ್ಮೆಯೆಂಬ ಪತ್ನಿಯಾಗೆ ಜಿನಧರ್ಮಮಂ ಪತ್ತು ವಿಡದೆ ನಡೆದು ಚತು
ರ್ವಿಧ ದಾನ ಶೂರನಾಗಿ ಶರೀರಭಾರಮನಿಲಿಸಿ ಧಾತಕೀ ಷಂಡದ ಮೂಡಣ ಮಂದರ
ದುತ್ತರಕುರುವಿನೊಳ್ ಪುಟ್ಟ ಮೂಯಿಸಳಿತೋಪನಂಬರನಲ್ಲಿಯ ಸುಖಮನನು
ಭವಿಸಿ ದೇವಗತಿವಡೆದು-

ಉ ||ಪೂಸದ ಸೌರಭಂ ತವದ ಮೈಸಿರಿ ಬಾಡದ ದಾಮಮುಮ್ಮೊಡಂ ।
ಮಾಸದ ಸೀರೆ ಧಾತುಮಲವಿಲ್ಲದೊಡಲ್ ಪರಿಪೂರ್ಣ ಯೌವನಂ ||
ಲೇಸೆನಿಸಿರ್ದ ರೂಪು ಶುಭಲಕ್ಷಣವೆಂಬಿವನಸ್ಸು ಕೆಯ್ದ ನಾ |
ಯಾಸದಿನೀಸಿದ್ರೆ ಮೊದಲ ಸಗ್ಗದ ಬಾಯೆರಡಲ್ಲ ಳಂ || ೫೭ ||

qಮತ್ತ ಮಲ್ಲಿಂದ ಬಂದು ಪುಷ್ಕಲಾವತೀ ವಿಷಯದ ಪುಂಡರೀಕಿಣೀ ಪುರವ
ನಾಳ್ವ ನಂದಿಘೋಷ ನರಪತಿಗಮಾತನರಸಿಯಪ್ಪ ವಸುಮತಿಗಂ ನಂದಿವರ್ಧನ
ನೆ೦ಬ ನ೦ದನನಾದೆ; ನಿನ್ನ ತಂದೆಯಪ್ಪ ನಂದಿಘೋಷನೊಂದುದಿವಸಂ ಕ್ರೀಡಾ
ವನಕ್ಕೆ ಪೋಗಿ, ದಿವಯೋಗಿಗಳಂ ಕಂಡು, ಧರ್ಮಮಂ ಬೆಸಗೊಂಡು, ಸಂಸಾರ
ಶರೀರ ಭೋಗ ನಿರ್ವೆಗ ಪರನಾಗಿ ನಿನಗೆ ರಾಜ್ಯ ಮಂ ಕೊಟ್ಟು ಯಶೋಧರ
ಭಟ್ಟಾರಕರ ಚರಣೋಪಾಂತದೊಳ್ ತಪಶ್ಚರಣ ನಿರತನಾಗಿ ಸಮಾಧಿವಿಧಿಯಿ೦
ವಿಗ್ರಹಮನುಳಿದು, ಬಲಿಯಮಗ್ರಿನ ನವ ನೈವೇಯಕ ಮಧ್ಯ ನಾಯಕನಾದಂ;
ನೀನುಮೊಂದು ಪುಬ್ಬ ಕೋಟ ಕಾಲಮರಸುಗೆಯ್ದು, ಜಿನಧರ್ಮಮಂ ಸತ್ತು ಬಿಡದೆ
ನಡೆದು ಕಡೆಯೊಳಯ್ದನೆಯ ಕಲ್ಪ ದುಷಪಾತ ತಲ್ಪದೊಳ್ ದೇವನಾದೈ-

ಕಂ || ಅಯ್ತುಂ ಕಲ್ಯಾಣಮನಿ
ಮೈಪುದಯ್ದನೆಯ ಗತಿಯನವಯವದಿಂ ತಾ||
ನಯ ನೆಯ ನಾಕಲೋಕನ
ನೆಯ್ಲಿ ಪುದು ಜಿನೇಂದ್ರ ಸೇವೆಗಾವುದು ಗಹನಂ || ೫೮ ||
ಅಂತಲ್ಲಿಯ ಸುಖಮನನುಭವಿಸಿ ಬಂದು ಮಂದರದಪರವಿದೇಹದ ವಿಜ


1: ಸಂವಿಪಾಕ. ಚ. 2. ಸದೃಷ್ಟಿ ಪತ್ನಿ. ಗ. 3. ಕುರವಕದೊ೪೯. ಕ. ಖ. ಗ. ಫ.