ಈ ಪುಟವನ್ನು ಪ್ರಕಟಿಸಲಾಗಿದೆ

೧೪೪

ರಾಮಚಂದ್ರಚರಿತಪುರಾಣಂ

ಚ || ಅವಚಅದಿನ್ನೆಗಂ ಸವಿದನಿಂದ್ರಿಯ ಸೌಖ್ಯ ಮನರ ನಂದನಂ |
ಕವಚ ಹರಂ ಜಿತಾಹಿತಬಲಂ ಬಲನನ್ನನಿರಲ್ ಮಹಾಪರಾ ||
ಭವಮಿದ೦ದವಾವುದೆನಗೆಂದಿರದುತ್ತರಿಸಲ್ಗೊಡರ್ಚಿದಂ |
ಭವ ಜಲರಾಶಿಯಂ ದಶರಥಂ ಜಿನರೂಪ ವಹಿತ್ರ ಯಾತ್ರೆಯಿಂ|| ೬೬ ||

ಮ || ಪರಪೀಡಾ ಕರಮೆಂತು ನೋಡುವೊಡಮರ್ಥೋಪಾರ್ಜನಂ ತದ್ದುರಾ |
ಚರಿತೋದ್ಭರಿತ ದುಃಖ ತಿಕ್ಕ ಫಲ ಸೇವಾಕಾಲದಂದೊರ್ವರುಂ ||
ನೆರವಿಲ್ಲಾ ಧನ ಸೇವೆಯಂದೆ ನೆರವಪ್ಪರ್ ನಂಟರೆಂದಂದು ತಾಂ |
ಮರುಳಕ್ಕುಂ ಪುರುಳಕ್ಕು ಮೇ ಮಜರೆದು ಹಾನಾದಾನ ವಿಜ್ಞಾನಮಂ || ೬೭ ||

ವನಿತಾ ಸಂಕುಲಮುಂ ಷಡಂಗ ಬಲಮುಂ ಭಂಡಾರಮುಂ ವಸ್ತುವಾ |
ಹನಮುಂ ತನ್ನೊಡವರ್ಪುವಲ್ಲವೊಡವರ್ಕು೦ ಪುಣ್ಯಪಾಪಂಗಳೆ೦ ||
ಬಿನಿತಂ ಭಾವಿಸಿ ತಾನೆ ತನ್ನ ದೆಸೆಯಿಂ ತನ್ನಂದನಂ ಭಾವಿಸಲ್ |
ಮನಮಂ ತಾರದೆ ಬಾಹ್ಯಮಂ ಬಯಸುವಂತಶೂನ್ಯನುಂ ಮಾನ್ಯನೇ ||೬೮||

ಅವೆಣ್ಣಾದೊಡನೊಂದೆರಟ್ಟಿವಸವೊಂದಾಗಿರ್ದವಂ ನಂಟನೆಂ ।
ದುಟಿದಂದನ್ಯರನಾಸೆಗೆಯ್ಯಳವಳಿಂ ನಿರ್ವ್ಯಾಕುಳಂ ಪೊಲ್ಲಿವಳ್ ||
ಸಲಿಗಂಜಳ್ ಭರತಾದಿಗಳ್ ಪಲವುಕಾಲಂ ತನ್ನೊಳೋತಿರ್ದವರ್ |
ಕದಂದಾ ಕ್ಷಣದೊಳ್ ಧರಾರಮಣಿ ಮತ್ತೊರ್ವಂಗೆ ಪುರ್ವಿಕ್ಕುವಳ್ ||೬೯||

ಮೃಗಭೂ ಮಿಶ್ರಿತ ಸಾಂದ್ರ ಚಂದನ ರಸಂಗಳ್ ಚಂದನೋಶೀರ ವಾ |
ರಿಗಳುಂ ನರ್ತಿತ ಹೇಮ ಚಾಮರ ಚಲನ್ಮಂದಾನಿಲಂಗಳ್ ವಿಲಾ ||
ಸ ಗೃಹಂಗಳ ಕಳೆಯಲೆ ಸಾಲ ಪುವೆ ರಾಗದ್ವೇಷ ವೇಗ೦ಗಳಿ೦ |
ಬಗೆಯೊಳ್ ಪೆರ್ಚದ ತಾಪಮಂ ಕಳೆವವೋಲ್ ಜೈನಾಂಘ್ರ ಕಲ್ಪಾಂಫ್ರಿಪಂ ||

|| ಕಂ || ಎನಿತೆನಿತಂ ಪುಂಜಿಸಿದೊಡ
ವನಿತನಿತುಂ ಮಣಿಯಲಯದಣಿಯರನುರಿಗುಂ ||
ಧನದಿಂ ಲೋಧಾಗ್ನಿಯನಿಂ
ಧನ ಭಾರದಿನಾವನಗ್ನಿಯಂ ನಂದಿಸುವಂ |||| ೭೧ ||

ಜನಕನನರಣ್ಯನಗ್ರಜ
ನನಂತರಥನಿಳೆಯನೊಂದುತಿಂಗಳ ಕೂಸಿ೦ ||
ಗೆನಗಿತ್ತು ತೆಗೆದರೆನ್ನವೊ
ಲಿನವ೦ಶದೊಳಿಂತು ಮೋಹ ಮೂರ್ಛಿತರೋಳರೇ|| ೭೨ ||


1. ಸಾವಿಸಲ್. ಚ. 2. ಭುಂ. ಕಖ. ; ಭಂ. ಗ.