ಈ ಪುಟವನ್ನು ಪ್ರಕಟಿಸಲಾಗಿದೆ

೧೪೬

ರಾಮಚಂದ್ರಚರಿತಪುರಾಣಂ

ಪದನಖ ಚಂದ್ರ ಮಂಡಲಿಗೆ ಚಂದ್ರಿಕೆಯಂ ಕುಡೆ ದೇಹದೀಪ್ತಿ ಹಾ |
ರದ ನೆವದಿಂದಮೋಲಗಿಸೆ ತಾರಗೆಯಂ ನಿಜಕ೦ಠ ಕಂದಳಂ ||೭೮ ||

ಅನಂತರಂ ಲಕ್ಷ್ಮಣ ಭರತ ಶತ್ರುಘ್ನರ್ ಸರ್ವಾಂಗ ಪ್ರಣತರ ಪ್ಪುದುಂ ಅನಂತ
ಸುಖ ಭೋಗ ಭಾಗಿಗಳಾಗಿ ಮೆಂದು ಪರಸಿ ಪಠ್ಯಂಕ ಪಾರ್ಶ್ವದೊಳಿಕ್ಕಿದ ಮಣಿಮ
ಯಾಸನಂಗಳೊಳ್ ಕುಳ್ಳಿರಿಸಿ ದಶರಥಂ ರಾಮಚಂದ್ರನ ಮುಖಚಂದ್ರಮಂ ನೋಡಿ-

ಚ || ನಿಲೆ ನುಡಿವೀವ ಕಾವ ಧರೆಯಂ ಪ್ರತಿ ಪಾಲಿಸ ಧರ್ಮವೀಧಿಯಿಂ |
ತೊಲಗದ ಪೆರ್ಮೆಯಂ ತಳೆದ ಪೆರ್ಮಗನಂ ಭುವನಾಧಿಪತ್ಯದೊಳ್ ||
ನಿಲಿಸಿ ನಿಸರ್ಗ ದುರ್ಗಮೆನಿಸಿರ್ದಪವರ್ಗ ಪಥಕ್ಕೆ ದಾಯಿ |
ಟ್ಟಲಘು ಪರಾಕ್ರಮಕ್ಕೆ ನೆಲೆಯಾಗದ ಪಾರ್ಥಿವನೇಂ ಕೃತಾರ್ಥನೇ || ೭೯ ||

ಮ || ನೊಸಲೊಳ್ ಕಬ್ಬಡೆದ೦ತೆ ಪುತ್ರ ಪಡೆದೆಂ ನಿನ್ನಂ ಸ್ಪುರಜನಂ |
ವಸುಧಾ ರಾಜ್ಯಮನೊಪ್ಪುಗೊಳ್ ನಿಲಿಸು ನೀನೆನ್ನಂ ತಪೋರಾಜ್ಯದೊಳ್ ||
ಹಸುಗೂಸಿಂಗೆನಗಿತ್ತು ಮಜ್ಜನಕನೀ ಸಂಪತ್ತಿಯಂ ಪೂಣ್ಣು ಸಾ |
ಧಿಸಿದಂ ಸಜ್ಜನತಾ ಶರಣ್ಯನನರಣ್ಯಂ ಮೋಕ್ಷ ಸಂಪತ್ತಿಯಂ || ೮೦||

ಮ || ಸುತ ನಮ್ಮನ್ವಯದೊಳ್ ಪುರಾತನ ಜಗದ್ವಿಖ್ಯಾತ ಭೂನಾಥರೀ |
ಸ್ಥಿತಿಯಿಂ ರಾಜ್ಯ ಸುಖಂಗಳೊಳ್ ತಣಿದು ತತ್ಯಾಭ್ಯಾಸ ವಿಶ್ರಾಂತ ಜೀ ||
ವಿತರಾದರ್ ಮಜತೆದೀ ಕುಲಕ್ರಮನನಾನಿಂತಿರ್ದು ಸನ್ಮಾರ್ಗ ಪ |
ದ್ದತಿಯಂ ಹಾಸ್ಯರಸ ಪ್ರವಾಹ ಭರದಿಂ ಪ್ರಕಾಳಿತವಾಟೆನೇ || ೮೧ ||

ಮ || ತಿಲಕಾಕಾರದಿನಿರ್ಕೆ ನಿನ್ನ ನೊಸಲೊಳ್ ಸಾಮ್ರಾಜ್ಯ ಪಟ್ಟಂ ಧರಾ |
ವಲಯಾಲಂಕೃತಮಕ್ಕೆ ನಿನ್ನ ಭುಜದಂಡಂ ನಿನ್ನ ಮೌಳಿಪ್ರಭಾ ||
ನಲಿಯಿಂ ಚಿತ್ರಿತನಕ್ಕೆ ಬೆಳ್ಕೊಡೆ ತಪ ಗಾಂ ಮನಂದಂದೆನೆ |
ನ್ಯೂಲವಂ ಪಾಲಿಸು ಪಾಯು ಪಿತೃವಾಕ್ಕೊಲ್ಲಂಘನಂ ರಾಘವಾ ||೮೨||

ಚ || ಕಿಡಿವಿಡೆ ಕರ್ಸರಂ ಸುಗಿದು ಮೆಯ್ದೆ ಗೆದಂ ಕಮಠಾಧಿಪಂ ಸಡ |
ಲೈಡೆ ಸೆಡೆಗಳ್ ಫಣಿಪ್ರಭು ಮೊಗ೦ದಿರಿದ ದೆಸೆಯಾನೆ ಮಾರ್ಕೊರ ||
ಊಡೆಯದೆ ತಾ ಮುಂದುವಿವರ್ಕತಿಭಾರದೊಳಾದ ಸೇದೆಯಂ |
ಕಿಡಿಸಿ ತನೂಜ ನೀ೦ ತಳೆವುದೀ ನೆಲನಂ ನಿಜಬಾಹು ದಂಡದೊಳ್ ||೮೩ ||
ಎಂಬುದುಂ ರಾಮಚಂದ್ರಂ ಮುಕುಳಿತ ಕರಸರೋಜನಾಗಿ-


1. ರ್ದ. ಚ.