ಈ ಪುಟವನ್ನು ಪ್ರಕಟಿಸಲಾಗಿದೆ
ಸಪ್ತಾಶ್ವಾಸಂ
೧೪೯


ವಿದ್ವಜ್ಜನಕ್ಕೆ ಪಸುಗೆಗೆ
ವಿದ್ವೇಷಣ ವಿದ್ಯೆ ಬರ್ಪ ತೆ ಆದಿಂ ಬಂದಳ|| ೯೪ ||

ಅಂತು ಕೆಲಕ್ಕೆ ಬಂದು -

ಚ || ಅನುಚಿತಮೆಂಬಿದಂ ಬಗೆಗೆ ತಾರದೆ ದುರ್ಯಶನಕ್ಕು ಮೆಂಬಿದಂ |
ನೆನೆಯದೆ ಕೈಕ ದೇವರೆನಗೀವುದು ಬೈಕೆಯ ಮಚ್ಚನೆಂಬುದುಂ ||
ಮನುಕುಲದೊಳ್ ತೊದಳ್ಳುಡಿ ಪೊದು ಮೇ ಬೆರ್ಚದೆ ಬೇಡಿಕೊಳ್ ತಪೋ |
ವನ ಗಮನಕ್ಕೆ ನಿಮ್ಮ ಕರಮಲ್ಲದುದಂ ಮೃಗಶಾಬ ಲೋಚನೇ ||೯೫ ||

ಎನೆ ಮನದೆ ಕೊಂಡು-

ಚ || ವದನ ಸುಧಾಂಶು ಬಿಂಬದ ಕಳಂಕದ ಬಿನ್ನುಗಳಂತೆ ವಕ್ರ ಪ |
ದೃದ ಮಧುಪಾನಮಂ ಸವಿದು ಸೊರ್ಕಿದ ತುಂಬಿಗಳ೦ತೆ ನೀಳ್ಳುವಾ ||
ಸುದತಿ ಸಮಗ್ರವಗ್ರ ಜನರಲ್ ಸಟಿಗಂಜದೆ ಪಾಪ ಭೀರುವಾ |
ಗದೆ ಭರತ೦ಗೆ ರಾಜ್ಯ ಭರಮಂ ಕುಡವೇ ಮಲೀಮಸೋಕ್ತಿಗಳ್ || ೯೬ ||

ಕಂ || ದಶರಥನಂ ಕೈಕೆ ಚತು
ರ್ದಶ ವರ್ಷಾವಧಿಯನವನಿಯಂ ಬೇಡೆ ಚತು ||
ರ್ದಶ ಭುವನಾವಧಿಯೆನೆ ದು ರ್ಯಶಸ್ತಟನ್ನಾದಮಾದಮೇನೊದವಿದುದೋ|| ೯೭||

ಕನವನಿಪ ಕಾಳರಾತ್ರಿಯ
ದನಿಯಂತಾ ನೃಪನ ಕಿವಿಗೆ ದುಸ್ಸಹವಾಯ್ತಾ ||
ವನಿತೆಯ ನುಡಿ ಕಿಡಿಯಂತಿರೆ
ಮನಕ್ಕೆ ಪಡೆದು ವೇದನಾಸ್ವಾದನನಂ|| ೯೮ ||

ಡೋಲಾಯಮಾನ ನನನ
ಸ್ವಾಲಾಸಂ ಗತ ಮನೋರಥಂ ದಶರಥನಾ ||
ಬಾಲೆಯ ದನಿ ಕಿವಿವುಗೆ ಘನ
ಮಾಲೆಯ ದನಿಗೇಳ ಹಂಸನಂತಳವುದಂ|| ೯೯ ||

ಮ|| ಎರಡಕ್ಕುಂ ನುಡಿ ಮೆಚ್ಚುಗೊಟ್ಟು ಕುಡದಂದೀ ಕೈಕೆಗಾನಿತ್ತೊಡಂ ।
ಧರೆಯಂ ಸ್ತ್ರೀಜಿತನಾಗಿ ಕೊಟ್ಟ ನವನೀಶಂ ರಾಮನಿರ್ದ೦ದದಿ೦ ||


1. ಸ್ಪುಟತ್ಸಟಹನಾದಮೇ. ಗ; ರ್ಯಶಃ ಪಟಹ ಗಭೀರ ನಾದಮೇ. ಫ.