ಈ ಪುಟವನ್ನು ಪ್ರಕಟಿಸಲಾಗಿದೆ

೧೫೬

ರಾಮಚ೦ದ್ರಚರಿತಪುರಾಣ೦

ಮಸುಳಿಸಿ ಹಲಿಯವೊಲೆ೦ಟುಂ
ದೆಸೆವರೆಗಂ ವಿಶದ ಕೀರ್ತಿಯಂ ಪಸರಿಸಿದರ್|| ೧೩೬ ||

ಕಂ || ಏನಾನುಮನಿತ್ತು ಕೆಲರ್ |
ದಾನಗುಣಕ್ಕಂತೆ ಬೆಸೆವರಯ್ಯನ ಸತ್ಯ ||
ಕ್ರೇನಯ್ಯ ರಘುಜನಂತಂ
ಭೋನಿಧಿ ವಳಯಿತಮನಿಳೆಯನಿತ್ತವನಾವಂ|| ೧೩೭ ||

ಎಂದು ಗಟ್ಟಿ ಸಭಾಜನದ ಸ್ತವನಕ್ಕಂ ಭರತಂ ಕ್ರಮಂದಪ್ಪಿ ಸಾಕೇತ
ಸಾಮ್ರಾಜ್ಯ ಪಟ್ಟಮನೊಡಂಬಟ್ಟು ದರ್ಕ೦ ಲಕ್ಷಣಂ ಕಟ್ಟು ಕಡೆದು-

ಕಂ | ಅಡೆವೊತ್ತೆ ಕೋಪಶಿಖಿ ಕ
ಲೈಡಿಯಂ ಕೆಂಡಮುನನುಗುಳೆ ಪುರ್ವವಿ್ರಸೆ ಮೇ ||
ಗಡತ್ವ ಪೊಗೆಯಂತೆ ಕೃಷ್ಣಂ
ಕಡೆಗಾಲದೊಳೊಗೆದ ಧೂಮಕೇತುವೊಲಿರ್ದ೦|| ೧೩೮ ||

ಅಂತು ಕೋಪವಶ ಗತನಾಗಿ-

ಶಾ || ಕಾರಾಗಾರದೊಳಿಂದ್ರನಂ ಸೆರೆಯಿಡಲ್ ಗೋತ್ರಾದ್ರಿಯಂ ಚಾಳಿಸಲ್ |
ತಾರಾಮಂಡಲಮಂ ನೆಲಕ್ಕೆ ನೆಲನಂ ಮೋಮಕ್ಕೆ ಸಾಗಿಸಲ್ ||
ಪಾರಾವಾರದ ನೀರನೀ೦ಟಲಖಿಳಾಶಾದಂತಿ ದಂತಂಗಳಂ |
ಬೇರಿಂದಂ ಕಿಳಲಂದದೇಂ ಬಗೆದನೋ ರಕ್ಷಣಂ ಲಕ್ಷಣಂ || ||೧೩೯||

ಕಂ || ಸೌಮಿತ್ರಿ ವಿಲಯಕಾಲ ಮ
ಹಾಮೇಘ ಸ್ಕಂಧತಿ ವಿಕಟ ನರ್ತಿತ ವಿದ್ಯು ||
ದ್ದಾಮಮಿದೆನೆ ದಂತಾಂಶು
ಸ್ತೋಮಂ ಪೊಳೆದು ಬೆಟ್ಟ ವೆಟ್ಟನೆ ನುಡಿದಂ || ೧೪೦ ||

ಭರತಾವನಿಯಂ ಕೊಟ್ಟಂ
ಭರತ೦ಗೆ ರಘುಪ್ರವೀರನಯ್ಯನ ನುಡಿಯಂ ||
ಪರಿಪಾಲಿಸಲೆಂಗುಮೆ ಪೇರ್
ಧರೆಯಂ ಬೆಳ್ಳಾಡಿಕೊಂಡರೆಂಗುಂ ಲೋಕಂ ||೧೪೧||


1. ಅಡಿ ಗ. ಫ. 2. ರ್ವಿಸಿ ಮೇಗಡರೆ. ಕ. ಖ. ಗ. ಘ. 3. ವಿಕಟ ವರ್ತಿತ. ಕ.
ಖ. ಗ; ನಿಕಟ ನರ್ತಿತ. ಘ; ನಿಕಟ ವರ್ತಿತ. ಚ. 4. ಗುಮೆ. ಗ. ಚ.