ಈ ಪುಟವನ್ನು ಪ್ರಕಟಿಸಲಾಗಿದೆ

೧೬೬

ರಾಮಚ೦ದ್ರಚರಿತಪುರಾಣಂ

ಸಿನಿಗಾದತ್ತೆನೆ ಸಂಜೆ ರಂಜಿಸಿದುದೇನಾಶ್ಚರ್ಯಮೇ ತಾಳರಾ |
ರಿನಿಯಂ ತನ್ನನಗಲ್ಗೊಡಂ ನೆರೆದೊಡಂ ನೀರಾಗಮಂ ರಾಗಮಂ || ೫ ||

ಮ || ವಿರಹ ವ್ಯಾಕುಲಮಾಗೆ ಚಕ್ರಮಿಥುನಂ ಸಂಕೋಚನಂ ತಾಳೆ ತಾ |
ವರೆ ಕಾಮಾತುರರುಂ ರಜೋಧಿಕರುಮೇಂ ಖೇದಕ್ಕೆ ಪಕ್ಕಾಗದಿ ||
ರ್ಪರೆ ದೋಷಾಂಧರೆನುತ್ತವಂ ನಗುವವೋಲ್ ನೆಯ್ದಿ ಲೋಳಂ 'ಮೇಲ್ಮರ |
ಲ್ಬರಲುತ್ತಿರ್ದುವು ಚಂಚರೀಕ ಮಧುರ ವ್ಯಾಹಾರ ವಾಚಾಲಿತಂ || ೬ ||

ಕಂ | ಮಿನುಮಿನನೆ ತೋಆಲೆ ತಾರಗೆ
ಘನತರ ತಿಮಿರಾವಕಾಶಮಾಕಾಶಮದೇಂ ||
ನೆನೆಯಿಸಿದುದೊ ಕಡಲೊಳ್ ಸೀ |
ರ್ಪನಿ ತನುವಂ ಪುದಿಯೆ ತೋರ್ಪ ಕೃಷ್ಣನ ತನುವಂ || ೭ ||

ಅಂತು ನೇಸರ್ಪಡುವುದುಮಾಸಮಯದೊಳುಮ್ಮಳಿಸಿ ತಮ್ಮಲ್ಲಿಗೆ ವಂದ ಜನ
ನಿಯರೊಳ್ ವಿನಯಮಂ ನುಡಿದು ಸಂತೋಷಂಬಡಿಸಿ ಮಗು ರಮನೆಗೆ ಕಳಿಸಿ
ಜಿನಮಂದಿರಕ್ಕೆ ವಂದು, ನಿದ್ರಾ ಮುದ್ರಿತ ಲೋಚನರ್ ನಡುವಿರುಳೆಚ್ಚು ಪರಮಜಿನ
ಪತಿಯಂ ಬೀಳ್ಕೊಂಡು ಬಿಲ್ಲುಮನಂಬುಮಂ ಕೊಂಡು, ಸೀತೆ ನಡೆದುಬರೆ ಪೊಲ
ನಡುವಣ ಕ್ಷುಲ್ಲಕ ದ್ವಾರದಿಂ ಪೊರಮಟ್ಟು, ದಕ್ಷಿಣಾಭಿಮುಖರಾಗಿ ಪಯಣಂ
ಬೋವು ದುಮನಂತ ಸಾಮಂತ ಸಂದೋಹಮನರಸಿಂದನೆ ಮಾರ್ಬಟ್ಟೆ ಯೊಳ್ ಬರ್ಸ
ರಂ ಬೆಸಗೊಳುತ್ತುಂ ಬೇಗಮೆಯ್ತಂದು, ದೂರೋತ್ಸಾರಿತ ವಿಚಿತ್ರಾತಪತ್ರ ವಿವಿಧ
ವಾಹನರ್ ವಿನಯವಿನಮಿತೋತ್ತಮಾಂಗರೆಂತಾನುಮೆಯೇ ವಂದೆವೆಂದು ಬಿನ್ನವಿಸಿ,
ಸೀತೆ ಸೇದೆವಡುವಳೆಂದು ಮೆಲ್ಲಮೆಲ್ಲನೆ ನಡೆಯುತ್ತಿರ್ದೆವಲ್ಲದಂದಿನ್ನೆವರಂದೂರಂ
ಪೋಪವೆಂದವರೊಡನೆ ಮಾತಾಡುತ್ತು ಮೆಡೆಯೆಡೆಯ ಗ್ರಾಮ ನಗರಂಗಳಂ ನೋಡು
ತುಂ ಕ೦ದು ಗ೦ಭೀರತರಂಗಿಣಿಯ ನೆಯ್ದೆ ವಂದಲ್ಲಿ ನಿಂದು, ಸಾಮಂತಾದಿಗಳ
ನೆಂತಾನುಮೊಡಂಬಡಿಸಿ ನಿಲಿಸಿ, ತೋಯಂ ಯಾನಪಾತ್ರದಿಂ ದಾಂಟಿ ಪೋಪು
ದುಂ, ರಾಮಲಕ್ಷ್ಮಣರಗಲೆಗೆ ಸೈರಿಸಲಾರದೆ ಕೆಲ೦ಬರದುವೆ ನಿರ್ವಗಕಾರಣವಾಗೆ
ತನ್ನದೀತೀರದ ಜಿನಾಗಾರದೊಳಿರ್ದ 'ಶತಕೇತುಗಳೆಂಬ ಗಣಧರಸ್ವಾಮಿಗಳ ಸಮಕ್ಷ
ದೊಳ್ ದೀಕ್ಷೆಗೊಂಡಲ್ಲಿಯೆ ನಿಂದ‌ ; ಕೆಲಬರ್ ವ್ರತವಿಶೇಷಂಗಳಂ ಕೈಕೊಂಡು
ಸಾಕೇತಪುರಕ್ಕೆ ವಂದರದೆಲ್ಲಮಂ ದಶರಥ ನರನಾಥಂ ಕೇಳು

ಚ || ಸೆಡೆದನೆ ತನ್ನ ಬಂಧುಗಳಗಿಗೆ ಪುತ್ರ ಕಲತ್ರ ಮೋಹದೊಳ್ |
ತೊಡರ್ದನೆ ಪಟ್ಟಬಂಧನನೊಡರ್ಚಿದನೇ ಭರತಂಗೆ ರಾಘವಂ ||


1. ಮಲ್ನರಬ್ಬರಲು ಚ 2. ಶ್ರುತಕೇತು. ಫ.