ಈ ಪುಟವನ್ನು ಪ್ರಕಟಿಸಲಾಗಿದೆ

ಪ೦ಪ ರಾಮಾಯಣದ ಕಥೆ

11

ಆ ಮುನಿಯ ಬಳಿಯಲ್ಲಿ ಕಂಡನು. ದಶರಥನು ಇಂದುಗತಿಯು ದೀಕ್ಷೆಗೊ೦ಡು ದಕ್ಕೆ ಕಾರಣವನ್ನು ಮುನಿಮುಖದಿಂದ ತಿಳಿದ ತರುವಾಯ ಪ್ರಭಾಮಂಡಲನು ತನ್ನನ್ನು ಅಷ್ಟು ಅಕ್ಕರೆಯಿಂದ ಇಂದುಗತಿಯು ಸಲಹಿದುದಕ್ಕೆ ಕಾರಣವನ್ನು ತಿಳಿಸ ಬೇಕೆಂದು ಮುನಿಯನ್ನು ಭಕ್ತಿಯಿಂದ ಬೇಡಿಕೊಳ್ಳಲು, ಮುನಿಯು ಆ ವೃತ್ತಾಂತ ವನ್ನು ವಿಸ್ತಾರವಾಗಿ ತಿಳಿಸಿದನು. ಇದನ್ನು ಕೇಳಿ ಅಲ್ಲಿ ನೆರೆದಿದ್ದ ರಾಜಸಭೆಯೂ ಪ್ರಭಾಮಂಡಲನೂ ಸೀತೆಯೂ ಬೆರಗಾಗಿ ಹರ್ಷವನ್ನು ತಾಳಿದರು. ಪ್ರಭಾ ಮಂಡಲನು ದಶರಥನಿಗೆ ಸಾಷ್ಟಾಂಗ ನಮಸ್ಕಾರಮಾಡಿ ರಾಮ ಲಕ್ಷ್ಮಣ ಭರತ ಶತ್ರುಘ್ನರೊಡನೆ ವಿನಯವೃತ್ತಿಯಿಂದಿರಲು, ಸೀತೆಯು ಅಣ್ಣನಾದ ಪ್ರಭಾಮಂಡಲ ನಿಗೆ ನಮಸ್ಕಾರ ಮಾಡಿದಳು. ಆತನು ಆಕೆಯನ್ನು ಅಖಂಡಿತ ಪುಣ್ಯಭಾಗಿನಿ ಯಾಗೆಂದು ಹರಸಿ ಪರಮಾನಂದ ಭರಿತನಾಗಿದ್ದನು. ದಶರಥ ಮೊದಲಾಗಿ ಎಲ್ಲರೂ ಅಲ್ಲಿಂದ ಹೊರಟು ಸಾಕೇತಪುರವನ್ನು ಸೇರಿದರು. ತರುವಾಯ ದಶರಥನು ಈ ವೃತ್ತಾಂತವನ್ನು ಜನಕನಿಗೆ ಹೇಳಿ ಕಳುಹಿಸಲು ಆತನೂ ವಿದೇಹಿಯೂ ಬಹಳ ತವಕದಿಂದ ಅಯೋಧ್ಯೆಗೆ ಬಂದು ಪ್ರಭಾಮಂಡಲನನ್ನು ಕಂಡು ಮಗನನ್ನು ಆಗ ತಾನೆ ಪಡೆದಂತೆ ಸಂತೋಷ ಸಾಗರದಲ್ಲಿ ಮುಳುಗಿದರು. ದಶರಥನು ಸಾಕೇತ ಪುರಕ್ಕೆ ಬಂದಿದ್ದ ತನ್ನ ಬಂಧುವರ್ಗವನ್ನೆಲ್ಲ ಬಹಳ ಪ್ರೀತಿಯಿಂದ ನೋಡಿ ಕೊಂಡಿದ್ದನು. ಪ್ರಭಾಮಂಡಲನು ರಾಮಲಕ್ಷ್ಮಣರೊಡನೆ ಕೂಡಿ ಅನೇಕ ವಿನೋದ ಗಳಿಂದ ಒಂದು ತಿಂಗಳನ್ನು ಒಂದು ಕ್ಷಣ ದಂತೆ ಕಳೆದು ಮಿಥಿಲೆಗೆ ಹೋಗಿ ಜನಕನ ರಾಜ್ಯವನ್ನು ತನ್ನ ಚಿಕ್ಕಪ್ಪನಾದ ಕನಕನಿಗೆ ಕೊಟ್ಟು ತಾಯಿತಂದೆ ಗಳೊಡನೆ ರಥನೂ ಪುರಚಕ್ರವಾಳ ಪುರವನ್ನು ಸೇರಿ ಸುಖದಿಂದಿದ್ದನು.
ಒಂದು ದಿನ ದಶರಥನು ಸರ್ವಭೂತಹಿತ ಭಟ್ಟಾರಕರನ್ನು ಕಂಡು ಭಕ್ತಿ ಯಿಂದ ಪೂಜಿಸಿ ತನ್ನ ಭವಾವಳಿಯನ್ನು ತಿಳಿಸಬೇಕೆಂದು ಬೇಡಿಕೊಳ್ಳಲು ಆ ಮುನಿಪತಿಯು ಅದನ್ನು ವಿಶದವಾಗಿ ತಿಳಿಸಿದನು. ಅದನ್ನು ಕೇಳಿ ದಶರಥನು ತಾನು ಸುಕೃತ ದುಷ್ಟತ ಕರ್ಮವಿಪಾಕ ಸುಖ ದುಃಖಗಳನ್ನನುಭವಿಸಿ ರಾಟಳದ ಗುಂಡಿಗೆಯಂತಾದೆನೆಂದೂ ಪುಣ್ಯ ಪಾಪಗಳೆರಡಲ್ಲದೆ ಭಂಡಾರ ವಸ್ತು ವಾಹನಾದಿ ಗಳಾವುವೂ ಒಡನೆ ಬರಲಾರವೆಂದೂ ತಿಳಿದು ಮೋಕ್ಷಸುಖವನ್ನು ಬಯಸಿ ಮುನೀಂದ್ರನಪ್ಪಣೆಯನ್ನು ಪಡೆದು ಅಯೋಧ್ಯೆಗೆ ಬಂದನು. ಆ ದಿನ ದಶರಥನು ನಿತ್ಯ ನಿಯಮಗಳನ್ನು ನೆರವೇರಿಸಿದನಂತರ ಸಿಂಹಾಸನವನ್ನೇರಿ ಒಡೈಲಗಂಗೊಟ್ಟು ತನ್ನ ಕುಮಾರರನ್ನು ಬರಹೇಳಿದನು. ಎಲ್ಲರೂ ಬಂದು ತಂದೆಗೆ ದಂಡಪ್ರಣಾಮ ವನ್ನು ಮಾಡಿ ಆತನ ಆಶೀರ್ವಾದವನ್ನು ಪಡೆದು ಸಿಂಹಾಸನದ ಪಕ್ಕದಲ್ಲಿದ್ದ ಮಣಿಮಯಾಸನಗಳ ಮೇಲೆ ಕುಳಿತುಕೊಂಡರು. ದಶರಥನು ರಾಮಚಂದ್ರನ ಮುಖವನ್ನು ನೋಡಿ, “ಮಗುವೇ! ಹಣೆಯಲ್ಲಿ ಕಣ್ಣನ್ನು ಪಡೆವಂತೆ ತೇಜೋ