೧೮೬
ಕಂ|| ಪರಪುಷ್ಟ ದಂತೆ ಪುಗಲೆಂ
ಬರ ಮಾತಂ ಮಾಜಿ ಲಕ್ಷಣಂ ಪೊಕ್ಕು ಸರೋ ||
ವರಮಂ ಮೊಗೆದಂ ಜಲಮಂ
ಸರೋಜ ವಿಸ್ತೀರ್ಣಪರ್ಣ ಪುಟಕಾ ಹಸ್ತ೦ || ೧೦೫ ||
ಅಂತು ನೀರಂ ಮೊಗೆದು ಪೂಗೊಳನಂ ಪೊಅಮಡುವುದುಮಾಸ್ತಮಯದೊಳ್
ಪಿಡಿಯನೇಆ ಕಾಮನ ಕೈಪಿಡಿಯಂತೆ ಬರುತುಂ ಕಸ್ಕೂಲದೊಳ್ ತನ್ನಂ ಕಂಡು
ಕಟಂಗೊಂಡು ಕೂರಂಕುಸದ ಪೊಳೆಸಿನೊಡನೆ ಪಾಲೊಳ್ ತೊಳೆದ ಕುಡು
ಮಿಂಚಿನ ಗೊಂಚಲಂತೆ ಪೊಳೆದು ಸೋಲದಿಂದೆಳಸಿ ಸುಯಿಸುವ ಕಡೆಗಣ್ಣ ನೋಟ
ದಿಂ ಮಾಟದ ಗಂಡವರಿಜೆಂದ ಅದೀ ವೇಷಮನಿವಳಿದೇಕೆ ತಾಳ್ವಿದಳೆಂದಅಯಲನ
ಸರಂ ಗೊಟ್ಟರೆ ಮುಟ್ಟೆ ವಂದು -
ಚ || ಮನದೊಡನೆಕ್ಕೆಯಿಂ ಪರಿಯೆ ಕಣ್ಣಡೆ ನೋಡಿ ಮೃಗಾಕ್ಷಿ ವಾರಿಜಾ |
ಕನಕಡುಗಾಡಿಯಂ ಪುರುಷ ವೇಷದ ರಾಜ ತನೂಜೆ ಕಂತು ಮೇ ||
ಹನ ಶರಮುರ್ಚೆ ಘರ್ವಜಲ ಕುಲಮುಂ ಪುಳಕೋದ್ದ ಮಂಗಳುಂ |
ತನುಲತೆಯೊಳ್ ಪೊದಾರೊದನೆ ತಾಳಿದಳುತ್ಕಳಿಕಾ ವಿಳಾಸಮಂ || ೧೦೬ ||
ಅಂತು ಕಂತುಶರಮುರ್ಚೆ ಬೆರ್ಚಿ ಶರಣೆ ಬರ್ಸ೦ತೆ ವಾಹನದಿಂದಿಳಿದು
ಬಂದೀತನಾದೇಶ ಪುರುಷನೆಂದ ಅದು ನಿಶ್ಚಿಸಿ ಬೀಡಿಂಗೆ ಬಿಜಯಂಗೆಯ್ಕೆಮೆಂದು
ಕೈಯಂ ಪಿಡಿದೊಡಗೊಂಡು ಪೋಗಿ ಹಂಸತೂಲತಲ್ಪದೊಳ್ ಕುಳ್ಳಿರಿಸಿ ತಾನುಮೊಡನೆ
ಯೆ ಕುಳ್ಳಿರ್ದು ನೀಮಾರ್ಗೆನಿಮಿತ್ತ ಮಿಲ್ಲಿಗೆ ಬಿಜಯಂಗೆಯ್ದರೆಂಬುದುಂ, ಲಕ್ಷ್ಮಣ
ದೇವನೆಂದನೆಮ್ಮ ವೃತ್ತಾಂತಮಂ ಬಲಕ್ಕೆ ತಿಳಿಯವೇಳಪೆನೀಗಳೆಮ್ಮತ್ತಿಗೆ ನೀರಡಸಿ
ಬಲ್ಲಿರ್ದೊಡೆಮ್ಮಣ್ಣನ ಬೆಸದಿಂ ಜಳಾಶಯವನಳಿಸಿ ಬಂದೆನದನಿದವಸರ
ಮಲ್ಲೆಂಬುದುಮಾಬೆಸಕ್ಕಾನೆ ಸಾಲ್ವೆನೆಂದು ಕಣ್ಣರಗದ ನೀರ್ವೆರಸು ಕೆಲದೊಳಿರ್ದ
ಕೆಳದಿಯರನಟ್ಟುವುದುಮಾಕೆಗಳವರಿರ್ದಲ್ಲಿಗೆ ಪೋಗಿ, ಹಿಮ ಸಲಿಲದಿಂ ಗಮನಶ್ರಮ
ಮನಾಲಿಸಿ ಮುಂದಿಟ್ಟೋಡಗೊಂಡು ಬಂದು ಮಜ್ಜನ ಭೋಜನಾದಿ ಸತ್ಕಾರಮಂ
ಮೆರೆವುದುಮಾಕನ್ನೆಯ ಜನನಿಯಪ್ಪ ಸೃದ್ಧಿಮತಿ ಮಹಾದೇವಿ ನಿಜ ಪರಿಜನಮಂ
ಪೋಗಲ್ವೆಟ್ಟು ಕಟ್ಟಿಕಾಂತಮಂ ಮಾಲ್ಪುದುಂ, ಜನನಿಯ ಕಣ್ಣರಿದು ಕನ್ನೆ ತನ್ನ
ಮುನ್ನೆ ತೊಟ್ಟ ಗಂಡವಚ್ಚ ಮಂ ಕಳೆದು ಕಟಕ ಕಟಸೂತ್ರ ವಿಚಿತ್ರಾಭರಣಾದಿ ದಿವ್ಯ
ವಸ್ತುಗಳಿಂದಳಂಕರಿಸಿ-
ಕಂ || ರೂಪ ಪರಾವರ್ತನ ವಿ
ದ್ಯಾ ಪರಿಣತಿಯಿಂದಮತನು ರತಿಯಾದವೊಲಾ ||