೧೮೯
ಉ || ತೊ೦ಡಿನೊಳೆನ್ನು ಪೇರಡವಿಯಂ ಪುಗುತ೦ದಸರೆಂದು ಲುಬ್ದಕರ್ |
ತಂಡದೆ ಸುತ್ತಿ ಮುತ್ತೆ ಗೊಲೆಗೊತ್ತಿದನೇ ಧನುವಂ ಸರಲ್ಯ ಳಂ ||
ಕೊಂಡನೆ ದಿವ್ಯ ಬಾಣಧಿಯಿನಸ್ಸಲಿತಂ ನಸುನಕ್ಕು ತನ್ನ ಕೋ|
ದಂಡ ಕೃತಾಂತ ದಂಡದೊಳೆ ಊದಿದನೋಡಿಸಿದಂ ಜನಾರ್ದನಂ || ೧೧೫ ||
ಅಂತು ತಮ್ಮ ಕೈಯ ಬಿಲ್ಗಳಿಂ ಬೀಳೆ ಪೊಯ್ಯೋ ಬೇಡವಡೆ ಬೆಗಡುಗೊ೦
ಡೋಡಿ ಪೋಗಿ ತಮಾಳಂಗವರಳವಿಗಲಿದಳವನ ಆಯೆ ಪೇಊ ದುಮಾತನತಿಪ್ರಬಲ
ಕಿರಾತ ಬಲ ಸಮೇತಂ ಮೇಲೆತ್ತಿ ಬರ್ಪುದುಮದಂ ಕಂಡು ಕಡುಮುಳಿದು ಸೌಮಿತ್ರಿ
ಲಯ ಸಮಯದ ಕಾಳರಾತ್ರಿಯಂತೆ ಸಾಗರಾವರ್ತಮಂ ಜೇವೊಡೆಯ ಸಂವರ್ತ
ಸಾಗರಾವರ್ತ ಗ೦ಭೀರ ಘೋಷದಂತೆ ಚಾಪ ಟಂಕಾರ ಘೋಷಮೊದವೆ ಕೇಳು
ರೌದ್ರಭೂತಿ ಸಾಮಾನ್ಯ ಭೂತರಲ್ಲಿವರ್ ಕಾರಣಪುರುಷರೆಂದು ಭಯ ಚಕಿತ ಚಿತ್ತ
ನಾಗಿ-
ಕಂ|| ಆಗ್ರಹನೊಪ್ಪದಿದೆನಗೆ ಸ
ಮಗ್ರರೊಳನಿವಾರ ವೀರ ರಚಲಿತ ಧೈರರ್ ||
ವಿಗ್ರಹವನುಟಿವೆನಿವರೊಳ
ನುಗ್ರಹಮಂ ಪಡೆವೆನೆಂದು ರಥದಿಂದಿಳಿದಂ || ೧೧೬ ||
ಅ೦ತಳವುದು ರಥದಿಂದಿದುಬಂದು ಬಲಾಚ್ಯುತರ ಮುಂದೆ ನಿಂದು ಕೈ
ಗಳು ಮುಗಿದು ಮುನ್ನ ಮೆನ್ನಬಿಯಮೆಯಿಂದಿನ್ನೆ ವರಮನೆ ಯಮನಾಚರಿಸಿದೆನಿಸಿ
ವ್ಯ ಬೆಸಸಿದಂದದೊಳೆ ನೆಗಟಿವ್ವನೆಂದು ಸರ್ವಾಂಗ ಪ್ರಣತನಾಗಿರ್ಪುದುಂ, ಲಕ್ಷಣ
ಕುಮಾರನಂಜದಿರೆ೦ದಭಯ ವಚನದಿಂದವನ ಮನದ ಭಯಮಂ ಕಳೆದು ಬಲಿಯಂ
ನೀ೦ ಸೆರೆವಿಡಿದಿರ್ದ ವಾಲಖಿಲ್ಯನಂ ತಡೆಯದೊಡಗೊಂಡು ಬಾಯೆಂಬುದುಂ, ಮಹಾ
ಪ್ರಸಾದವೆಂದಾಕ್ಷಣದೊಳೆ ಪೋಗಿ ತರ್ಪುದುಮಾತನತಿತ್ವರಿತಗತಿಯಿಂ ಬ೦ದು-
ಮ || ಬಲನಾರಾಯಣ ದೇಹದೀಸ್ತಿ ತನುವಂ ತಸೆ ಪಾದಾನತಂ ।
ಪಲಕಾಲಂ ಸೆವೋಗಿ ಬೇಡರೊಡನೊಂದಾಗಿರ್ದ ತದ್ರೂಷ ಪ೦ ||
ಕಿಲತಾ ಕ್ವಾಲನ ತತ್ಪರಂ ಸುರಸರಿತ್ಕಲ್ಲೋಲಮಂ ಯಾಮುನಾ |
ಜಲಮಂ ಪೊಕ್ಕ ಘಮರ್ಷಣಂ ಮುಳಿಗಿದಂತಿರ್ದ೦ ಪುರೋಭಾಗದೊಳ್ ||
ಅಂತು ವಿನತನಾಗಿ ರಾಮ ಪ್ರೇಮ ವಚನಾಮೃತ ವರ್ಷದಿಂ ಹರ್ಷಮಂ
ತಾಳಿ ಮುಕುಲಿತಾಂಜಲಿಪುಟಂ ಮುಂದೆ ನಿಂದಿಂತೆಂದಂ-
ಕಂ|| ಅಪರಿಮಿತ ಸೈನಿಕಂ ಸಿಂ
ಹಪರಾಕ್ರಮವೆತ್ತಿ ಬಂದು ಸಿ೦ಹೋದರನೆ ||