ಈ ಪುಟವನ್ನು ಪ್ರಕಟಿಸಲಾಗಿದೆ



ಅಷ್ಟಮಾಶ್ವಾಸಂ
೨೦೭

ಎಂದು ಗಜ ಗರ್ಜಿಸುವುದುಮತಿವೀರನೊಳ್ ಕೂಡಿ ಭರತನೊಳ್ ಕಾದ
ಲೆಂದು ಬಂದನ್ಯರಾಜನಕದೊಳ್ ವಿಜಯನಿವನಜೇಯನೆಂದು ಮನಂಗುಂದೆಯುಂ,
ಶಾರ್ದೂಲಂ ಶಾರ್ದೂಲನಂ ಕಂಡ ತೋಳನಂತೊಳಸೋರ್ದು ಸಮರಮುಖ
ವಿಮುಖ ನಾಗೆಯುಂ, ಮೃಗಧ್ವಜಂ ಮೃಗಧ್ವಜನೆನಿಸೆಯುಂ, ರಥೋರ್ಮಿ ಭಯರಸೋರ್ಮಿ
ಯಂ ನೂರ್ಮಡಿಸೆಯುಂ, ಕಲಭಂ ಕುಸುಮಿತ .ಚಂಪಕಾನೋಕಹಮಂ ಕಂಡಳಿ
ಕಲಭದಂತೆ ಮೊಗಂದಿರಿಸೆಯುಂ, ಕೇಸರಿ ಕೇಸರಿಯಂ ಕಂಡ ಕಾಡಾನೆಯಂ
ತೋಸರಿಸೆಯುಂ, ವಜ್ರಧರನಧರನಾಗೆಯುಂ, ಭದ್ರಂ ಭದ್ರಗಜದ ಕಣ್ಮುಟ್ಟಿನೊಳಿರ್ದ
ಫಣಿಯಂತೆ ಮಣಿಯೆಯುಂ, ಸುಭದ್ರನಭದ್ರನೆನಿಸೆಯುಂ, ನಂದನಂ ರಣರಸಾ
ಸ್ವಾದನಾನಂದನಮನುಲಿಯೆಯುಂ, ಅವಾಕ್ಯವೀರಂ ಶೌರಂಗಿಡೆಯುಂ, ಮಾರಿದ
ತನನುದಾತ್ತನೆನಿಸೆಯುಂ, ಲಂಬೋಷ್ಠಂ ರಕ್ಷರಕ್ಷ ರವ ಮುಕ್ಕೋಷ್ಠನಾಗೆಯುಂ,
ಪ್ರೋಷ್ಠಿಲಂ ಪ್ರತಿಷ್ಠೆ ಗಿಡೆಯು೦, ಮತ್ತಂ ಪೆರುಮಣಿಕೆಯ ನರೇಂದ್ರನಂದನರ್
ಪಾವಡರ್ದ ಪ೦ದೆಯಂತೆವೆಮಿಡುಕದಿರೆಯುಂ-

ಮ | ಅತಿವೀರಂ ಹತವೀರನಾದನಿವನಂ ಕೊಂಡುಯ್ದ ಸೆಂ ದೋಷ ದೂ |
ಷಿತನಂ ದೋರ್ಬಲಮುಳ್ಳರುಡೆನಗಡ್ಡಂಬರ್ಪುದೆ೦ದಭ್ರ ಗ
ರ್ಜಿತವೆಂಬಂತಿರೆ ಗರ್ಜಿಸುತ್ತು ಮೆದುಯ್ದಂ ಲಕ್ಷಣಂ ಹಸ್ತ ಪಾ |
ದ ತ ಟ್ಟನದಿಂ ಪಡಲ್ವಡಿಸುತುಂ ಮಾಜಶಾಂತ ಸಾಮಂತರಂ || ೩೧ ||

ಕಡುಕೆಯ್ಯಂ ಭರತ೦ಗಿವಂ ಗಡ ರಣಕ್ರೀಡಾ ರಸಕ್ಕಲಿಗಂ |
ಗಡ ಸಾಕೇತ ಪುರಾಧಿರಾಜ ಪದಮಂ ಕೈಕೊಳ್ವೆನೆಂದೆತ್ತುವಂ ||
ಗಡ ದುರ್ಲಖಮನಟ್ಟುವಂ ಗಡೆನುತುಂ ಆಡಾಡಿ ಪುಲ್ಲೊಡನಂ |
ಪಿಡಿದುಯ್ದಂತೆವೊಲುದ್ದ ನಪ್ರತಿಹತಂ ಸೌಮಿತ್ರಿ ಶತ್ರುಂಜಯಂ || ೩೨ ||

ಅಂತತಿವೀರನನಂತವೀರನೆ ಎಳೆದು ತಂದೊಪ್ಪಿಸುವುದುಂ

ಶಾ || ಏವೇತ್ವಂ ಬಲನಿಂ ಕೃಪಾಳು ಪೆಟಿರಾರಾದ್ರೋಹನಂ ಕಂಡು ರೋ |
ವೇಶಂ ತನಗಾದುದೇ ಭರತನಂ ಶತ್ರುಘ್ರನಂ ಕಂಡು ನಂ |
ದ್ಯಾವರ್ತಕ್ಕಧಿರಾಜನಾಗಿ ಸುಖದಿಂ ನೀನಿರ್ಪುದೆಂದಂ ಪರಾ |
ಸ್ಥಾವಷ್ಟಂಭಮನಸ್ಸು ಕೆಯ್ದ ವರ್ಗ ಮೈತ್ರೀಭಾವಮಾಶ್ಚರ ಮೇ || ೩೩ ||

ಕಂ || ಅರಸುತನದಲ್ಲಿ ಪಿಂಗಿದು
ದು ರಾಜ್ಯ ಮಂ ನಿಮ್ಮ ಮೆಚ್ಚಿದವಗಿ೯ವುದಿದಂ ||
ಪರಿಹರಿಸಿದೆನಾನಿನ್ನೆ೦
ದು ರಾಮಲಕ್ಷ್ಮಣರನಾ ನೃಪಂ ಕ್ಷಮೆಗೊಂಡಂ || ೩೪ ||


1. ದಿರಿಯೆಯು , ಚ.