ಈ ಪುಟವನ್ನು ಪ್ರಕಟಿಸಲಾಗಿದೆ

14

ಪ೦ಪರಾಮಾಯಣದ ಕಥೆ

ಧಾನಪಡಿಸಿ ಅವರನ್ನು ಹಿಂದಕ್ಕೆ ಕಳುಹಿಸಿದನು. ತರುವಾಯ ತಾವೆಲ್ಲರೂ ಮಲಗಿ ನಿದ್ದೆ ಮಾಡಿ ಮಧ್ಯರಾತ್ರಿಯಲ್ಲಿದ್ದು ಜಿನಪತಿಯನ್ನು ಬೀಳ್ಕೊಂಡು ಬಿಲ್ಲನ್ನೂ ಅ೦ಬುಗಳನ್ನೂ ಹಿಡಿದು ಸೀತೆಯನ್ನು ನಡೆಸಿಕೊಂಡು ಪಟ್ಟಣದ ದಿಡ್ಡಿಯ ಬಾಗಿ ಲಿಂದ ಹೊರಟು ದಕ್ಷಿಣಾಭಿಮುಖವಾಗಿ ಪ್ರಯಾಣ ಮಾಡಿದರು. ಅವರ ಹಿಂದೆಯೇ ಬರುತ್ತಿರುವ ಅನೇಕ ಸಾಮಂತರೊಡನೆ ಮಾತನಾಡುತ್ತ ಅವರನ್ನು ನಿಲ್ಲುವಂತೆ ಹೇಳುತ್ತ ರಾಮನು, ಸೀತೆ ನಡೆಯಲಾರಳೆಂದು ಮೆಲ್ಲಗೆ ನಡೆಯುತ್ತಿರುವೆವೆಂದು ತಿಳಿಸಿ, ಗಂಭೀರ ತರಂಗಿಣಿಯು ಅಡ್ಡವಾಗಿ ಬರಲು, ಸಾಮಂತಾದಿಗಳನ್ನು ಅಲ್ಲಿ ನಿಲ್ಲುವಂತೊಡಂಬಡಿಸಿ ಹರಿಗೋಲಿನಲ್ಲಿ ತೊರೆಯನ್ನು ದಾಟ ಸೀತಾಲಕ್ಷ್ಮಣರೊಡನೆ ಹೊರಟುಹೋದನು. ಹಿ೦ದೆ ಬರುತ್ತಿದ್ದ ಕೆಲವರು, ಈ ಕಾರಣದಿಂದ ವೈರಾಗ್ಯ ಪರ ರಾಗಿ, ಅಲ್ಲಿಯ ಜಿನಾಗಾರದಲ್ಲಿದ್ದ ಶತಕೇತು ಗಣಧರರ ಬಳಿಯಲ್ಲಿ ದೀಕ್ಷೆಗೊಂಡರು ; ಉಳಿದವರು ಸಾಕೇತ ಪುರವನ್ನು ಸೇರಿದರು.
ಇದನ್ನು ಕೇಳಿ ದಶರಥನು ದೀಕ್ಷೆಗೊಂಡನು ; ಭರತನು ರಾಜ್ಯ ಸುಖ ನಿರತನಾದನು. ಅಪರಾಜಿತೆಯು ಉದಾತ್ತ ರಾಘವನ ವನಪ್ರವೇಶ ಕೇಶಾಯಾಸ ವನ್ನು ನೆನೆ ನೆನೆದು ಕಣ್ಣೀರು ಸುರಿಸುತ್ತ ಗದ್ಗದ ಕಂಠಯಾಗಿ ಸುಕುಮಾರಿಯಾದ ಸೀತೆಯು ಆ ಕಷ್ಟವನ್ನು ಹೇಗೆ ಸೈರಿಸುವಳೆಂದು ಹಂಬಲಿಸತೊಡಗಿದಳು. ಇದನ್ನು ನೋಡಿ ಸುಮಿತ್ರೆಯೂ ಶೋಕಿಸುತ್ತಿರಲು, ಕೈಕೆಯು ಕೇಳಿ “ ನನ್ನಿಂದ ಇಷ್ಟು ದುಃಸ್ಥಿತಿ ಬಂದಿತ್ತಲ್ಲವೆ ? ಸತಿಯು ದೀಕೈಗೊಂಡನು, ಅಪರಾಜಿತೆಗೆ ದುಃಖವು ಸಹಿಸದಂತಾಯಿತು, ಮಗನು ರಾಜ್ಯ ಸುಖವನ್ನು ಲೆಕ್ಕಿಸದೆ ಹೋದನು, ಇವೆಲ್ಲ ವನ್ನೂ ಪ್ರೀತ ದ ಜಡತ್ವದಿಂದ ಮಾಡಿದೆನಲ್ಲವೆ ? ” ಎಂದು ಹೆಚ್ಚಾಗಿ ಶೋಕಗೊಂಡು ತನ್ನನ್ನು ತಾನೇ ನಿಂದಿಸಿಕೊಂಡಳು ; ಆಗ ಭರತನನ್ನು ಕರೆಯಿಸಿ ರಾಮಲಕ್ಷ್ಮಣ ರಿಲ್ಲದೆ ರಾಜ್ಯವು ಶೋಭಿಸದೆಂದೂ ಅವರ ತಾಯಿಯರು ಅವರ ವಿಯೋಗದಿಂದ ಪ್ರಾಣತ್ಯಾಗಮಾಡುವರೆಂದೂ ಹಾಗಾಗದಂತೆ ತಾನು ಬೇಗ ಹೋಗಿ ರಾಮ ಲಕ್ಷ್ಮಣರು ಮುಂದಕ್ಕೆ ಹೋಗದಂತೆ ತಡೆಯಬೇಕೆಂದೂ ತಾನೂ ಜೊತೆಯಲ್ಲಿ ಬರುವೆನೆಂದೂ ಹೇಳಿದಳು. ಅದಕ್ಕೆ ಭರತನು ಒಪ್ಪಿ ತಾಯಿಯೊಡಗೂಡಿ ಸಾಮಂತ ರೊಡನೆ ತೊರೆಯನ್ನು ದಾಟಿ ಅಡವಿಯಲ್ಲಿ ಜಾನಕಿಯ ಮಾರ್ಗಾಯಾಸವನ್ನು ಆರಿಸುತ್ತಿದ ರಾಮನನ್ನು ಕಂಡು ಅವನ ಕಾಲ ಮೇಲೆ ಬಿದ್ದು ಮೂರ್ಛ ಹೋಗಿ ಕೂಡಲೆ ಎಚ್ಚತ್ತು ಸೀತೆಗೂ ರಾಮನಿಗೂ ನಮಸ್ಕಾರಮಾಡಿ, ಅಕ್ರಮದಿಂದ ಬಂದ ರಾಜ್ಯವನ್ನು ತಾನೊಲ್ಲೆನೆಂದು ಹೇಳುತ್ತಿರುವಲ್ಲಿ, ಕೈಕೆಯು ಬರುತ್ತಿರುವು ದನ್ನು ರಾಮನು ಕಂಡನು. ಕೂಡಲೆ ಎದ್ದು ಹೋಗಿ ರಾಮನು ಭಕ್ತಿಯಿಂದ ಕೈಕೆಯ ಪಾದಗಳಿಗೆರಗಲು ಕೈಕೆಯು ತಾನು ಮಾಡಿದ ಅನ್ಯಾಯಕ್ಕಾಗಿ ಬಹಳ ನೊಂದು ಮಗನನ್ನು ಎತ್ತಿ ಪ್ರೀತಿಸಿ ಬಹಳವಾಗಿ ಪ್ರಲಾಪಿಸಿ, ತಾನು ಮಾಡಿದ